ಗದಗ 17: ನಗರದ ಎಚ್.ಕೆ. ಪಾಟೀಲ್ ಅಸ್ಫೋ ಟರ್ಫ್ ಮೈದಾನದಲ್ಲಿ ಮೇ. 16ರ ಶುಕ್ರವಾರ ನಡೆದ ಗದಗ ಗ್ರಾಮೀಣ ಕೆ.ಎಸ್.ಸಿ.ಎ. ಅಂಡರ್-19 ಕ್ರಿಕೆಟ್ ತಂಡಕ್ಕೆ ಹಾವೇರಿ ಜಿಲ್ಲೆಯಿಂದ ಏಳು ಆಟಗಾರರು ಆಯ್ಕೆಯಾಗಿದ್ದಾರೆ.
ಹಾವೇರಿಯ ಕ್ರಿಕೆಟ್ ಆಟಗಾರರಾದ ಚಿನ್ಮಯ ಹಿರೇಮಠ, ಮಲಿಕ್ ರೆಹನ್, ಅಕ್ಷಯ ಹಿರೇಮಠ, ಸುಹಾನ ಸನ್ನುಖಾನವರ, ಪ್ರೀತಮ್ ಜಾಡರ, ನವಾಜ್ ನದಾಫ್, ರಾಮೇಶ್ವರ ಪಾಂಡೇ ಅವರುಗಳು ಕೆ.ಎಸ್.ಸಿ.ಎ. ಅಂಡರ್-19 ಕ್ರಿಕೆಟ್ ತಂಡಕ್ಕೆ ಆಯ್ಕೆಯಾದ ಆಟಗಾರರಾಗಿದ್ದು, ಇವರುಗಳಿಗೆ ಹಾವೇರಿ ಎಟುಎಸ್ ಕ್ರಿಕೆಟ್ ಅಕಾಡೆಮಿ ತರಬೇತುದಾರ ಅರುಣ್ ಸದಣ್ಣವರ್ ಮತ್ತು ಆದಿಲ್ ಸನ್ನುಖಾನವರ ತರಬೇತಿ ನೀಡಿದ್ದಾರೆ.