ಜಿಲ್ಲೆಯ ಮಗುವನ್ನು ದತ್ತು ಪಡೆದ ಹಿಮಾಚಲ ಪ್ರದೇಶದ ಕುಟುಂಬ

A family from Himachal Pradesh adopted a child from the district

ವಿಜಯಪುರ 17: ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ದತ್ತು ಸಂಸ್ಥೆಯ ವ್ಯಾಪ್ತಿಯಲ್ಲಿರುವ ವಿಶೇಷ ಅಗತ್ಯತೆವುಳ್ಳ ಮಗುವೊಂದನ್ನು ಹಿಮಾಚಲ ಪ್ರದೇಶದ ಕುಟುಂಬವೊಂದು ದತ್ತು ಪಡೆದುಕೊಂಡಿದೆ.  

ವಿಶೇಷ ಅಗತ್ಯತೆವುಳ್ಳ ಮಗುವನ್ನು ದತ್ತು ಪಡೆಯಲು ಅರ್ಜಿ ಸಲ್ಲಿಸಿದ ಹಿನ್ನಲೆಯಲ್ಲಿ ಶನಿವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಹಿಮಾಚಲ ಪ್ರದೇಶದ ಕುಟುಂಬಕ್ಕೆ ಮಾರ್ಗಸೂಚಿಯನ್ವಯ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಮಗುವನ್ನು ಕುಟುಂಬಕ್ಕೆ ಹಸ್ತಾಂತರಿಸುವ ಮೂಲಕ ಮಗುವನ್ನು ಪಾಲಕರ ಮಡಿಲಿಗೆ ನೀಡಿದರು.  

ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕ ಕೆ.ಕೆ.ಚವ್ಹಾಣ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಅನೀಲ ಹಳ್ಳಿ, ದತ್ತು ಸಂಸ್ಥೆಯ ಅಧಿಕಾರಿಗಳು ಉಪಸ್ಥಿತರಿದ್ದರು.