ಲೋಕದರ್ಶನ ವರದಿ
ವಿಜಯಪುರ 24: ಬಿ.ಜೆ.ಪಿ. ಜಿಲ್ಲಾ ಘಟಕದ ವತಿಯಿಂದ ಮೈತ್ರಿ ಸರ್ಕಾರ ಪತನಗೊಂಡ ಹಿನ್ನೆಲೆಯಲ್ಲಿ ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಪ್ರಧಾನಿ ನರೇಂದ್ರ ಮೋದಿ, ಅಮೀತ ಶಾ ಹಾಗೂ ಬಿ.ಎಸ್. ಯಡಿಯೂರಪ್ಪನವರ ಪರವಾಗಿ ಜಯಕಾರ ಕೂಗಿ ವಿಜಯೋತ್ಸವ ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ಚಂದ್ರಶೇಖರ ಮಾತನಾಡಿ ಅಪವಿತ್ರ ಮೈತ್ರಿ ಸರ್ಕಾರ ಕೊನೆಗೆ ಪತನವಾಯಿತು. ಎಚ್.ಡಿ. ಕುಮಾರಸ್ವಾಮಿಯವರ ಬ್ರಷ್ಟ ಆಡಳಿತಕ್ಕೂ ಕೊನೆಯಾಯಿತು. ಬಹುಮತ ಇಲ್ಲದಿದ್ದರೂ 14 ದಿನಗಳ ಕಾಲ ಅಧಿಕಾರಕ್ಕಾಗಿ ಪಟ್ಟು ಹಿಡಿದು ಕುಳಿತಿದ್ದ ಜೆ.ಡಿ.ಎಸ್. ಕಾಂಗ್ರೇಸ ಪಕ್ಷದವರಿಗೆ ತೀವ್ರ ಮುಖಭಂಗವಾಗಿದೆ. ನೆಚ್ಚಿನ ನಾಯಕ ಬಿ.ಎಸ್. ಯಡಿಯೂರಪ್ಪನವರ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿರುವದು ಖುಷಿಯ ಸಂಗತಿ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಕಾಸುಗೌಡ ಬಿರಾದಾರ ಸಹ ಮಾತನಾಡಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೇಟ್ಟಿ, ಪ್ರಕಾಶ ಅಕ್ಕಲಕೋಟ, ಸುರೇಶ ಬಿರಾದಾರ, ಜಿ.ಪ್ರಧಾನ ಕಾರ್ಯದರ್ಶಿ ವಿವೇಕನಾಂದ ಡಬ್ಬಿ, ಶಿವರುದ್ರ ಬಾಗಲಕೋಟ, ಭೀಮಾಶಂಕರ ಹದನೂರ, ರಾಜು ಬಿರಾದಾರ, ರಾಮ ಹೊಸಪೇಟ, ಮಳುಗೌಡ ಪಾಟೀಲ, ರಾಜೇಶ ದೇವಗಿರ, ಬಸವರಾಜ ಬೈಚಬಾಳ, ವಿಜಯ ಜೋಶಿ, ಸಿದ್ದು ಮಲ್ಲಿಕಾಜರ್ುನಮಠ, ವಿನಾಯಕ ದಹಿಂಡೆ, ಮಹೇಶ ಒಡೆಯರ, ರಾಜೇಶ ತಾವಸೆ, ವಿಠ್ಠಲ ನಡುವಿನಕೇರಿ, ರವಿ ಬಿರಾದಾರ ನಾಗಠಾಣ, ಮಲ್ಲಮ್ಮ ಜೋಗೂರ, ಸುಮಂಗಲಾ ಕೋಟಿ, ಭಾರತಿ ಶಿವಣಗಿ, ಅಶ್ವಿನಿ ಪಟ್ಟಣಶೆಟ್ಟಿ, ಗೀತಾ ಕುಗನೂರ, ಶಾಂತಾ ಉತ್ಲಾಸಕರ, ಭಾರತಿ ಸೂರ್ಯವಂಶಿ, ಪಾಪುಸಿಂಗ ರಜಪೂತ, ಪ್ರಮೋದ ಬಡಿಗೇರ, ಚಿದಾನಂದ ಔರಂಗಬಾದ, ರವಿ ಕೋಟೆನ್ನವರ, ಕೃಷ್ಣಾ ಗುನ್ಹಾಳಕರ, ರಾಜಕುಮಾರ ಸಗಾಯಿ, ನಿಲೇಶ ಶಾ, ರಾಜು ಸೂರ್ಯವಂಶಿ, ಸಂಗಮೇಶ ಉಕ್ಕಲಿ, ಸತೀಶ ಪಾಟೀಲ, ಉಮೇಶ ವೀರಕರ, ರಾಹುಲ ಔರಂಗಬಾದ, ಅನೀಲ ಉಪ್ಪಾರ, ಸಂದೀಪ ಪಾಟೀಲ, ವಾರಿಶ ಕುಲಕಣರ್ಿ, ರಮೇಶ ಕದ್ರಿ ಹಾಗೂ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.