ಮಹಿಳೆಯರು ಅಡುಗೆ ಮನೆಗೆ ಸಿಮಿತ ಅನ್ನೋ ಕಾಲ ಹೋಗಿ- ಎಫ್‌.ಜಿ ಚಿನ್ನನವರ

Women go to the kitchen for a limited time - FG Chinnavara

ಮಹಿಳೆಯರು ಅಡುಗೆ ಮನೆಗೆ ಸಿಮಿತ ಅನ್ನೋ ಕಾಲ ಹೋಗಿ- ಎಫ್‌.ಜಿ ಚಿನ್ನನವರ 

ಮೂಡಲಗಿ 04: ಮಹಿಳೆಯರು ಅಡುಗೆ ಮನೆಗೆ ಸಿಮಿತ ಅನ್ನೋ ಕಾಲ ಹೋಗಿ ಮಹಿಳೆ ಪುರುಷರಷ್ಟೆ ಸಮಾನರು. ಪುರುಷ ಮಹಿಳೆ ಎಂಬ ತಾರತಮ್ಯ ಹೋಗಿ ಮಹಿಳೆಯರು ಅಬಲೆರಲ್ಲ ಸಬಲರು ಎಂದು ತೋರಿಸಿದ್ದಾರೆ ಎಂದು ಮೂಡಲಗಿ ತಾ.ಪಂ ಇಒ ಎಫ್‌.ಜಿ ಚಿನ್ನನವರ  ಹೇಳಿದರು. 

    ತಾಲೂಕಿನ ಕುಲಗೋಡ ಗ್ರಾಮದ ಶ್ರೀ ಲಕ್ಷ್ಮೀದೇವಸ್ಥಾನ ಆವರಣದಲ್ಲಿ ಗ್ರಾಮ ಪಂಚಾಯತ ಆಯೋಜಿಸಿದ ಮಹಿಳೆಯರ ವಿಶೇಷ ಗ್ರಾಮ ಸಭೆ ಉದ್ಘಾಟಿನೆ ಮಾತನಾಡಿ, ಮಹಿಳೆಯರಿಗಾಗಿ ಸರಕಾರ ವ್ಯಾಪಾರ ಗುಡಿ ಕೈಗಾರಿಕೆ ಕೃಷಿ ಹೈನುಹಗಾರಿಕೆ ಇತರೆ ಕ್ಷೇತ್ರಗಳಲ್ಲಿ ಮಹಿಳೆಯರನ್ನು ತೊಡಗಿಸಿ ಆರ್ಥಿಕ ಅಭಿವೃದ್ಧಿ ಸಭಲತೆಗಾಗಿ ಮಹತ್ವದ ಯೋಜನೆಗಳ ತಂದಿದೆ ಹಾಗೂ ಸರಕಾರ ಬಯಲು ಶೌಚಾಲಯ ಮುಕ್ತ ಗ್ರಾಮದ ಕನಸ್ಸು ಹೊತ್ತಿದೆ. ಎಂದರು. 

  ತಾ.ಪಂ ಎಒ ಚಂದ್ರಶೇಖರ ಬಾರ್ಕಿ ಮಾತನಾಡಿ, ಈ ಶತಮಾನದಲ್ಲಿ ಲಿಂಗ ತಾರತಮ್ಯ. ಅಸಮಾನತೆ. ಬಡತನ ಹೋಗಲಾಡಿಸಲು ಮಹಿಳೆಯರಿಗೆ ವಿಷೇಶ ವಿವಿಧ ರಂಗಗಳಲ್ಲಿ ಮಿಸಲಾತಿ ನೀಡಿದೆ. ಮಹಿಳಾ ಸಭೆಗಳ ಮೂಲಕ ಕುಂದುಕೋರತೆಗಳ ನಿವಾರಣೆ ಮಾಡಲು ಗ್ರಾಪಂ ಮುಂದಾಗಿದೆ ಎಂದವರು ಮಕ್ಕಳಲ್ಲಿ ಅಪೌಷ್ಠಿಕತೆ. ನೀರು ಬಳಕೆ. ಸ್ವಚ್ಛತೆ. ಶಿಕ್ಷಣ. ಬಗ್ಗೆ ಅರಿವು ನೀಡಿದರು. 


     ಗ್ರಾ.ಪಂ ಅಧ್ಯಕ್ಷ ತಮ್ಮಣ್ಣಾ ದೇವರ  ಮಾತನಾಡಿ, ಸಮಾಜದಲ್ಲಿ ಬಡ ಮಹಿಳೆಯರಿಗೆ ಸಿಮಂತ ಕಾರ್ಯ ಕನಸಾಗಿದೆ. ಇದನ್ನು ಹೋಗಲಾಡಿಸಲು ಮತ್ತು ಭಾವೈಕ್ಯತೆ ಸೌಹಾರ್ದತೆ ಮುಡಿಸಬೇಕೆಂದು ವಿವಿಧ ಧರ್ಮಗಳ 16 ಜನ ಮಹಿಳೆಯರ ಗ್ರಾಪಂ ನಿಂದ ಸಾಮೂಹಿಕ ಸಿಮಂತ ಕಾರ್ಯ ಮಾಡಿದ್ದೇವೆ ಎಂದರು. 

ಕಾರ್ಯಕ್ರಮ ವಿಶೇಷ ಗ್ರಾಮದ 16 ಮಹಿಳೆಯರಿಗೆ ಒಂದೇ ವೇದಿಕೆಯಲ್ಲಿ ಸಿಮಂತ ಕಾರ್ಯ ಮಾಡಿದ್ದು ವಿಶೇಷವಾಗಿತ್ತು. 

  ಸರಕಾರದ ನಿರ್ದೇಶನದಂತೆ ಪಜಾ.ಪಪಂ ಸಮುದಾಯದಲ್ಲಿ ನಿಧನರಾದ ಕುಟುಂಬಕ್ಕೆ ಅಂತ್ಯಸಂಸ್ಕಾರಕ್ಕಾಗಿ ಗ್ರಾಪಂ ನಿಂದ ಲಕ್ಷ್ಮೀ ತಾಳಿಕೋಟಿ ಇವರಿಗೆ 5000 ರೂ ಗಳ  ಚೆಕ್ ವಿತರಣೆ ಮಾಡಿದರು. 

   ಸಮಾರಂಭದಲ್ಲಿ ಶಿಶು ಅಭಿವೃದ್ಧಿ ಇಲಾಖೆಯ  ಸಹಾಯಕ ಅಧಿಕಾರಿ ಇಂದಿರಾ ಭೋವಿ, ಗೋಕಾಖ ಟಿಎಪಿಸಿಎಂಎಸ್ ಅಧ್ಯಕ್ಷ ಅಶೋಕ ನಾಯಿಕ, ಆರೋಗ್ಯ ಇಲಾಖೆಯ ಬಸನಗೌಡ ಈಶ್ವರ​‍್ಪಗೋಳ,  ಪಿ.ಎಸ್‌.ಐ ಆನಂದ ಬಿ,  ಬಸನಗೌಡ ಪಾಟೀಲ. ಸುಭಾಸ ವಂಟಗೋಡಿ. ಸತೀಶ ವಂಟಗೋಡಿ. ಪಿ.ಡಿಓ ಸದಾಶಿವ ದೇವರ. ನಾಗರಾಜ ಗಡಾದ. ಸಂಜೀವಿನಿ ಮಹಿಳಾ ಒಕ್ಕೂಟದ ಮಾಲುತಾಯಿ ವಂಟಗೋಡಿ, ಅನೂಪಮ ಅಂಗಡಿ. ಸುಶೀಲಾ ಅಂಗಡಿ,  ಗ್ರಾಪಂ ಸರ್ವ ಸದಸ್ಯರು. ಆಶಾ, ಅಂಗನವಾಡಿ ಕಾರ್ಯಕರ್ತೆಯರು ಗ್ರಾಮಸ್ಥರು ಇದ್ದರು. ಶಂಕರ ಹಾದಿಮನಿ ಸ್ವಾಗತಿಸಿ ವಂದಿಸಿದರು. ಸುರೇಶ ತಳವಾರ ನಿರೂಪಿಸಿದರು.