ವಿಜಯಪುರ: ಡಿಸಿಸಿ ಬ್ಯಾಂಕ್ 13.03 ಕೋಟಿ ರೂ. ನಿವ್ವಳ ಲಾಭ

ಲೋಕದರ್ಶನ ವರದಿ

ವಿಜಯಪುರ 27: ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಪ್ರಸಕ್ತ ಆರ್ಥಿಕ ವರ್ಷತ್ಯಕ್ಕೆ 13.03 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷರೂ ಹಾಗೂ ಬಸವನ ಬಾಗೇವಾಡಿ ಕ್ಷೇತ್ರದ ಶಾಸಕರೂ ಆದ ಶಿವಾನಂದ ಪಾಟೀಲ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬ್ಯಾಂಕಿನ ಲಾಭಾಂಶ ಹಾಗೂ ಆಥರ್ಿಕ ಪ್ರಗತಿ ಕುರಿತು ವಿವರಣೆ ನೀಡಿದ ಅವರು, ಪ್ರಸಕ್ತ ಆರ್ಥಿಕ ವರ್ಷದಲ್ಲಿ ಡಿಸಿಸಿ ಬ್ಯಾಂಕ್ ಗಳಿಸಿದ ಲಾಭವು ಬ್ಯಾಂಕಿನ ಇತಿಹಾಸದಲ್ಲಿಯೇ ದಾಖಲಾರ್ಹ ಸಾಧನೆಯಾಗಿದೆ. ಇದು ಕಳೆದ 99 ವರ್ಷಗಳಲ್ಲಿಯೇ ಅತೀ ಹೆಚ್ಚಿನ ಲಾಭವಾಗಿದೆ ಎಂದರು.

ಬ್ಯಾಂಕು ಪ್ರಗತಿಪಥದತ್ತ ಮುನ್ನಡೆಯುತ್ತಿದ್ದು, ಪ್ರಸಕ್ತ ಆರ್ಥಿಕ ವರ್ಷದ ಅಂಕಿ ಅಂಶಗಳನ್ನು ಅವಲೋಕಿಸಲಾಗಿ  104.61ಕೋಟಿ ರೂ. ಷೇರು ಬಂಡವಾಳ ಹೊಂದಿದ್ದು, ಕಳೆದ ಬಾರಿಗಿಂತ ಶೇ.9.62 ಕೋಟಿ ರೂ. ಹೆಚ್ಚಳವಾಗಿದೆ, ಅದರಂತೆ 208.53ಕೋಟಿ ರೂ. ನಿಧಿ ಹೊಂದಿದ್ದು, ಕಳೆದ ಬಾರಿಗಿಂತ 6.79 ಕೋಟಿ ರೂ. ಹೆಚ್ಚಿನ  ನಿಧಿ ಇದೆ. 2869.06 ಕೋಟಿ ರೂ. ದುಡಿಯುವ ಬಂಡವಾಳ ಹೊಂದಿದೆ ಎಂದು ವಿವರಿಸಿದರು.

ಕೃಷಿ ಪ್ರಗತಿಯನ್ನೇ ಧ್ಯೇಯವಾಗಿರಿಸಿಕೊಂಡಿರುವ ಬ್ಯಾಂಕು ಕೃಷಿ ಉದ್ದೇಶಕ್ಕಾಗಿ 857.18ಕೋಟಿ ರೂ. ಸಾಲ ಪಾವತಿಸಿದ್ದು, ಕೃಷಿಯೇತರ ಉದ್ದೇಶಗಳಿಗಾಗಿ 826.08 ಕೋಟಿ ರೂ. ಸೇರಿದಂತೆ ಒಟ್ಟು 1683.26 ಕೋಟಿ ರೂ. ಸಾಲ ವಿತರಣೆ ಮಾಡಿದೆ.

ಅದರಂತೆ ಸಾಲ ವಸೂಲಾತಿ ಪ್ರಮಾಣವೂ ಸಹ ಉತ್ತಮವಾಗಿದ್ದು, ಕೃಷಿ ಸಾಲ ವಸೂಲಾತಿ ಶೇ.98.14 ರಷ್ಟಾಗಿದ್ದು, ಕೃಷಿಯೇತರ ಸಾಲ ವಸೂಲಾತಿ ಪ್ರಮಾಣ ಶೇ.86.78 ರಷ್ಟಾಗಿದೆ ಎಂದರು. 

ರೈತರು ಸಹಕಾರ ಸಂಘಗಳಿಂದ, ಬ್ಯಾಂಕುಗಳಿಂದ ಪಡೆದ ಸಾಲ ದಿ.20-6-2017 ಕ್ಕೆ ಇರುವ ಹೊರಬಾಕಿಯಲ್ಲಿ ಗರಿಷ್ಠ ರೂ. 50 ಸಾವಿರ ರೂ.ಗಳವರೆಗೆ ಸಾಲಮನ್ನಾ ಮಾಡಿದೆ. ಈ ಯೋಜನೆಯಡಿ ಬ್ಯಾಂಕ್ ಹಾಗೂ ಪ್ಯಾಕ್ಸುಗಳಿಂದ ಬೆಳೆ ಸಾಲ ಪಡೆದ ಒಟ್ಟು 1,84,452 ರೈತರಿಂದ ಬರತಕ್ಕ ಒಟ್ಟು ಸಾಲ ಬಾಕಿ ರೂ. 838.01 ಕೋಟಿ ರೂ.ಗಳಷ್ಟಿದ್ದು, ಈ ಪೈಕಿ 685.48 ಕೋಟಿ ರೂ. ಮನ್ನಾ ಅರ್ಹತೆ ಇದ್ದು, ಇದರ ಪೈಕಿ 1.84 ಲಕ್ಷ ರೈತರಿಗೆ 680.18 ಕೋಟಿ ರೂ. ಹಣ ಬಿಡುಗಡೆಯಾಗಿದೆ.

ಅದರಂತೆ ಪ್ರಸ್ತುತ ರಾಜ್ಯ ಸರ್ಕಾರ ರೈತರ ಸಹಕಾರಿ ಸಂಘ ಹಾಗೂ ಬ್ಯಾಂಕುಗಳಿಂದ ಬೆಳೆ ಸಾಲ ಪಡೆದು ದಿನಾಂಕ 10-7-2018 ಕ್ಕೆ ಹೊರಬಾಕಿಯಲ್ಲಿ ಪ್ರತಿ ಕುಟುಂಬಕ್ಕೆ ಗರಿಷ್ಠ ರೂ. 1 ಲಕ್ಷ ರೂ.ಗಳವರೆಗೆ ಬೆಳೆ ಸಾಲ ಮನ್ನಾ ಮಾಡಿದೆ. ಈ ಯೋಜನೆಯಡಿಯಲ್ಲಿ ಷರತ್ತುಗೊಳಪಟ್ಟು ಫ್ಯಾಕ್ಸು ಹಾಗೂ ಜಿಲ್ಲಾ ಬ್ಯಾಂಕ್ನಿಂದ ಬೆಳೆ ಸಾಲ ಪಡೆದ ಒಟ್ಟು 160748 ರೈತರ 670.03 ಕೋಟಿ ರೂ. ಸಾಲ ಮನ್ನಾ ಸೌಲಭ್ಯತೆ ಇರುವುದು ಬ್ಯಾಂಕಿನ ಮೇ.2019 ರವರೆಗೆ 1,38,997 ರೈತರಿಗೆ ಸಂಬಂಧಿಸಿದಂತೆ ಒಟ್ಟು 575.17 ಕೋಟಿ ರೂ. ಕ್ಲೇಮ್ ಸಲ್ಲಿಸಲಾಗಿದ್ದು, ಇದುವರೆಗೆ 67,465 ರೈತರಿಗೆ 257.61 ಕೋಟಿ ರೂ. ಮನ್ನಾ ಹಣ ಬಿಡುಗಡೆಯಾಗಿದೆ ಎಂದು ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ರಾಜಶೇಖರ ಗುಡದಿನ್ನಿ, ನಿದರ್ೇಶಕಿ ಸಂಯುಕ್ತಾ ಪಾಟೀಲ, ವೃತ್ತಿಪರ ನಿದರ್ೇಶಕ ಎಂ.ಜಿ.ಪಾಟೀಲ ಮುಂತಾದವರು  ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.