ಲೋಕದರ್ಶನ ವರದಿ
ವಿಜಯಪುರ 25: ಜಿಲ್ಲಾಡಳಿತ, ಜಲ್ಲಾ ಪಂಚಾಯತ್, ಪದವಿ ಪೂರ್ವ ಶಿಕ್ಷಣ ಇಲಾಖೆ, ವಿಜಯಪುರ ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜ, ಝಳಕಿ ಇವರ ಸಹಯೋಗದಲ್ಲಿ ಝಳಕಿ ಸರಕಾರಿ ಪದವಿ ಪೂರ್ವಕಾಲೇಜನಲ್ಲಿ ಕಾಲೇಜ್ ಕ್ಯಾಂಪಸ್ ಡೇ ಕಾರ್ಯಕ್ರಮ ಆಚರಿಸಲಾಯಿತು.
ಜಲಶಕ್ತಿ ಅಭಿಯಾನದ ಅನುಷ್ಠಾನದ ಅಂಗವಾಗಿ ಕಾಲೇಜು ಆವರಣದ ಸ್ವಚ್ಛತೆ, ಸಸಿ ನೆಡುವ ಕಾರ್ಯಕ್ರಮ, ಜಲಶಕ್ತಿ ಅಭಿಯಾನದ ಕುರಿತು ವೇದಿಕೆಯ ಕಾರ್ಯಕ್ರಮ ಹಾಗೂ ಜಲಶಕ್ತಿ0ು ಅಪವ್ಯ0ು, ಸಾಂಪ್ರದಾಯಿಕ ಜಲ ಮೂಲಗಳ ಸಂರಕ್ಷಣೆ, ಮಳೆ ನೀರುಕೊಯ್ಲು, ಇತ್ಯಾದಿ ವಿಷಯಗಳ ಕುರಿತು ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧನೆ, ಇತ್ಯಾದಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು.
ವೇದಿಕೆಯ ಕಾರ್ಯಕ್ರಮವನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿದರ್ೇಶಕ ಜೆ.ಎಸ್.ಪೂಜೇರಿ ಅವರು ಉದ್ಘಾಟಿಸಿದರು. ಹಿರಿಯ ಪ್ರಾಚಾರ್ಯರಾದ ಎಸ್.ವಾಯ್. ಅಮಾತೆ, ಸಂಸ್ಥೆಯ ಪ್ರಾಚಾರ್ಯರಾದ ಎಲ್.ಆರ್.ಹಳ್ಳದಮನಿ,ಅರಣ್ಯ ಇಲಾಖೆಯ ಮುಜಗೊಂಡ ಇತರರು ಉಪಸ್ಥಿತರಿದ್ದರು. ಉಪನ್ಯಾಸಕ ಪಂಚಯ ಗಿರಡಿಮಠ ನಿರೂಪಿಸಿದರು. ಇದಕ್ಕೂ ಮೊದಲು ಸಸಿ ನೆಡುವ ಕಾರ್ಯಕ್ರಮಕ್ಕೆ ಇಂಡಿ ತಹಶೀಲ್ದಾರ ಅವರು ಚಾಲನೆ ನೀಡಿದರು.