ಗದಗ 06: ಪಶು ಆಸ್ಪತ್ರೆ ಗದಗ ಆವರಣದಲ್ಲಿ ಜಿಲ್ಲಾ ಪಂಚಾಯತ ಗದಗ ಹಾಗೂ ಪಶು ಪಾಲನೆ ಮತ್ತು ಪಶು ವೈದ್ಯ ಸೇವಾ ಇಲಾಖೆ ಗದಗ ಇವರ ಸಂಯುಕ್ತ ಆಶ್ರಯದಲ್ಲಿ ಗದಗ ಜಿಲ್ಲಾ ಪಶು ವೈದ್ಯರುಗಳಿಗೆ ಒಂದು ದಿನದ ತಾಂತ್ರಿಕ ಸಮ್ಮೇಳನವನ್ನು ದಿ. 5ರಂದು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಜಿಲ್ಲಾಧಿಕಾರಿಗಳಾದ ಎಂ.ಜಿ ಹಿರೇಮಠ ಉದ್ಘಾಟನೆ ನೆರವೆರಿಸಿ ಮಾತನಾಡುತ್ತಾ, "ಪಶು ಸಂಪತ್ತು ದೇಶದ ಸಂಪತ್ತು" ಅದನ್ನು ಉಳಿಸಿ ಬೆಳೆಸುವುದು ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯವಾಗಿರುತ್ತದೆ. ಮೂಕ ಪ್ರಾಣಿಗಳ ಸೇವೆ ಸಲ್ಲಿಸುತ್ತಿರುವ ಪಶು ವೈದ್ಯರ ಕಾರ್ಯ ಶ್ಲಾಘನೀಯ. ಈ ತರಭೇತಿಯು ವೈಜ್ಞಾನಿಕವಾಗಿ ಸದ್ಯ ಬೇಳವಣಿಗೆಗಳ ಕುರಿತು ತರಬೇತಿಯನ್ನು ಹಮ್ಮಿಕೊಂಡು ರೈತರಿಗೆ ತಲುಪಿಸುವ ಕಾರ್ಯವು ಅತ್ಯವಶ್ಯಕವಾಗಿರುತ್ತದೆ. ಇಂದಿನ ದಿನ ತಾವು ಹಮ್ಮಿಕೊಂಡಿರುವ ತರಬೇತಿ ಕಾರ್ಯಕ್ರಮವು ಕಾಲೊಚಿತವಾಗಿದ್ದು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಪಶು ವೈದ್ಯರಿಗೆ ಕರೆ ನೀಡಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಡಾ. ಆರ್ ನಾಗರಾಜ, ಡೀನ್ ಪಶು ವೈದ್ಯಕೀಯ ಮಹಾವಿದ್ಯಾಲಯ ಗದಗ ಇವರು ಹಾಜರಿದ್ದರು. ಈ ತರಬೇತಿ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾದ ಡಾ. ಜಗನ್ನಾಥ ರಾವ್ ಹಾಗೂ ಡಾ. ಸುಪ್ರಿತ್ ಉಪನ್ಯಾಸ ನೀಡಿದರು. ಪ್ರಾಸ್ತವಿಕವಾಗಿ ಡಾ. ಚೆನ್ನಕೇಶವಯ್ಯ, ಉಪನಿರ್ದೇಶಕರು ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಗದಗ ಇವರು ಇಲಾಖೆಯ ಕಾರ್ಯ ಚಟುವಟಿಕೆಗಳನ್ನು ಸವಿಸ್ತರವಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಡಾ. ತಿಪ್ಪಣ್ಣ ತಳಕಲ್, ಡಾ. ಎಚ್ ಎಸ್ ಜಿನಗಿ, ಡಾ. ಬಸವರಾಜ ಅಂಗಡಿ, ಜಿಲ್ಲೆಯ ಎಲ್ಲಾ ಸಹಾಯಕ ನಿರ್ದೇಶಕರು ಹಾಗೂ ಪಶು ವೈದ್ಯಾಧಿಕಾರಿಗಳು ಈ ಕಾರ್ಯಕ್ರಮಕ್ಕೆ ಹಾಜರಾಗಿದ್ದರು.