ವಾಷಿಂಗ್ಟನ್, ಏ 10, ಚಾಗೋಸ್ ಆರ್ಚಿಪೆಲಾಗೋ ಪ್ರದೇಶದಲ್ಲಿ ಗುರುವಾರ ಭೂಕಂಪ ಸಂಭವಿಸಿದೆ ಎಂದು ಅಮೆರಿಕದ ಭೂಗರ್ಭ ಸರ್ವೇಕ್ಷಣಾಲಯ ತಿಳಿಸಿದೆ. ಗುರುವಾರ ಗ್ರೀನ್ ವಿಚ್ ಕಾಲಮಾನ 17.26 ರ ಸುಮಾರಿಗೆ ಸಂಭವಿಸಿದ ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 5.4 ರಷ್ಟು ದಾಖಲಾಗಿತ್ತು.5.315 ಡಿಗ್ರಿ ದಕ್ಷಿಣ ರೇಖಾಂಶದಲ್ಲಿ 68.6672 ಡಿಗ್ರಿ ಪೂರ್ವ ಅಕ್ಷಾಂಶದಲ್ಲಿ 10 ಕಿಲೋಮೀಟರ್ ಆಳದಲ್ಲಿ ಭೂಕಂಪದ ಕೇಂದ್ರ ಬಿಂದು ಇತ್ತು ಎಂದು ವರದಿಯಾಗಿದೆ. ಯಾವುದೇ ಸಾವು ನೋವಿನ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.