ಬೆಂಗಳೂರು, ಮೇ 18, ಮನೆ ಕಳ್ಳತನ ಮಾಡಿದ್ದ ಓರ್ವನನ್ನು ಸುದ್ದಗುಂಟೆಪಾಳ್ಯ ಪೊಲೀಸರು ಬಂಧಿಸಿ,12 ಲಕ್ಷ ರೂ. ಮೌಲ್ಯದ ಮಾಲು ವಶಪಡಿಸಿಕೊಂಡಿದ್ದಾರೆ.ಆರ್ ಟಿ ನಗರದ 36 ವರ್ಷದ ಸೈಯ್ಯದ್ ಮಸೂದ್ ಬಂಧಿತ ಆರೋಪಿ.ಬಂಧಿತನಿಂದ ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನ ಸೇರಿ 6 ಲಕ್ಷ ರೂ ನಗದು ಹಾಗೂ 171ಗ್ರಾಂ ಚಿನ್ನದ ಒಡವೆ, ಒಂದು ಮೈಕ್ರೋಓವೆನ್ ಮತ್ತು ಆಸ್ತಿ ಪತ್ರವನ್ನು ವಶಪಡಿಸಿಕೊಳ್ಳಲಾಗಿದೆ. ಜಪ್ತಿ ಮಾಡಿರುವ ಮಾಲುಗಳ ಮೌಲ್ಯ 12ಲಕ್ಷ ರೂ ಆಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಏ.27ರಂದು ಅಬ್ದುಲ್ ರಶೀದ್ ಮೇಕ್ರಿ ಎಂಬುವವರು ಬಿಟಿಎಂಲೇಔಟ್ ನ ಕೆಇಬಿ ಕಾಲೋನಿಯಲ್ಲಿರುವ ತಮ್ಮ ಮನೆಯ ಬಾಗಿಲನ್ನು ಯಾರೋ ಒಡೆದು ಕಳವು ಮಾಡಿದ್ದಾರೆ ಎಂದು ಆರೋಪಿಸಿ ಸುದ್ದಗುಂಟೆಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರುಸುದ್ದಗುಂಟೆಪಾಳ್ಯ ಪೊಲೀಸ್ ಇನ್ಸ್‌ಪೆಕ್ಟರ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಭಾನುವಾರ ಆರೋಪಿಯನ್ನು ಬಂಧಿಸಿದೆ.ಆಗ್ನೇಯ ವಿಭಾಗದ ಉಪ ಪೊಲೀಸ್ ಆಯುಕ್ತ ಶ್ರೀನಾಥ್ ಮಹದೇವ್ ಜೋಷಿ ಮೈಕೋ ಲೇಔಟ್ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಸುಧೀರ್ ಹೆಗ್ಗಡೆ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು.