ವಲಯ ಮಟ್ಟದ ಯುವೋತ್ಸವ: ಸಂಚಿತಾಗೆ ಬಹುಮಾನ
ಬೆಳಗಾವಿ: ಕೆ.ಎಲ್.ಎಸ್ ಸಂಸ್ಥೆಯ ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯದ ಸಂಚಿತಾ ಪಾಟೀಲ ಅವರು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಹುಬ್ಬಳ್ಳಿ ಇದರ ವತಿಯಿಂದ ಆಯೋಜಿಸಲಾದ ವಲಯ ಮಟ್ಟದ ಯುವೋತ್ಸವದಲ್ಲಿ ಪ್ರಥಮ ಬಹುಮಾನವನ್ನು ಗೆದ್ದಿದ್ದಾರೆ.
ಎಂ. ಆರ್. ಕುಲಕರ್ಣಿ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರು, ಡಾ. ಎಚ್. ಎಚ್. ಹವಾಲ್ದಾರ್, ಪ್ರೊ. ಸಮೀನಾ ನಾಯಿದ ಬೇಗ ಸಾಂಸ್ಕೃತಿಕ ವಿಭಾಗದ ಸಂಯೋಜಕರು, ಹಾಗೂ ಕಾಲೇಜಿನ ಎಲ್ಲಾ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಬಹುಮಾನ ಗೆದ್ದವರಿಗೆ ಅಭಿನಂದಿಸಿದರು.