ಮಾಸ್ಕೋ, ಫೆಬ್ರವರಿ 20, ಅಮೆರಿಕ ಮೂಲದ ದಂಗೆಕೋರ, ಇಸ್ಲಾಮಿಕ್ ಪಾದ್ರಿ ಫೆತುಲ್ಲಾ ಗುಲೆನ್ ಅವರೊಂದಿಗೆ ಸಂಪರ್ಕ ಹೊಂದಿದ ಆರೋಪದ ಮೇರೆಗೆ 36 ಜನರನ್ನು ಟರ್ಕಿ ಪೊಲೀಸರು ಬಂಧಿಸಿದ್ದಾರೆ. ಫೆತುಲ್ಲ 2016 ರ ವಿಫಲ ದಂಗೆಯ ಮಾಸ್ಟರ್ ಮೈಂಡ್ ಎಂದು ಟರ್ಕಿಶ್ ಮಾಧ್ಯಮ ವರದಿ ಮಾಡಿದೆ.26 ಪ್ರಾಂತ್ಯಗಳಲ್ಲಿ ಬುಧವಾರ ಈ ದಾಳಿ ನಡೆಸಲಾಗಿದೆ, ಪ್ರಾಸಿಕ್ಯೂಟರ್ಗಳು 35 ಸೈನಿಕರು ಸೇರಿದಂತೆ 55 ಜನರಿಗೆ ಬಂಧನ ವಾರಂಟ್ ಹೊರಡಿಸಿದ್ದಾರೆ ಎಂದು ಅನಾಡೋಲು ಸುದ್ದಿ ಸಂಸ್ಥೆ ತಿಳಿಸಿದೆ.ಉಳಿದ ಶಂಕಿತರಿಗಾಗಿ ಪೊಲೀಸರು ಶೋಧ ಮುಂದುವರಿಸಿದ್ದಾರೆ ಎಂದೂ ವರದಿಯಾಗಿದೆ.ಗುಲೆನ್ ಮತ್ತು ಅವರ ಅನುಯಾಯಿಗಳು 2016 ರಲ್ಲಿ ನಡೆಸಿದ ದಂಗೆಯಲ್ಲಿ 251 ಜನರು ಮೃತಪಟ್ಟು, 2,200 ಮಂದಿ ಗಾಯಗೊಂಡಿದ್ದರು.