ಯುಪಿಯಲ್ಲಿ ಅಪಘಾತ: ಮೂವರ ಕಾರ್ಮಿಕರ ದುರ್ಮರಣ

ಜಾನ್ಸಿ, ಮೇ 19,  ಉತ್ತರ ಪ್ರದೇಶದಲ್ಲಿ ವಲಸೆ ಕಾರ್ಮಿಕರ ಅಪಘಾತ, ಸಾವಿನ ಸರಣಿ ಮುಂದುವರೆದಿದ್ದು,  ಜಾನ್ಸಿ-ಮಿರ್ಜಾಪುರ್ ಹೆದ್ದಾರಿಯಲ್ಲಿ  ವಾಹನ ಮುಗುಚಿ ಬಿದ್ದು ಮತ್ತೆ ಮೂವರು ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಸಂಭವಿಸಿದೆ  ಉತ್ತರ ಪ್ರದೇಶದ ಅಲಹಾಬಾದ್ ಸಮೀಪ ಹೆದ್ದಾರಿಯಲ್ಲಿ ತಡ  ರಾತ್ರಿ ಈ ಅಪಘಾತ ಸಂಭವಿಸಿದ್ದು, ವಾಹನದಲ್ಲಿ   17 ವಲಸೆ ಕಾರ್ಮಿಕರು ಪ್ರಯಾಣಿಸುತ್ತಿದ್ದರು. ಇದರಲ್ಲಿ ಮೂವರು ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದು, 12 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.