ಲೋಕದರ್ಶನ ವರದಿ
ವಿಜಯಪುರ 25: ನಗರದ ಎ.ಎಸ್.ಪಿ ವಾಣಿಜ್ಯ ಮಹಾವಿದ್ಯಾಲಯ ಮತ್ತು ದೇಶ ರಕ್ಷಕರ ಪಡೆ ಸಹಯೋಗದೊಂದಿಗೆ ಕಾರ್ಗಿಲ್ ವಿಜಯ ನಮನ ಸಪ್ತಾಹ ಕಾರ್ಯಕ್ರಮ ಜರುಗಿತು.
ಈ ಸಂದರ್ಭ ಮಾಣಿಕ್ಯ ಕರಿಯರ ಅಕಾಡಮಿಯ ಲೋಹಿತ ಮೆತ್ರಿ ಮಾತನಾಡಿ, ಅನೇಕ ಜನ ಮಹಾನ ನಾಯಕರು ಹೋರಾಟಗಾರರು ರಾಜರು ಸನ್ಯಾಸಿಗಳು ಜನಸಿದ ನಮ್ಮ ನಾಡು. ನಮ್ಮ ಮೊದಲ ತಾಯಿ ಅಂದರೆ ಅದು ನಮ್ಮ ಭಾರತಾಂಬೆ. ಆ ತಾಯಿಯ ಮಕ್ಕಳಾದ ನಮ್ಮೆಲ್ಲರ ಮೊದಲ ಕರ್ತವ್ಯ ವೆಂದರೆ ದೇಶ ರಕ್ಷಣೆ ಮಾಡುವುದು ಎಂದರು.
ಡಿ.ವಿ. ಕೋಟಿ ಗುರುಗಳು ಮಾತನಾಡಿ, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸೈನ್ಯದಲ್ಲಿ ಸೇರಬೇಕು ಕರೆ ಎಂದರು. ಮಾಜಿ ಯೋಧರ ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡ ದೇಶ ರಕ್ಷಕರ ಪಡೆ ಸಂಘಟನೆ ಶ್ಲಾಘನೀಯ. ಭಾರತ ಮಾತೆ ಈ ಸಂಘಟಕರಿಗೆ ಇನ್ನು ಹೆಚ್ಚಿನ ರೀತಿಯಲ್ಲಿ ದೇಶಭಕ್ತಿ ಕಾರ್ಯಕ್ರಮ ಮಾಡಲಿ ಎಮದು ಆಶಿಸಿದರು.
ಸಂಘಟನೆಯ ಮುಖಂಡರಾದ ರೋಹನ ಆಪ್ಟೆ, ಚನ್ನುಗೌಡಾ ಪಾಟೀಲ, ರಾಘವೇಂದ್ರ ಮಿರೇಕರ, ಆದಿತ್ಯ ತಾವರಗೇರಿ, ಪ್ರೇಮ ಕಳಕೂಟಗಿ, ವಿವೇಕ ತಾವರಗೇರಿ, ವಿಕ್ರಮ ತಾಂಬೇಕಾರ, ಅಜಯ ಸೂರ್ಯವಂಶಿ ಇದ್ದರು.