ಲೋಕದರ್ಶನ ವರದಿ
ವಿಜಯಪುರ 06: ಬಿ.ಜೆ.ಪಿ. ನಗರದ ಘಟಕದ ವತಿಯಿಂದ ಸಂಘಟನಾ ಪರ್ವ ಅಭಿಯಾನಕ್ಕೆ ನಗರದ ಸಿದ್ದೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷರು ಹಾಗೂ ನಗರ ಸದಸ್ಯತ್ವ ಅಭಿಯಾನದ ಸಂಚಾಲಕರಾದ ಸುರೇಶ ಬಿರಾದಾರ ಮಾತನಾಡಿ ಎಲ್ಲ ಜಾತಿ, ಮತ ಪ್ರದೇಶಗಳಲ್ಲಿ ಬಿ.ಜೆ.ಪಿ. ಸದಸ್ಯತ್ವ ಮಾಡುವ ಮೂಲಕ ನಗರದಲ್ಲಿ ಅತಿ ಹೆಚ್ಚು ಸದಸ್ಯರ ನೊಂದಣಿ ಮಾಡುವ ಗುರಿ ಹೊಂದಲಾಗಿದೆ. ಜನರು ಬಿ.ಜೆ.ಪಿ. ಸದಸ್ಯರಾಗಲು ಸಿದ್ಧರಿದ್ದಾರೆ, ನಾವು ಅವರ ಬಳಿ ಹೋಗಬೇಕಾದೆ. ರಾಷ್ಟ್ರೀಯ ಅಧ್ಯಕ್ಷ ಅಮೀತ ಶಾ ಅವರ ನೇತೃತ್ವದಲ್ಲಿ ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಸಾತ ಆಯೆಂಗೆ ದೇಶ ಬನಾಯೆಂಗೆ ಎಂಬ ಘೋಷಣೆಯೊಂದಿಗೆ ಈ ಅಭಿಯಾನ ನಡೆಯಲಿದೆ. ಸಾರ್ವಜನಿಕರು ಮಿಸ್ಕಾಲ್ ಕೊಡುವ ಮೂಲಕ ತಾವೂ ಸದಸ್ಯರಾಗಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಅಪ್ಪಾಸಾಹೇಬ್ಟ, ಬೆಳಗಾವಿ ವಿಭಾಗದ ಸಂಘಟನಾ ಪ್ರ.ಕಾ. ಪ್ರಕಾಶ ಅಕ್ಕಲಕೋಟ, ಭೀಮಾಶಂಕರ, ಸತೀಶ ಡೋಬಳೆ, ಪ್ರಭು ದೇಸಾಯಿ, ಗೋಪಾಲ ಘಟಕಾಂಬಳೆ, ಸಾಹೇಬಗೌಡ, ಮಳುಗೌಡ ಪಾಟೀಲ, ಪಾಲಿಕೆ ಸದಸ್ಯರಾದ ರವೀಂದ್ರ ಲೋಣಿ, ಮಲ್ಲಿಕಾರ್ಜುನ ಕರಡಿ, ಪ್ರಕಾಶ ಮಿಜರ್ಿ, ರಾಹುಲ ಜಾಧವ, ಸಂಜು ಪಾಟೀಲ, ಲಕ್ಷ್ಮೀ ಕನ್ನೋಳ್ಳಿ, ರಾಜು ಬಿರಾದಾರ, ಎಚ್.ಆರ್. ಮಾಚಪ್ಪನವರ, ಅಶೋಕ ನ್ಯಾಮಗೊಂಡ, ಹಾಗೂ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.