ವಿಜಯಪುರ: ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ

ಲೋಕದರ್ಶನ ವರದಿ

ವಿಜಯಪುರ 24: ಮೈತ್ರಿ ಪಕ್ಷಗಳ ಶಾಸಕರನ್ನು ಕುದುರೆ ವ್ಯಾಪಾರ ಮಾಡುವುದರ ಮೂಲಕ  ಮೈತ್ರಿ ಸರ್ಕಾರ ಪತನಗೊಳಿಸಿರುಬ ಬಿಜೆಪಿ ನಾಯಕರ ಕ್ರಮವನ್ನು ಖಂಡಿಸಿ ಬುಧವಾರ ವಿಜಯಪುರದಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. 

ನಗರದ ಗಾಂಧೀ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು ಬಿಜೆಪಿ ನಾಯಕರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. 

     ಈ ಸಂದಭದಲ್ಲಿ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ಖಾದೀರ ಖಾದೀಮ್, ಮಾತನಾಡಿ, ಬಿಜೆಪಿ ನಾಯಕರು 2018 ರ ವಿಧಾನ ಸಭಾ ಚುನಾವಣೆ ನಂತರ ಬಹುಮತ ಸಾಬೀತುಪಡಿಸಲು  ಸಾಧ್ಯವಾಗದ್ದರಿಂದ ಸತತವಾಗಿ ಆಪರೇಷನ ಕಮಲಕ್ಕೆ ಕೈ ಹಾಕಿ ಈಗ ವಾಮಮಾರ್ಗದ ಮೂಲಕ ಯಶಸ್ವಿಯಾಗಿದೆ.  ಕಾಂಗ್ರೆಸ್ ಮತ್ತು ಜೆಡಿಎಸ್ ದೋಸ್ತಿ ಸಕರ್ಾರ ಜನಪರವಾಗಿ ಕಾರ್ಯನಿರ್ವಹಿಸುತ್ತಿತ್ತು, ಆದರೆ ಇದನ್ನು ಸಹಿಸದ ಬಿಜೆಪಿ ನಾಯಕರು ತಮ್ಮ ಅಧಿಕಾರ ಸ್ವಾರ್ಥಕ್ಕಾಗಿ ಶಾಸಕರಿಗೆ ಕೋಟಿ ಕೋಟಿ ಹಣದ ಆಮೀಷವೊಡ್ಡಿ ರೆಸಾಟರ್್ನಲ್ಲಿ ಕೂಡಿಹಾಕಿ ಅನೈತಿಕ ಮಾರ್ಗದ ಮೂಲಕ ಸಕರ್ಾರದ ಪತನಕ್ಕೆ ಕಾರಣವಾಗಿದ್ದಾರೆ ಎಂದು ಆರೋಪಿಸಿದರು.  

    ಬಿಜೆಪಿಯ ನಾಯಕರು ನೈತಿಕ ಅಂಧ:ಪತನಕ್ಕೆ ಇಳಿದಿದ್ದಾರೆ, ಪರಿಸ್ಥಿತಿ ಮುಂದುವರೆದರೆ ಡಾ.ಬಾಬಾಸಾಹೇಬ ಅಂಬೇಡ್ಕರವರ ಅವರು ರಚಿಸಿರುವ ಶ್ರೇಷ್ಠ ಸಂವಿಧಾನವನ್ನು ಬಿಜೆಪಿಯವರು ಬದಲಾಯಿಸಬಹುದು ಎಂದು ಆತಂಕ ವ್ಯಕ್ತಪಡಿಸಿದರು.  

     ಪ್ರಧಾನ ಕಾರ್ಯದರ್ಶಿ  ಕಿಶೋರ ಪಾಟೀಲ ಮಾತನಾಡಿ, ಬಿಜೆಪಿ ನಾಯಕರಿಗೆ ರಾಜ್ಯದ ಜನತೆಯ ಹಿತಚಿಂತನೆ, ರೈತರ ಹಿತ ಮುಖ್ಯವೇ ಇಲ್ಲ, ಭೀಕರ ಬರಗಾಲ ಪರಿಸ್ಥಿತಿಯಲ್ಲಿ ರೈತರ ಬಗ್ಗೆ ಯೋಚಿಸಬೇಕಾದ ಬಿಜೆಪಿ ನಾಯಕರು ಕೇವಲ ಖುರ್ಚಿಗಾಗಿ ಚಿಂತಿಸಿದರು ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ರೀತಿ ಜನವಿರೋಧಿ, ಪ್ರಜಾಪ್ರಭುತ್ವ ವಿರೋಧಿ ನೀತಿ ಅನುಸರಿಸುತ್ತಿರುವ ಬಿಜೆಪಿ ನಾಯಕರಿಗೆ ಜನತೆಯೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜಿಲ್ಲಾ ಯುವ ಕಾಂಗ್ರೇಸ್ ಸಮಿತಿ ಉಪಾಧ್ಯಕ್ಷ ಲಿಂಬಾಜಿ ರಾಠೋಡ, ಪ್ರಧಾನ ಕಾರ್ಯದಶರ್ಿಗಳಾದ ಮುನೀರ ಕಾಲೇಬಾಗ, ಅನುಪ (ಪ್ರತಾಪ) ಬಬಲೇಶ್ವರ, ಇಮಾಮಜಾಫರ  ಇನಾಮದಾರ, ಪೈಗಂಬರ ಹಚ್ಯಾಳ, ಶೌಕತ ಕೋತವಾಲ, ಮಲ್ಲನಗೌಡ ಪಾಟೀಲ, ವಿಜಯ ಚವ್ಹಾಣ, ಅಮೀತ ಚವ್ಹಾಣ, ಹಾಫೀಜ ಢಾಲಾಯತ ಮುಂತಾದವರು  ಉಪಸ್ಥಿತರಿದ್ದರು.