ಲೋಕದರ್ಶನ ವರದಿ
ವಿಜಯಪುರ 18: ಗ್ರಾಮ ಲೆಕ್ಕಾಧಿಕಾರಿಗಳಿಗೆ ಅನ್ಯ ಇಲಾಖೆಯ ಕಾರ್ಯಚಟುವಟಿಕೆಗಳ ಒತ್ತಡದಿಂದ ಮುಕ್ತಗೊಳಿಸಬೇಕು. ಮುಂಬಡ್ತಿಯಲ್ಲಿ ಆಗುತ್ತಿರುವ ಅನ್ಯಾಯ ಸರಿಪಡಿಸಬೇಕೆಂದು ಆಗ್ರಹಿಸಿ ವಿಜಯಪುರ ಜಿಲ್ಲಾ ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ನೇತೃತ್ವದಲ್ಲಿ ಜಿಲ್ಲೆಯ ಗ್ರಾಮ ಲೆಕ್ಕಾಧಿಕಾರಿಗಳು ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಡಾ.ಬಿ.ಆರ್. ಅಂಬೇಡ್ಕರ ವೃತ್ತದಿಂದ ಪ್ರತಿಭಟನಾ ರ್ಯಾಲಿ ನಡೆಸಿದ ಗ್ರಮಲೆಕ್ಕಾಧೀಕಾರಿಗಳು ಜಿಲ್ಲಾಧಿಕಾರಿಗಳ ಮುಖಾಂತರ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಆರ್.ಬಿ. ಬಡಿಗೇರ ಅವರು ಮಾತನಾಡಿ, ಗ್ರಾಮ ಲೆಕ್ಕಾಧಿಕಾರಿಗಳಿಗೆ ಅನ್ಯ ಇಲಾಖೆಯ ಕೆಲಸವನ್ನು ವಹಿಸಲಾಗುತ್ತಿದೆ. ಇದರಿಂದಾಗಿ ಗ್ರಾಮ ಲೆಕ್ಕಾಧಿಕಾರಿಗಳು ಕೆಲಸದ ಒತ್ತಡವನ್ನು ಅನುಭವಿಸುವಂತಾಗಿದೆ. ರಜಾದಿನಗಳಲ್ಲಿಯೂ ಸಹ ಕೆಲಸದ ಒತ್ತಡ ಅಧಿಕವಾಗಿರುವುದು ಗ್ರಾಮ ಲೆಕ್ಕಾಧಿಕಾರಿಗಳನ್ನು ಇಕ್ಕಟ್ಟಿಗೆ ಸಿಲುಕಿಸಿದೆ ಎಂದರು.
ಅನ್ಯ ಇಲಾಖೆಯ ಕೆಲಸದ ಒತ್ತಡವನ್ನು ಕಡಿತಗೊಳಿಸುವುದು, ರಜಾದಿನದಲ್ಲಿ ಯಾವುದೇ ಹೆಚ್ಚುವರಿ ಕೆಲಸಗಳನ್ನು ನೀಡದಂತೆ ಸ್ಪಷ್ಟ ಸೂಚನೆ ನೀಡುವುದು, ಗ್ರಾಮ ಲೆಕ್ಕಾಧಿಕಾರಿಗಳ ಮುಂಬಡ್ತಿಯಲ್ಲಿ ಆಗಿರುವ ಅನ್ಯಾಯವನ್ನು ಸರಿಪಡಿಸುವುದು ಹಾಗೂ ಇಲಾಖೆಯ ದ್ವಿತೀಯ ದರ್ಜಿ ಸಹಾಯಕ, ಗ್ರಾಮ ಲೆಕ್ಕಿಗರ ಜೇಷ್ಠತೆಯನ್ನು ಒಟ್ಟುಗೂಡಿಸಿ ಪದನವೀಕರಿಸುವುದು, ಗ್ರಾಮ ಲೆಕ್ಕಾಧಿಕಾರಿಗಳಿಗೆ ಪರಿಷ್ಕೃತ ಜಾಬ್ ಚಾರ್ಟ ನೀಡುವುದು, ಗ್ರಾಮ ಲೆಕ್ಕಿಗರನ್ನು ಕೂಡಲೇ ಖಾಯಂಗೊಳಿಸುವುದು, ಮರಳು ಮಾಫಿಯಾದಿಂದ ಹತ್ಯೆಗೀಡಾಗಿರುವ ಗ್ರಾಮ ಲೆಕ್ಕಾದಿಕಾರಿ ದಿ.ಸಾಹೇಬ್ ಪಾಟೀಲ ಅವರ ಕುಟುಂಬ ವರ್ಗಕ್ಕೆ 20 ಲಕ್ಷ ರೂ. ಪರಿಹಾರ ಧನ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಹಕ್ಕೊತ್ತಾಯ ಮಂಡಿಸಿದರು.
ಸಂಘದ ಪ್ರಧಾನ ಕಾರ್ಯದಶರ್ಿ ಸಂತೋಷ ಲೋಕೂರಿ, ಆರ್.ಎಚ್. ಗೋಸಾಂವಿ, ಬಿ.ಎಸ್. ಪಾಟೀಲ, ಪಿ.ಜೆ. ಕೊಡಹೊನ್ನ, ಆರ್.ಆರ್. ಕಾಂಬಳೆ, ಟಿ.ಎಚ್. ಸಾರವಾನ, ಜಗದೀಶ ಹಂಗರಗಿ, ಎಸ್.ಕೆ. ರಾಠೋಡ, ಎಚ್.ಕೆ. ಬಿಳೇಕುದರಿ, ಎಂ.ಆರ್. ರಾಠೋಡ, ಬಿ.ಬಿ. ಕಮತ, ಶಿವಾನಂದ ಅಂಗಡಿ, ಸಂತೋಷ ವಾಲೀಕಾರ, ಎಸ್.ಪಿ. ಮುಲ್ಲಾ, ವಿಜಯಕುಮಾರ ಅಡಿಹುಡಿ, ಬಿ.ಆರ್. ಶೀಲವಂತ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.