ವಿಜಯಪುರ: ಸಿದ್ದಲಿಂಗ ಶ್ರೀಗಳು ಸದಾವಕಾಲ ಸ್ಮರಣೀಯರು

ಲೋಕದರ್ಶನ ವರದಿ

ವಿಜಯಪುರ 08: ಬಸವಾದಿ ಶರಣರ ಆಶಯವಾಗಿದ್ದ ಸಮ ಸಮಾಜ ನಿಮರ್ಾಣ ಕಾರ್ಯದಲ್ಲಿ ಮುಂಚೂಣಿಯಲ್ಲಿದ್ದ ಗದಗ ಸಿದ್ದಲಿಂಗ ಶ್ರೀಗಳು ಸದಾವಕಾಲ ಸ್ಮರಣೀಯರು ಎಂದು ಮಾಜಿ ಸಚಿವ, ಶಾಸಕ ಎಂ.ಬಿ.ಪಾಟೀಲ್ ಹೇಳಿದರು.

ಇಬ್ರಾಹಿಂಪುರ ತೋಂಟದಾರ್ಯ ಮಠದಲ್ಲಿ ಸಿದ್ಧಲಿಂಗ ಶ್ರೀಗಳ ಕಂಚಿನ ಪುತ್ಥಳಿ, ಶಿಲಾಮಂಟಪ ಲೋಕಾರ್ಪಣೆ, ಶ್ರಾವಣ ಮಾಸದ ನಿಮಿತ್ಯ ಮತ್ತೆ ಕಲ್ಯಾಣ ದರ್ಶನ ಪ್ರವಚನ ಉದ್ಘಾಟನೆ ಹಾಗೂ ಜಿಲ್ಲೆಯ ರಾಜಕೀಯ ಮುತ್ಸದ್ದಿ ನಾಯಕರಾದ ಲಿಂ.ಬಿ.ಎಸ್.ಪಾಟೀಲ್ ಸಾಸನೂರ, ಲಿಂ. ಬಿ.ಎಸ್.ಪಾಟೀಲ್ ಮನಗೂಳಿ ಇವರ ಗ್ರಂಥ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕನ್ನಡ ನಾಡು, ನುಡಿ, ಸಂಸ್ಕೃತಿ, ನೀರಾವರಿ, ಕೃಷಿ, ಪರಿಸರ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ಕಾರ್ಯ ಮಾಡಿದ್ದರು. ಸಾಹಿತ್ಯದ ಯಾವುದೇ ಪ್ರಾಕಾರಗಳಲ್ಲಿ ಅಧಿಕಾರಯುತವಾಗಿ ಮಾತನಾಡ ಬಲ್ಲವಾರಾಗಿದ್ದರು. ಅವರನ್ನು ಕಳೆದುಕೊಂಡ ನಂತರ ಆವರಿಸಿದ್ದ ಶೂನ್ಯ ಭಾವವನ್ನು ನಾಗನೂರು ಸಿದ್ದರಾಮ ಮಹಾಸ್ವಾಮಿಗಳು ತುಂಬಿದ್ದಾರೆ ಎಂದರು.

ಲಿಂಗಾಯತ ಧರ್ಮ ಕುರಿತು ಇನ್ನೂ ಹೆಚ್ಚಿನ ಜಾಗೃತಿ ಆಗಬೇಕಿದೆ. ಬಸವಾದಿ ಶರಣರ ಆಶಯಗಳನ್ನು ನಾವು ಅಥರ್ೆಸಿಕೊಳ್ಳಬೇಕಿದೆ. ಈ ಕುರಿತು ಜಾಗೃತಿ ಕಾರ್ಯದಲ್ಲಿ ತೊಡಗಿರುವ ನನಗೆ ಹೆಜ್ಜೆ-ಹೆಜ್ಜೆಗೂ ತೊಂದರೆಗಳು ಉಂಟಾದವು. ಅದಕ್ಕಾಗಿ ನಾನು ಇನ್ನೊಮ್ಮೆ ನೀರಾವರಿ ಸಚಿವನಾಗುವ ಅವಕಾಶವನ್ನು ಕಳೆದುಕೊಂಡೆ. ಆದರೆ ಬಸವಾದಿ ಶರಣರ ಆಶಯಗಳಿಗೆ ಬದ್ದನಾಗಿರುವ ನಾನು ಇದೇ ದಾರಿಯಲ್ಲಿ ಸಾಗುತ್ತೇನೆ. ಈ ದಾರಿಯೇ ನನ್ನನ್ನು ಉನ್ನತ ಸ್ಥಾನಕ್ಕೆ ಏರಿಸಲೂಬಹುದು ಎಂದರು.

ಪ್ರತಿ ಚುನಾವಣೆಗಳಲ್ಲಿ ತಮ್ಮ ಜಮೀನು ಮಾರಿ ರಾಜಕಾರಣ ಮಾಡಿದ ಮುತ್ಸದ್ದಿ ನಾಯಕರು ಬಿ.ಎಸ್.ಪಾಟೀಲ್ ಸಾಸನೂರು ಮತ್ತು ಬಿ.ಎಸ್.ಪಾಟೀಲ್ ಮನಗೂಳಿ ಆಗಿದ್ದರು. ನಮ್ಮ ತಂದೆಯವರ ಜೊತೆಯಲ್ಲಿ ಸಜ್ಜನ, ಸುಸಂಸ್ಕೃತ ರಾಜಕಾರಣಕ್ಕೆ ಮಾದರಿಯಾಗಿದ್ದ ಇರ್ವರು. ನಮ್ಮ ಜಿಲ್ಲೆಯ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸಿದ್ದಾರೆ ಎಂದರು.