ವಿಕಲಚೇತನರ ರಿಯಾಯಿತಿ ಬಸ್ ಪಾಸ ನವೀಕರಣಕ್ಕೆ ಅವಕಾಶ

Allowance for renewal of concession bus pass for disabled persons

ಬೆಳಗಾವಿ ಡಿ.30: 2024ನೇ ಸಾಲಿನ ವಿಕಲಚೇತನರ ರಿಯಾಯಿತಿ ಬಸ್ ಪಾಸುಗಳನ್ನು ನವೀಕರಿಸಲು ಚಾಲ್ತಿ ಪಾಸು ಹೊಂದಿರುವ ಅರ್ಹ ವಿಕಲಚೇತನರ ರಿಯಾಯಿತಿ ದರದ ಪಾಸುಗಳನ್ನು ಚಿಕ್ಕೋಡಿ, ಸಂಕೇಶ್ವರ, ಗೋಕಾಕ, ನಿಪ್ಪಾಣಿ, ರಾಯಬಾಗ ಆಥನ ಮತ್ತು ಹುಕ್ಕೇರಿ ಪಾಸ ಕೌಂಟರಗಳಲ್ಲಿ ನವೀಕರಣ ಮಾಡಲು ಅವಕಾಶ ಕಲ್ಪಿಸಲಾಗಿದೆ.  

ಫಲಾನುಭವಿಗಳು 2024ನೇ ಸಾಲಿನ ಪಾಸುಗಳ ನವೀಕರಣ ಮತ್ತು ನೂತನ ಪಾಸುಗಳಿಗೆ ರೂ.66 

0/- ನಗದು ರೂಪದಲ್ಲಿ ಅಥವಾ ಡಿ.ಡಿ ರೂಪದಲ್ಲಿ ಶುಲ್ಕವನ್ನು ಪಾವತಿಸಿ ವಿಕಲಚೇತನರ ಬಸ್ ಪಾಸ್ ನವೀಕರಿಸಿಕೊಳ್ಳುವುದು. 2024 ರಲ್ಲಿ ವಿತರಿಸಿರುವ ಬಸ್ ಪಾಸ್‌ಗಳನ್ನು ದಿ.28.02.2025 ವರೆಗೆ ಮಾನ್ಯ ಮಾಡಲಾಗುತ್ತದೆ. ಅವಧಿಯ ಒಳಗಾಗಿ ಎಲ್ಲ ಫಲಾನುಭವಿಗಳು ತಮ್ಮ ಪಾಸುಗಳನ್ನು ನವೀಕರಿಸಿಕೊಳ್ಳಲು ಕೋರಲಾಗಿದೆ. ತದ ನಂತರ ಬಂದ ಪಾಸುಗಳನ್ನು ನವೀಕರಿಸಲಾಗುವುದಿಲ್ಲ. ಫಲಾನುಭವಿಗಳು ಸೇವಾ ಸಿಂಧುವಿನಲ್ಲಿ ಅರ್ಜಿಯನ್ನು ಸಲ್ಲಿಸಿದಲ್ಲಿ ಮಾತ್ರ ವಿಕಲಚೇತನರ ರಿಯಾಯತಿ ಬಸ್ ಪಾಸುಗಳನ್ನು ವಿತರಿಸಲಾಗುವುದು.  

2025 ಸಾಲಿನಲ್ಲಿ ಅರ್ಹ ವಿಕಲಚೇತನರಿಗೆ ಹೊಸದಾಗಿ ಪಾಸುಗಳನ್ನು ದಿನಾಂಕ:01.01.2025 ರಿಂದ ವಿತರಿಸಲಾಗುತ್ತಿದೆ. ರಿಯಾಯಿತಿ ಬಸ್ ಪಾಸ ಪಡೆದುಕೊಳ್ಳಲು ವೈದ್ಯಕೀಯ ಪ್ರಮಾಣ ಪತ್ರ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳಿಂದ ಧೃಡೀಕರಿಸಿದ ಗುರುತಿನ ಚೀಟಿ, ಅಥವಾ ಯು.ಡಿ.ಆಯ್‌.ಡಿ ಕಾರ್ಡ ನಕಲು ಪ್ರತಿ, ಆಧಾರ ಕಾರ್ಡ, ರೂ.100 ಛಾಪಾ ಕಾಗದ ಮೇಲೆ ಸರಕಾರಿ ನೌಕರಿ/ ಅರೇ ಸರಕಾರಿ ನೌಕರಿ ಮಾಡುತ್ತಿಲ್ಲ. ಎಂಬ ದೃಢೀಕರಣ ಸಲ್ಲಿಸುವುದರೊಂದಿಗೆ ಮೂರು ಇತ್ತಿಚಿನ ಭಾವಚಿತ್ರಗಳೊಂದಿಗೆ ಮತ್ತು ಸದರಿ ದಾಖಲಾತಿಗಳನ್ನು ಸೇವಾ ಸಿಂಧುವಿನಲ್ಲಿ ಅರ್ಜಿಯನ್ನು ದಾಖಲಿಸಿದ ನಂತರ ವಿಭಾಗೀಯ ಕಛೇರಿ ಚಿಕ್ಕೋಡಿ ಇವರಲ್ಲಿ ಪ್ರತಿ ಬುಧವಾರ ಖುದ್ದಾಗಿ ಹಾಜರಾಗಿ ದಾಖಲೆಗಳನ್ನು ಸಲ್ಲಿಸಿ ಪಾಸ್ ಪಡೆಯಬಹುದಾಗಿರುತ್ತದೆ.  

ತಮ್ಮ ವಾಸಸ್ಥಳದಿಂದ 100 ಕಿ.ಮೀ ಗರಿಷ್ಠ ಅಂತರದವರೆಗೆ ಸಂಸ್ಥೆಯ ವೇಗದೂತ ಮತ್ತು ಸಾಮಾನ್ಯ ಸಾರಿಗೆ ಬಸ್ಸುಗಳಲ್ಲಿ ಕರ್ನಾಟಕ ರಾಜ್ಯದೊಳಗೆ ಮಾತ್ರ ಪ್ರಯಾಣಿಸಲು ಅವಕಾಶ ವಿರುತ್ತದೆ. ಹೊಸದಾಗಿ ಪಾಸು ಪಡೆದುಕೊಳ್ಳಲು ಯಾವುದೇ ಕಾಲಮಿತಿ ಇರುವದಿಲ್ಲ.  

ಸದರಿ ಆಸಕ್ತರು ಪಾಸುಗಳನ್ನು ದಿನಾಂಕ:01.01.2025 ರಿಂದ ದಿನಾಂಕ:28.02.2025ರ ವರೆಗೂ ನವೀಕರಸಲಾಗುತ್ತದೆ. ಅರ್ಜಿಗಳನ್ನು ವೇಬ್‌ಸೈಟ್ https://sevasindhu.karnataka.gov.inನಲ್ಲಿ ನಮೂದಿಸಬಹುದಾದಿದೆ ಎಂದು ವಾಕರಸಾಸಂಸ್ಥೆ ಚಿಕ್ಕೋಡಿ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.