ಬೆಳಗಾವಿ 25: ಮಹಿಳೆಯರನ್ನು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಬೆಳೆಯಬೇಕಾದರೆ ಮಹಾಲಕ್ಷ್ಮೀ ಮಹಿಳಾ ಮಂಡಳ ಮಾದರಿಯಲ್ಲೇ , ಹೆಚ್ಚಿನ ಸಂಘಟನೆಗಳು ಸಮಾಜ ಸೇವೆಗೆ ಮುಂದಾಗಬೇಕು ಎಂದು ಹಿರಿಯ ಸಾಹಿತಿ, ಶಿಕ್ಷಕಿ ಡಾ. ಗುರುದೇವಿ ಹುಲೆಪ್ಪನವರಮಠ ಹೇಳಿದರು.
ಮಹಾಲಕ್ಷ್ಮೀ ಮಹಿಳಾ ಮಂಡಳದ 34 ನೇ ವಾರ್ಷಿಕ ಸಮಾರಂಭ ಇದೇ 21 ವಿಜೃಂಭಣೆಯಿಂದ ಜರುಗಿತು. ಮಹಿಳಾ ಮಂಡಳ 34 ವರ್ಷಗಳಿಂದ ಸಮಾಜ ಸೇವೆಗಾಗಿ ನಿರಂತರ ಶ್ರಮಿಸುತ್ತಿರುವುದು ಶ್ಲಾಘನೀಯವಾಗಿದೆ. ಈ ಮಹಿಳಾ ಸಂಘಟನೆ ಇಷ್ಟೊಂದು ಗಟ್ಟಿಯಾಗಿ ನಿಂತು ಸಮಾಜಕ್ಕೆ ಮಾದರಿಯಾಗಿದ್ದಾರೆ. ಹೀಗಾಗಿ ಮಹಿಳೆಯರ ಶಕ್ತಿ ಇನ್ನಷ್ಟೂ ಬಲಗೊಳ್ಳಬೇಕಾದರೆ ಹೆಚ್ಚಿನ ಸಂಘಟನೆ ಸಮಾಜ ಸೇವೆ ಮಾಡಲು ಮುಂದೆ ಬರಬೇಕು ಎಂದು ಹೇಳಿದರು.
ಒಂದು ಸಂಘಟನೆ ಸಮಾಜದಲ್ಲಿ ಗಟ್ಟಿಯಾಗಿ ನೆಲ ನಿಂತಾಗ ಮಾತ್ರ ಆರ್ಥಿಕವಾಗಿ, ರಾಜಕೀಯವಾಗಿ, ಸಾಮಾಜಿಕವಾಗಿ ಅಭಿವೃದ್ಧಿಯನ್ನು ಸಾಧಿಸಲು ಅನುಕೂಲವಾಗಿದೆ. ಹೆಚ್ಚು ಮಕ್ಕಳ ಶಿಕ್ಷಣಕ್ಕೆ ಅತಿ ಮುಖ್ಯವಾಗಲಿದ್ದು, ಈ ಹಿನ್ನೆಲೆಯಲ್ಲಿ ಸಮಾಜವನ್ನು ಒಗ್ಗೂಡಿಸಲು ಸಂಘಟನೆ ಸಹಕಾರಿಯಾಗಲಿವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಹಿಳಾ ಮಂಡಳದ ಅಧ್ಯಕ್ಷೆ ರಾಜೇಶ್ವರಿ ಕಲೂತಿ ಸ್ವಾಗತಿದರು. ಸುನೀತಾ ಪಾಟೀಲ ಪ್ರಾಸ್ತವಿಕವಾಗಿ ಮಾತನಾಡಿದರು. ಉಪಾಧ್ಯಕ್ಷೆ ಲತಾ ಕರಡಿಗುದ್ದಿ ಅತಿಥಿಯ ಪರಿಚಯಿಸಿದರು. ಶೋಭಾ ಪಾಟೀಲ, ಈ ಕಾರ್ಯಕ್ರಮದಲ್ಲಿ ಮಹಿಳಾ ಮಂಡಳದಿಂದ ಶೈಲಜಾ ಭಿಂಗೆಯರಿಗೆ ಸನ್ಮಾನಿಸಲಾಯಿತು. ಶಾರದಾ ಪಾಟೀಲ, ವಿದ್ಯಾ ಗೌಡರ ಹಾಗೂ ಇತರರು ಇದ್ದರು. ಲಕ್ಷ್ಮೀ ಪಾಟೀಲ ನಿರೂಪಿಸಿದರು.