ಲಕ್ನೋ, ಜ 22 : ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ಕುರಿತು ಚರ್ಚೆಗೆ ಬರಬೇಕೆಂಬ ಸವಾಲು ಸ್ವೀಕರಿಸಲು ಸಿದ್ದವಿರುವುದಾಗಿಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಹೇಳಿದ್ದಾರೆ .
ಸಿಎಎ ಮತ್ತು ಎನ್‌ಆರ್‌ಸಿ ಕುರಿತು ಬಿಜೆಪಿ ನಾಯಕರೊಂದಿಗೆ ಚರ್ಚಿಸಲು ಸಿದ್ಧನಿದ್ದೇನೆ. ಆದರೆ ಆರ್ಥಿಕ ಹಿಂಜರಿತ, ನಿರುದ್ಯೋಗ, ಬಡತನ ಮುಂತಾದ ಜ್ವಲಂತ ವಿಷಯಗಳ ಬಗ್ಗೆಯೂ ಬಿಜೆಪಿ ನಾಯಕರು ಚರ್ಚೆಗೆ ಸಿದ್ದವಾಗಿರಬೇಕು ಎಂದೂ ಅವರು ಪ್ರತಿ ಸವಾಲು ಹಾಕಿದ್ದಾರೆ.
ಜನೇಶ್ವರ ಮಿಶ್ರಾ ಪಾರ್ಕ್‌ನಲ್ಲಿ ಹನೇಶ್ವರ ಮಿಶ್ರಾ ಅವರ ಪುಣ್ಯ ಸ್ಮರಣೆಯ ಅಂಗವಾಗಿ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ಯಾದವ್, ಬಿಜೆಪಿ ಸರ್ಕಾರ ಸಂವಿಧಾನದಂತಹ ಮಹತ್ವದ ವಿಚಾರದಲ್ಲಿ ಚೆಲ್ಲಾಟವಾಡುತ್ತಿದೆ ಎಂದೂ ಅವರು ದೂರಿದರು.
"ದೇಶದ ಪ್ರತಿಯೊಬ್ಬ ನಾಗರಿಕಕರು ಸಿಎಎ ಬಗ್ಗೆ ಆಕ್ರೋಶಗೊಂಡಿದ್ದಾರೆ ಏಕೆಂದರೆ ಇದು ಧರ್ಮದ ಆಧಾರದಲ್ಲಿ ತಾರತಮ್ಯ ಮಾಡುವ ಕಾನೂನು ಆಗಿದೆ ಎಂದು ಅವರು ಹೇಳಿದರು.
ಜಾತಿ ಆಧಾರಿತ ಜನಗಣತಿಗೆ ತನ್ನ ಬೇಡಿಕೆಯನ್ನು ಪುನರುಚ್ಚರಿಸಿದ ಅವರು, ವಿವಾದಾತ್ಮಕ ಸಿಎಎ ತರುವ ಮೂಲಕ ಬಿಜೆಪಿ ದೇಶವನ್ನು ಹಾಳು ಮಾಡಲು ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿಎಎ ವಿರುದ್ಧದ ಪ್ರತಿಭಟನೆ ಇಡೀ ದೇಶದಲ್ಲಿ ಮತ್ತು ವಿಶ್ವದ ಇತರ ಭಾಗಗಳಲ್ಲಿಯೂ ಪ್ರತಿಭಟನೆ ನಡೆಯುತ್ತಿದೆ ಇದನ್ನು ಕೇಂದ್ರ ಅರಿಯಬೇಕು ಎಂದರು .
ಸಿಎಎ ಪ್ರತಿಭಟನಾನಿರತರ ಮೇಲೆ ಕೀಳು ಬಾಷೆ ಬಳಸಿದಅಮಿತ್ ಅವರ ನಡೆಯನ್ನು ಯಾದವ್ ಟೀಕಿಸಿದರು.
ದಿವಂಗತ ಜಾನೇಶ್ವರ ಮಿಶ್ರಾ ಬಗ್ಗೆ ಮಾತನಾಡಿದ ಅವರು, ಚೋಟೆ ಲೋಹಿಯಾ ಒಬ್ಬ ಮಹಾನ್ ಸಮಾಜವಾದಿ ನಾಯಕ ನಮ್ಮ ತಂದೆ ಮುಲಾಯಂ ಅವರ ದೊಡ್ಡ ಅನುಯಾಯಿ, ಅಭಿಮಾನಿಯಾಗಿದ್ದರು ಸಮಾಜವಾದಿಗಳು ದೇಶದ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ ಎಂದೂ ಯಾದವ್ ಹೇಳಿದರು.