ಕ್ರೀಡಾಕೂಟ ಸ್ಪರ್ದೇಯಲ್ಲಿ ಸಾಧನೆ

ಲೋಕದರ್ಶನ ವರದಿ

ಬೆಳಗಾವಿ 17: ರಾಣಿ ಚನ್ನಮ್ಮಾ ವಿಶ್ವವಿದ್ಯಾಲಯ ಹಾಗೂ ಕೆ.ಎಲ್.ಇ ಸಂಸ್ಥೆಯ ಜಿ. ಆಯ್. ಬಾಗೇವಾಡಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ಜರುಗಿದ ಎಕವಲಯ ಈಜು ಪಂದ್ಯಾವಳಿಯಲ್ಲ್ಲಿ ಲಿಂಗರಾಜ ಮಹಾವಿದ್ಯಾಲಯದ ಬಿ.ಕಾಂ ಮೂರನೇ ಸೆಮಿಸ್ಟರ್ನ ವರುಣ ಬಳ್ಳೊಳ್ಳಿ ವಿಜೇತರಾಗಿ 10 ಚಿನ್ನದ ಪದಕ ಹಾಗೂ ಒಂದು ಕಂಚಿನ ಪದಕ ಪಡೆದಿದ್ದಾರೆ.

ಕಳೆದ ತಿಂಗಳು ರಾಜ್ಯಮಟ್ಟದ ದಸರಾ ಕ್ರೀಡಾಕೂಟದ ಈಜು ಸ್ಪರ್ಧೆಯಲ್ಲಿ ವಿಜೇತರಾಗಿ 5 ಚಿನ್ನನ ಪದಕ ಹಾಗೂ ಮೂರು ಕಂಚಿನ ಪದಕ ಪಡೆದಿದ್ದಾರೆ. ವಿಶೇಷ ಸಾಧನೆ ಮಾಡಿದ ಮಹಾವಿದ್ಯಾಲಯದ ವಿದ್ಯಾರ್ಥಿಯನ್ನು ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ಆರ್.ಎಂ.ಪಾಟೀಲ, ಜಿಮಖಾನಾ ಉಪಾಧ್ಯಕ್ಷರಾಧ ಪ್ರೊ.ಎಂ.ಆರ್.ಬನಹಟ್ಟಿ, ಎನ್.ಆಯ್.ಎಸ್ ತರಬೇತುದಾರರಾದ ಶ್ಯಾಮ ಮಲೈ ಹಾಗೂ ದೈಹಿಕ ನಿರ್ದೇಶಕರಾದ ಶ್ರೀ.ಸಿ.ರಾಮರಾವ್  ಮತ್ತು ಸಮಸ್ತ ಸಿಬಂದ್ದಿ ವರ್ಗದವರು ಅಭಿನಂದಿಸಿದರು.