ವಿಜಯಪುರ: ತಬರೇಜ ಅನಸಾರಿ ಹತ್ಯೆಕೋರರ ಬಂಧನಕ್ಕೆ ಆಗ್ರಹ

ಲೋಕದರ್ಶನ ವರದಿ

ವಿಜಯಪುರ 02: ಜಾರ್ಖಂಡ್ನಲ್ಲಿ ತಬರೇಜ ಅನಸಾರಿ ಅವರ ಮೇಲೆ ದೌರ್ಜನ್ಯ ಎಸಗಿ ಹತ್ಯೆ ಮಾಡಿದವರನ್ನು ಬಂಧಿಸಿ ಕಠಿಣ ಶೀಕ್ಷೆಗೆ ಗುರಿಪಡಿಸಬೇಕೆಂದು ಆಗ್ರಹಜಿಸಿ ಭೀಮ್ ಆರ್ಮಿ ಸಂಘಟನೆ ಜಿಲ್ಲಾ ಸಮಿತಿ ವತಿಯಿಂದ ಮಂಗಳವಾರ ಜಿಲ್ಲಾಧಿಕಾರಿಗಳ ಮುಖಾಂತರ ಪ್ರದಾನಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ  ಸಂಘಟನೆಯ ಅಲ್ಪಸಂಖ್ಯಾತ ಸಂಘಟನೆಯ ರಾಜ್ಯ ಅದ್ಯಕ್ಷ ಖಾಲೀದಹುಸೇನ ಮಾತನಾಡಿ, ಜಾರ್ಖಂಡ್ನಲ್ಲಿ ತಬರೇಜ ಅನಸಾರಿ ಎನ್ನುವ ವ್ಯಕ್ತಿಯ ಮೇಲೆ ಭಗವಾ ಆತಂಕಿಗಳು ದೌರ್ಜನ್ಯ ಎಸಗಿ ಸಾಯಿಸಿದ್ದಾರೆ. ಈ ಕೃತ್ಯವನ್ನು ಭೀಮ್ ಆರ್ಮಿ  ಸಂಘಟನೆ ತೀವ್ರವಾಗಿ ಖಂಡಿಸುತ್ತದೆ. ಹತ್ಯೆ ಮಾಡಿದವರ ಮೇಲೆ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು. ಈಗಾಗಲೇ ಇಂಥ ಹಲವಾರು ಪ್ರಕರಣಗಳು ನಡೆದರೂ ಸರಕಾರ ಕ್ರಮ ಜರುಗಿಸುವಲ್ಲಿ ವಿಫಲವಾಗಿದೆ. ಈ ಕೃತ್ಯದಲ್ಲಿ ಭಾಗಿಯಾದವರನ್ನು ಶೀಘ್ರದಲ್ಲಿ ಕಾನೂನು ಕ್ರಮ ಜರುಗಿಸಿ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ಸಂಘಟನೆಯ ವತಿಯಿಂದ ದೇಶಾದ್ಯಂತ ಉಗ್ರ ಹೋರಾಟ ಮಾಡಲಾಗುವುದು ಎಂದು ಆಗ್ರಹಿಸಿದರು.

ಭೀಮ್ ಆರ್ಮಿ  ಸಂಘಟನೆಯ ಅಲ್ಪಸಂಖ್ಯಾತ ಘಟಕದ ರಾಜ್ಯಾದ್ಯಕ್ಷರಾದ ಖಾಲೀದಹುಸೇನ, ರಾಜ್ಯ ಉಪಾಧ್ಯಕ್ಷರಾದ ಮತೀನಕುಮಾರ, ವಿಠ್ಠಲ ವಡ್ಡರ, ಇಸಾಕಅಹ್ಮದ, ಸೋಹೆಬ್, ಪರೀದ, ಅಪ್ಪು, ಆಸೀಫ ನದಾಫ, ಶ್ರೀಧರ, ಇನ್ನಿತರರು ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.