ವಿಜಯಪುರ: ಅಮೃತ ಯೋಜನೆ ಪೂರ್ಣಗೊಳಿಸಿ 2 ದಿನಕ್ಕೊಮ್ಮೆ ನೀರು ಪೂರೈಸಿ: ಯು.ಟಿ.ಖಾದರ

ಲೋಕದರ್ಶನ ವರದಿ

ವಿಜಯಪುರ 04: ಅಮೃತ ಯೋಜನೆಯಡಿ ಬಾಕಿ ಇರುವ 11 ವಲಯಗಳಲ್ಲಿ ಆಗಸ್ಟ್ದಿಂದ ಪ್ರಾಯೋಗಿಕವಾಗಿ 24/7 ನೀರು ಪೂರೈಸಲು ಆರಂಭಿಸಿ ಯೋಜನೆಯನ್ನು ಶೀಘ್ರ ಪೂರ್ಣಗೊಳಿಸಿ ಮುಂಬರುವ ಜನವರಿ ಮಾಹೆಯಿಂದ 2 ದಿನಕ್ಕೊಮ್ಮೆ ನೀರು ದೊರಕಿಸಲು ಕಾರ್ಯನಿರ್ವಹಿಸುವಂತೆ ನಗರಾಭಿವೃದ್ದಿ ಖಾತೆ ಸಚಿವರಾದ ಯು.ಟಿ.ಖಾದರ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು. 

ನಗರದ ನಗರಾಭಿವೃದ್ದಿ ಪ್ರಾಧಿಕಾರದ ಕಚೇರಿ ಸಭಾಂಗಣದಲ್ಲಿಂದು ಜರುಗಿದ ವಿಜಯಪುರ ಮಹಾನಗರ ಪಾಲಿಕೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಜಿಲ್ಲೆಯಲ್ಲಿ ನೀರಿನ ಕೊರತೆ ಇಲ್ಲ. ಆದರೆ ವ್ಯವಸ್ಥಿತ ಯೋಜನೆಯ ಕೊರತೆಯಿಂದಾಗಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ. ನಗರ ನೀರು ಸರಬರಾಜು ಮಂಡಳಿ ಅಧಿಕಾರಿಗಳು ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಿ ನೀರಿನ ಕೊರತೆ ನೀಗಿಸಿ ಜನರಿಗೆ ಕುಡಿಯುವ ನೀರು ಪೂರೈಸುವಂತೆ ಸೂಚನೆ ನೀಡಿದರು. 

ಈಗಾಗಲೇ 24/7 ಕುಡಿಯುವ  ನೀರಿನ ಸಂಪರ್ಕ ಕಲ್ಪಿಸಿರುವ ಪ್ರದೇಶಗಳಲ್ಲಿ ಬಳಕೆ ಮಾಡಿದ ನೀರಿನ ಪ್ರಮಾಣಕ್ಕಿಂಡ ಹೆಚ್ಚಿನ ಬಿಲ್ಲನ್ನು ಆಕರಣೆ ಮಾಡುತ್ತಿರುವ ದೂರುಗಳು ಬಂದಿದ್ದು, ಅವುಗಳನ್ನು ತಡೆ ಹಿಡಿದು ನಿಗದಿತ ಮೊತ್ತ 175 ರೂ. ಮಾತ್ರ ಆಕರಣೆ ಮಾಡಿ, ಬರುವ ಆಗಸ್ಟ್ದಿಂದ ಬಳಕೆ ಮಾಡಿದ ಪ್ರಮಾಣಕ್ಕೆ ಬಿಲ್ಲನ್ನು ಒದಗಿಸಲು ಕ್ರಮ ಕೈಗೊಳ್ಳಬೇಕು. ಎರಡು ಹಂತದಲ್ಲಿ ಜಾರಿಗೊಂಡಿರುವ ಅಮೃತ ಯೋಜನೆಯಡಿ 24/7 ನೀರನ್ನು ಬರುವ ಜನವರಿ ಮಾಹೆಯಿಂದ ಪ್ರತಿ ಎರಡು ದಿನಕ್ಕೊಮ್ಮೆ ಜನರಿಗೆ ದೊರಕಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯಪ್ರವೃತ್ತರಾಗುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ವಿಜಯಪುರ ನಗರವು ಪಾರಂಪರಿಕ ತಾಣಗಳ ನಗರವಾಗಿದ್ದು, ಸುವ್ಯವಸ್ಥಿತ ರಸ್ತೆಗಳನ್ನೊಳಗೊಂಡು ಮೂಲಭೂತ ಸೌಕರ್ಯಗಳನ್ನು ಒದಗಿಸಿ, ಮುಂದಿನ ದಿನಗಳಲ್ಲಿ ವಿಜಯಪುರ ನಗರವನ್ನು ಟೂರಿಸಂ ಹಬ್ವನ್ನಾಗಿ ಪರಿವರ್ತಿಸಲು ಸಲಹೆ ನೀಡಿದರು. 

ನಗರದಲ್ಲಿ ಜನಸಂಖ್ಯೆ ಪ್ರಮಾಣ ಕಡಿಮೆ ಇದ್ದರೂ ಪಾಲಿಕೆ ವರಮಾನ ಉತ್ತಮವಾಗಿದೆ. ಅದನ್ನು ಅಭಿವೃದ್ದಿ ಕಾಮಗಾರಿಗಳಿಗೆ, ಘನತ್ಯಾಜ್ಯ ನಿರ್ವಹಣೆಯಂತಹ ಕಾರ್ಯಗಳಿಗೆ ಬಳಸಬೇಕು. 24/7 ಕಾಮಗಾರಿ ಪೂರ್ಣಗೊಳ್ಳುವ ತನಕ  ಜನಸಂಖ್ಯೆ ಹೆಚ್ಚಿರುವ ವಾರ್ಡಗಳಲ್ಲಿ 24/7 ನೀರು ಹಾಗೂ ಜಾಮೀಯಾ ಮಸೀದಿ ವಾರ್ಡದಲ್ಲಿನ ಓವರ್ ಹೆಡ್ ಟ್ಯಾಂಕ್ ಮೂಲಕ ನೀರು ಪೂರೈಸುವ ಕಾರ್ಯವನ್ನು ಶೀಘ್ರ ಪೂರ್ಣಗೊಳಿಸುವಂತೆ ಸೂಚನೆ ನೀಡಿದರು.

ನಗರದ 63 ಸಾವಿರ ಮನೆಗಳಿಗೆ 24/7 ನೀರು ಸರಬರಾಜುಗೆ ಕ್ರೀಯಾ ಯೋಜನೆ ಸಿದ್ಧವಾಗಿದ್ದು, ಈ ಯೋಜನೆ ಪೂರ್ಣಗೊಂಡ ನಂತರ ಇದಕ್ಕೆ ಸಂಬಂಧಿಸಿದಂತೆ ವಾರ್ಡವಾರು ಇಂಜಿನೀಯರ್, ಪಾಲಿಕೆ ಸದಸ್ಯರು, ಸಂಬಂಧಪಟ್ಟ ಅಧಿಕಾರಿಗಳ ಹೆಸರು ದೂರವಾಣಿ ಸಂಖ್ಯೆ ಒಳಗೊಂಡ ವಿವರವಾದ ಮಾಹಿತಿವುಳ್ಳ ಭಿತ್ತಿಪತ್ರವನ್ನು ಮುದ್ರಿಸಿ ಪ್ರತಿ ಮನೆ- ಮನೆಗೆ ಅಂಟಿಸುವಂತೆ ತಿಳಿಸಿದ ಅವರು, ಇದರಿಂದ ಸಾರ್ವಜನಿಕರಿಗೆ ನೀರಿನ ಸಮಸ್ಯೆ, ದೂರು ಸಲ್ಲಿಸಲು ಅನೂಕೂಲವಾಗಲಿದೆ ಎಂದು ಹೇಳಿದರು. 

ಸಭೆಯಲ್ಲಿ ತೋಟಗಾರಿಕೆ ಖಾತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಸಿ.ಮನಗೂಳಿ, ಶಿಕ್ಷಣ ಇಲಾಖೆ ಸಂಸದೀಯ ಕಾರ್ಯದಶರ್ಿಗಳಾದ ಶಾಸಕ ದೇವಾನಂದ ಚವ್ಹಾಣ, ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ, ಮಹಾನಗರ ಪಾಲಿಕೆ ಮಹಾಪೌರ ಶ್ರೀದೇವಿ ಲೋಗಾಂವಿ, ಉಪಮೇಯರ ಗೋಪಾಲ ಘಟಕಾಂಬಳೆ, ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ, ನಗರಾಭಿವೃದ್ದಿ ಪ್ರಾಧಿಕಾರದ ಆಯುಕ್ತ ಸಿದ್ದನಕೊಳ್ಳ, ಮಹಾನಗರ ಪಾಲಿಕೆ ಆಯುಕ್ತ ಡಾ.ಔದ್ರಾಮ, ನಗರಾಭಿವೃದ್ದಿ ಕೋಶದ ಯೋಜನಾ ನಿದರ್ೇಶಕ ವಿರೇಶಕುಮಾರ, ಸೇರಿದಂತೆ ಪಾಲಿಕೆ ಸದಸ್ಯರು ಇತರರು ಉಪಸ್ಥಿತರಿದ್ದರು.