ವಿಜಯಪುರ 06: ನಗರದಲ್ಲಿರುವ ಐತಿಹಾಸಿಕ ಬಾವಿಗಳ ಸಂರಕ್ಷಣೆಗೆ ಅನುಕೂಲವಾಗುವಂತೆ ಈಗಾಗಲೇ ಪುನಶ್ಚೇತನಗೊಂಡಿರುವ ಹಾಗೂ ಪುನಶ್ಚೇತನಗೊಳಿಸಬೇಕಾದ ಬಾವಿಗಳು ಹಾಗೂ ಒತ್ತುವರಿಯಾಗಿರುವ ಐತಿಹಾಸಿಕ ಬಾವಿಗಳ ಬಗ್ಗೆ ಸಮೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ಮಹಾನಗರ ಪಾಲಿಕೆ, ನಗರ ನೀರು ಸರಬರಾಜು ಮಂಡಳಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ವಿಜಯಪುರ ನಗರದಲ್ಲಿರುವ ಐತಿಹಾಸಿಕ ಬಾವಿಗಳಲ್ಲಿ ಈಗಾಗಲೇ 27 ಬಾವಿಗಳನ್ನು ಪುನಶ್ಚೇತನಗೊಳಿಸಲಾಗಿದೆ. ಇನ್ನೂಳಿದ ಬಾವಿಗಳ ಬಗ್ಗೆಯೂ ಸೂಕ್ತ ಸಮೀಕ್ಷೆ ನಡೆಸಲು ಅಧಿಕಾರಿಗಳ 7 ತಂಡಗಳನ್ನು ರಚಿಸಲಾಗಿದ್ದು, ಇಬ್ಬರೂ ಸಹಾಯಕ ಅಭಿಯಂತರರು, ಓರ್ವ ನಗರ ಭೂಮಾಪಕರನ್ನು ಒಳಗೊಂಡಿರುವ ಈ ತಂಡಗಳು ನಗರದ ಎಲ್ಲ ವಾರ್ಡಗಳಲ್ಲಿ ಒತ್ತುವರಿಯಾಗಿರುವ ಹಾಗೂ ಪುನಶ್ಚೇತನಗೊಳಿಸಬೇಕಾದ ಐತಿಹಾಸಿಕ ಬಾವಿಗಳನ್ನು ಗುರುತಿಸಬೇಕು. ಬಾವಿಗಳ ಪುನಶ್ಚೇತನಕ್ಕೆ ಸಂಬಂಧಪಟ್ಟ ಖಚರ್ು ವೆಚ್ಚಗಳ ವರದಿಯನ್ನು ಒಂದು ವಾರದೊಳಗೆ ಸಲ್ಲಿಸುವಂತೆ ಸೂಚನೆ ನೀಡಿದರು.
ಐತಿಹಾಸಿಕ ಬಾವಿಗಳ ಸಂರಕ್ಷಣೆ ಹಾಗೂ ಪುನಶ್ಚೇತನಗೊಳಿಸುವುದು,ಅತ್ಯಂತ ಮಹತ್ವದ್ದಾಗಿದ್ದು, ಜನಪ್ರತಿನಿಧಿಗಳು ಕೂಡ ತೀವ್ರ ಆಸಕ್ತಿ ಹೊಂದಿದ್ದಾರೆ. ಈ ಹಿನ್ನಲೆಯಲ್ಲಿ ಮಹಾನಗರ ಪಾಲಿಕೆ ನಗರ ನೀರು ಸರಬರಾಜು ಮಂಡಳಿ ವಿವಿಧ ಅನುದಾನದಡಿ ಈ ಬಾವಿಗಳ ಪುನಶ್ಚೇತನಗೊಳಿಸಲು ಉದ್ದೇಶಿಸಲಾಗಿದ್ದು, ಈಗಾಗಲೇ ಸಮೀಕ್ಷೆಗಾಗಿ ನಿಯೋಜಿತಗೊಂಡಿರುವ ತಂಡಗಳ ಮೇಲುಸ್ತುವಾರಿಗಾಗಿ ಮಹಾನಗರ ಪಾಲಿಕೆ ಆಯುಕ್ತರು ಹಾಗೂ ನಗರ ನೀರು ಸರಬರಾಜು ಮಂಡಳಿಯ ಕಾರ್ಯನಿರ್ವಾಹಕ ಅಭಿಯಂತರರನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ ಎಂದು ತಿಳಿಸಿದರು.
ಐತಿಹಾಸಿಕ ಈ ಬಾವಿಗಳ ನೀರು ಆಯಾ ಬಾವಿಗಳ ಸಮೀಪದಲ್ಲಿ ಬರುವ ಉದ್ಯಾನವನಗಳು ಸರ್ಕಾರಿ ಕಚೇರಿಗಳು ಹಾಗೂ ಗೃಹ ಬಳಕೆಗೆ ಅತ್ಯಂತ ಉಪಯುಕ್ತವಾಗಲಿದ್ದು, ಬಾವಿಗಳ ಮುಖಾಂತರ ನೀರು ಸರಬರಾಜು ಮಾಡಬೇಕಾದ ವ್ಯವಸ್ಥೆಗೆ ಸಂಬಂಧಪಟ್ಟಂತೆ ಖರ್ಚುವೆಚ್ಚಗಳ ವರದಿ ಸಲ್ಲಿಸಬೇಕು. ಮುಂಬರುವ ದಿನಗಳಲ್ಲಿ ಈಗಾಗಲೇ ಪುನಶ್ಚೇತನಗೊಂಡಿರುವ, ಪುನಶ್ಚೇತನಗೊಳ್ಳಬೇಕಾದ ಬಾವಿಗಳಿಗೆ ತಗಲುವ ವೆಚ್ಚಕ್ಕೆ ಸಂಬಂಧಪಟ್ಟಂತೆ ಸೂಕ್ತ ದಾಖಲಾತಿಗಳನ್ನು ಸಹ ಇಟ್ಟುಕೊಳ್ಳಬೇಕು. ಬಾವಿಗಳ ಪುನಶ್ಚೇತನಕ್ಕೆ ಸಂಬಂಧಪಟ್ಟಂತೆ ವಿಡಿಯೋ ಚಿತ್ರೀಕರಣ ಹಾಗೂ ಛಾಯಾಚಿತ್ರಗಳನ್ನು ಸಹ ಇಟ್ಟುಕೊಳ್ಳುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಈಗಾಗಲೇ ರಚಿಸಲಾಗಿರುವ ತಂಡಗಳು ವಾರ್ಡವಾರು ಬಾವಿಗಳ ಗುರುತಿಸುವುದು ಸೇರಿದಂತೆ ಪುನಶ್ಚೇತನಕ್ಕೆ ಸಂಬಂಧಪಟ್ಟಂತೆ ಸಮೀಕ್ಷೆಗೆ ಬಂದ ಸಂದರ್ಭದಲ್ಲಿ ಆಯಾ ವಾರ್ಡನ ಸಾರ್ವಜನಿಕರು, ಸಕರ್ಾರೇತರ ಸಂಘ-ಸಂಸ್ಥೆಗಳು ಹಾಗೂ ಹಿರಿಯ ನಾಗರಿಕರು ಅವಶ್ಯಕ ಮಾಹಿತಿ ಒದಗಿಸುವ ಜೊತೆಗೆ ಎಲ್ಲ ರೀತಿಯಿಂದ ಸಹಕಾರ ನೀಡುವಂತೆ ತಿಳಿಸಿರುವ ಅವರು ವಿಜಯಪುರ ನಗರದಲ್ಲಿರುವ ಎಲ್ಲ ಐತಿಹಾಸಿಕ ಬಾವಿಗಳ ಸಮೀಕ್ಷೆ ನಡೆಸಿ ಅತಿಕ್ರಮಣ ತೆರವುಗೊಳಿಸಿ ಸಂರಕ್ಷಿಸಲು ನಿರ್ಧರಿಸಿದ್ದು, ಐತಿಹಾಸಿಕ ಬಾವಿಗಳ ಯೋಜನಾ ವರದಿ ಸಲ್ಲಿಸಲು ಈಗಾಗಲೇ ರಚಿಸಲಾಗಿರುವ ತಂಡಗಳು ಅತ್ಯಂತ ಜವಾಬ್ದಾರಿಯಿಂದ ಕಾರ್ಯನಿರ್ವಹಿಸುವಂತೆ ಅವರು ಸಲಹೆ ನೀಡಿದರು.
ತಂಡದ ವಿವರ:
ವಾರ್ಡ ನಂ.1 ರಿಂದ 5ರವರೆಗೆ ಸಹಾಯಕ ಅಭಿಯಂತರರಾದ ರಶ್ಮಿ ಮಾಲಗಾವಿ ಮೊ:7680820881, ಗುರುದತ್ತ ಮೊ:9071423503, ಹಾಗೂ ಭೂಮಪಾಕರಾದ ಆರ್.ಎಸ್. ಪಾಟೀಲ ಮೊ:9611013495 ಇವರನ್ನು ನಿಯೋಜಿಸಲಾಗಿದೆ.
ವಾರ್ಡ ನಂ.6 ರಿಂದ 10ರವರೆಗೆ ಸಹಾಯಕ ಅಭಿಯಂತರರಾದ ರೇವಣಸಿದ್ದ ದಶವಂತ ಮೊ: 9741089724, ಪರವತ್ತಪ್ಪ ಮಡಿವಾಳ ಮೊ: 9480689544 ಹಾಗೂ ಭೂಮಾಪಕರಾದ ಎಸ್.ಎಂ.ನಾಯಕ ಮೊ: 7411547855 ಇವರನ್ನು ನಿಯೋಜಿಸಲಾಗಿದೆ.
ವಾರ್ಡ ನಂ.11 ರಿಂದ 15ರವರೆಗೆ ಸಹಾಯಕ ಅಭಿಯಂತರರಾದ ಶರಣಬಸಪ್ಪ ಕೆಂಭಾವಿ ಮೊ: 8660642844, ಶಿವಾನಂದ ಅಹಿರಸಂಗ್ ಮೊ: 9071423508 ಹಾಗೂ ಭೂಮಾಪಕರು ರಾಮು ಎಂ.ರಾಠೋಡ ಮೊ: 9482583599 ಇವರನ್ನು ನಿಯೋಜಿಸಲಾಗಿದೆ.
ವಾರ್ಡ ನಂ.16 ರಿಂದ 20ರವರೆಗೆ ಸಹಾಯಕ ಅಭಿಯಂತರರಾದ ಸುನೀಲ ಹಿರೆಣ್ಣಿ ಮೊ: 9632229556, ಪಟೇಲ ಮೊ: 9071423507 ಹಾಗೂ ಭೂಮಾಪಕರಾದ ಎಂ.ಎಸ್.ಬಸರಕೋಡ ಮೊ: 9986568343 ಇವರನ್ನು ನಿಯೋಜಿಸಲಾಗಿದೆ.
ವಾರ್ಡ ನಂ.21 ರಿಂದ 25 ರವರೆಗೆ ಸಹಾಯಕ ಅಭಿಯಂತರರಾದ ವೈ.ಎಂ.ಹಳ್ಳಿ ಮೊ: 8971910733, ಸಂದೇಶ ಮೊ: 9071423542 ಹಾಗೂ ಭೂಮಾಪಕ ಆರ್.ಎಸ್.ಕದಂ ಮೊ: 7259672148 ಇವರನ್ನು ನಿಯೋಜಿಸಲಾಗಿದೆ.
ವಾರ್ಡ ನಂ.26 ರಿಂದ 30ರವರೆಗೆ ಕಿರಿಯ ಅಭಿಯಂತರ ಶೇಖರ ಮಾಳಿ ಮೊ: 9538068237, ಸಹಾಯಕ ಅಭಿಯಂತರರು ಸಿದ್ದೀಕಿ ಮೊ: 9804688873, ಭೂಮಾಪಕ ಆರ್.ಆರ್.ನಾಯಿಕ ಮೊ: 8317496504 ಇವರನ್ನು ನಿಯೋಜಿಸಲಾಗಿದೆ.
ವಾರ್ಡ ನಂ.31 ರಿಂದ 35ರವರೆಗೆ ಕಿರಿಯ ಅಭಿಯಂತರರಾದ ಮಹ್ಮದ ಮೊಹಸೀನ್ ಮೊ: 8904242990, ಮಹೇಶ ಹೊನಕಟ್ಟಿ ಮೊ: 8792002059 ಹಾಗೂ ಭೂಮಾಪಕ ರೇಣುಕಾ ಅರಕೇರಿ ಮೊ: 9964495114 ಇವರನ್ನು ನಿಯೋಜಿಸಲಾಗಿದೆ.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಎಚ್. ಪ್ರಸನ್ನ, ನಗರಾಭಿವೃದ್ದಿ ಕೋಶದ ಯೋಜನಾದ ನಿದರ್ೇಶಕ ವಿರೇಶ ಸೇರಿದಂತೆ ಮಹಾನಗರ ಪಾಲಿಕೆ, ನಗರ ನೀರು ಸರಬರಾಜು ಮಂಡಳಿ ಅಧಿಕಾರಿಗಳು ಉಪಸ್ಥಿತರಿದ್ದರು.