ಯಮಕನಮರಡಿ 05: ಸ್ಥಳೀಯ ಸುಕ್ಷೇತ್ರ ಹರಿ ಮಂದಿರವು ಗಡಿ ಮಹಾರಾಷ್ಟ್ರ ಹಾಗೂ ಕರ್ನಾಟಕ ಭಕ್ತರ ಕಾಮದೇನು ಕಲ್ಪವೃಕ್ಷ ವಾಖ್ಯ ಸಿದ್ದಿ ಪುರುಷರ ತಾನವಾಗಿ ಸುಮಾರು 800 ವರ್ಷಗಳ ಕಾಲ ಅಪಾರ ಭಕ್ತರನ್ನು ಭಕ್ತಿ ಸನ್ಮಾರ್ಗದಲ್ಲಿ ನಡೆಯುವಂತೆ ದಾರಿ ತೋರಿಸಿದ ಒಂದು ಗೃಹಸ್ತಾಶ್ರಮವಿದ್ದು ಇಲ್ಲಿ ಕೃಷ್ಣ ಮಂದಿರ ದತ್ತಾತ್ರೇಯ ಮಂದಿರ ಸೇರಿದಂತೆ ಮಹಾಭಾರತಕ್ಕೆ ಸಂಬಂಧಿಸಿದಂತೆ ಶ್ರೀ ಕೃಷ್ಣ ಲಿಲೆ ಅರ್ಜುನನ ಭಕ್ತಿ ಭಗವತಗೀತೆ ಸನಾತನ ಧರ್ಮ ಧಕ್ಷತೆ ಎಂಬಂತೆ ಸನಾತನ ಧರ್ಮರಕ್ಷಕ ಮಹಾಭಾರತ ಮಹಿಮೆ ಭಗವದ್ಗಿತೆಮಂತ್ರ ಭೋದಿಸುವ ತಾನ ಹರಿ ಮಂದಿರದ ಭೂ ಕೈಲಾಸವಾಗಿದೆ.
ಸದ್ಗುರು ಹರಿನಾಮ ಸಪ್ತಾಹ ಸೇರಿದಂತೆ ಮೂರು ದಿನಗಳ ಕಾಲ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಅಂಗವಾಗಿ ಮಕ್ಕಳ ಭಾವಗಿತೆ ಸ್ಪರ್ಧೆ ಭಗವದ್ಗಿತೆ ಪಾರಾಯಣ ಸ್ಪರ್ಧೆ, ಕಿರ್ತನೆ ಪ್ರಸಿದ್ದ ಕಲಾವಿದರಿಂದ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು. ದಿ. 1 ರಿಂದ ಪ್ರಾರಂಭವಾಗಿ ದಿ 3 ರ ವರೇಗೆ ಕಾರ್ಯಕ್ರಮದಲ್ಲಿ ದಿ 1 ರಂದು ಪೂಜೆ ಹರಿನಾಮ ಜಪ ದಿ. 2 ರಂದು ಗನ ಹೋಮ ಪಲ್ಲಕ್ಕಿ ಉತ್ಸವ ಇತ್ಯಾದಿ ಕಾರ್ಯಕ್ರಮಗಳು ಜರುಗಿ ದಿ. 3 ರಂದು ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ಈ ಎಲ್ಲ ಕಾರ್ಯಕ್ರಮಗಳ ದಿವ್ಯ ಸಾನಿಧ್ಯವನ್ನು ಶ್ರೀ ಮಠದ ಪೂಜ್ಯರಾದ ಡಾ. ಆನಂದ ಮಹಾರಾಜ ಗೋಸಾವಿ ವಹಿಸಿದ್ದರು. ಇದೇ ಸಂದರ್ಬದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಶಾಲಾ ವಿದ್ಯಾರ್ಥಿಗಳಿಗೆ ಹಾಗೂ ಕಲಾವಿದರಿಗೆ ಗೌರವ ಸನ್ಮಾನ ಪ್ರಮಾಣ ಪತ್ರ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಡಾ. ಶ್ರೀಶೈಲ ಮಠಪತಿ ಸಾ, ಜಿನರಾಳ, ಶಿಕ್ಷಕರಾದ ಎಸ್ ಆರ್ ತಬರಿ, ಸುನಿಲ ದೇಸಾಯಿ, ಗೋಪಾಲ ಚಪಣಿ ಉಪಸ್ಥಿತರಿದ್ದು ಡಾ. ಶ್ರೀಶೈಲ ಮಠಪತಿ ಅವರು ಪ್ರಾಸ್ಥಾವಿಕವಾಗಿ ಮಾತನಾಡಿ ಶ್ರೀಮಠದ ಆಚಾರ ವಿಚಾರ ಬಡ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಶಿಷ್ಯವೇತನ ಸೇರಿದಂತೆ ಎಲ್ಲರ ಮನದಲ್ಲಿ ಭಕ್ತಿ ಭಾವ ಮೂಡಿಸುವುದರ ಜೋತೆಗೆ ಶ್ರೀ ಮಠವೂ ಒಂದು ಆದ್ಯಾತ್ಮಿಕ ಕೇಂದ್ರವಾಗಿದೆ ಎಂದೂ ಹೇಳಿದರು.
ಪ.ಪೂಜ್ಯ ಶ್ರೀ. ಆನಂದ ಮಹಾರಾಜರು ಭಗವದ್ಗಿತೆ ಪಾರಾಯಣ ಸ್ಪರ್ಧೆಯಲ್ಲಿ ಪಾಲ್ಗೋಂಡ ಕಾಲೇಜು ವಿದ್ಯಾರ್ಥಿಗಳನ್ನು ಹಾಗೂ ಪ್ರಾಥಮಿಕ ಮಕ್ಕಳನ್ನು ಉದ್ದೇಶಿಸಿ ಆಶಿರ್ವಚನ ನೀಡಿದರು.