ಅಂಬೇಡ್ಕರ್ ಜಯಂತಿ: ಅಂಬೇಡ್ಕರ್ ಕಪ್ ಮಹಾನಾಯಕ ಕ್ರಿಕೆಟ್ ಟೂರ್ನಿಗೆ ಚಾಲನೆ

Ambedkar Jayanti: Ambedkar Cup Mahanayak Cricket Tournament kicks off

ವಿಜಯಪುರ 28: ದಲಿತ ವಿದ್ಯಾರ್ಥಿ ಪರಿಷತ್ ವಿಜಯಪುರ ಜಿಲ್ಲಾ ಘಟಕದ ವತಿಯಿಂದ ವಿಶೇಷ ನಾಲ್ಕು ದಿನದ ಡಾ. ಬಾಬಾಸಾಹೇಬರ ಅಂಬೇಡ್ಕರ್ ಜಯಂತ್ಯೋತ್ಸವದ ನಿಮಿತ್ಯವಾಗಿ ಅಂಬೇಡ್ಕರ ಕಪ್ ಮಹಾನಾಯಕ ಕ್ರಿಕೆಟ್ ಟೂರ್ನಮೆಂಟ್‌ನ್ನು ನಗರದ ಜಿಲ್ಲಾ ಪಂಚಯತಿ ಮೈದಾನದಲ್ಲಿ ಇಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಪುಂಡಲೀಕ್ ಮಾನವರ ಉದ್ಘಾಟಿಸಿದರು.  

ಅಧ್ಯಕ್ಷತೆಯನ್ನು ವಹಿಸಿದ ದಲಿತ ವಿದ್ಯಾರ್ಥಿ ಪರಿಷತ್ ಸಂಸ್ಥಾಪಕ ರಾಜ್ಯಧ್ಯಕ್ಷ ಶ್ರೀನಾಥ್ ಪೂಜಾರಿ ಅವರು ಮಾತನಾಡಿ ಜಿಲ್ಲೆಯ ಕಾಲೇಜು ಮತ್ತು ವಸತಿ ನಿಲಯ ಹಾಗೂ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ಈ ಕ್ರಿಕೆಟ್ ಟೂರ್ನಿಯಲ್ಲಿ ಭಾಗವಹಿಸಲು ಮುಕ್ತ ಅವಕಾಶ ಇರಲಿದೆ.  

ಕ್ರೀಡಾ ಕ್ಷೇತ್ರದಲ್ಲಿ ಆಸಕ್ತಿ ಇರುವ ವಿದ್ಯಾರ್ಥಿಗಳಿಗೆ ಇದೊಂದು ಒಳ್ಳೆ ಅವಕಾಶ ಇರಲಿದೆ ಎಲ್ಲರು ಭಾಗವಹಿಸಿ. ಗೆಲ್ಲುಹುದು ಸೋಲುಹುದು ಮುಖ್ಯವಲ್ಲ ಮೈದಾನದಲ್ಲಿಳಿದು ಆಡುವ ಧೈರ್ಯವೂ ಕೂಡ ಒಂದು ಗೆಲುವೇ ಎಂದರು ಹೇಳಿದರು. 

ಫೈನಲ್ ವಿಜೇತ ತಂಡಕ್ಕೆ ಪ್ರಥಮ ಬಹುಮಾನ 15000 ಸಾವಿರ, ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿ ಪಡುವ ತಂಡಕ್ಕೆ ದ್ವಿತೀಯ ಬಹುಮಾನ 10,000 ಸಾವಿರ ಬಹುಮಾನ ಇರಲಿದೆ.  

ಜಿಲ್ಲಾ ಸಂಚಾಲಕ ಅಕ್ಷಯ್ ಕುಮಾರ್ ಅಜಮನಿ ಅವರು ಮಾತನಾಡಿ ಹದಿಮೂರನೇ ತಾರಿಕಿನಂದು ಅಂಬೇಡ್ಕರ್ ಸರ್ಕಲ್‌ನಲ್ಲಿ ನಡೆಯುವ ಅಂಬೇಡ್ಕರ್ ಹಬ್ಬ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಜಿಲ್ಲೆಯಿಂದ ಆಗಮಿಸಿದ ಗಣ್ಯವ್ಯಕ್ತಿಗಳಿಂದ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಭಾಗವಹಿಸಿದ ಪ್ರತಿಯೊಬ್ಬರಿಗೂ ಪ್ರಶಸ್ತಿ ಪ್ರಮಾಣ ನೀಡಲಾಗುವುದು ಎಂದು ಮಾಹಿತಿ ನೀಡಿದರು. 

ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಬಿ. ಜಿ ಇಂಡಿ ಯವರು ವಿದ್ಯಾರ್ಥಿಗಳು ಬಲಶಾಲಿಯಾಗಿರಬೇಕೆಂದರೆ ಆಟದ ಮೈದಾನದಲ್ಲಿ ಚಳಿ ಬಿಸಿಲು ಮಳೆಯನ್ನದೆ ಆಡಿದಾಗ ಮಾತ್ರ ಎಂದರು. 

ಇಲಾಖೆಯ ನಿಲಯ ಪಾಲಕ ಆನಂದ ಕಳಸಗೊಂಡ, ಸದಾನಂದ ಬಡಿಗೇರ್, ಕಚೇರಿ ಅಧೀಕ್ಷಕರಾದ ಅರವಿಂದ ಲಂಬು, ವಿದ್ಯಾರ್ಥಿ ಪರಿಷತ್ ಮುಖಂಡರಾದ ಮಾದೇಶ್ ಚಲವಾದಿ, ಸಂದೇಶ್ ಕುಮುಟಗಿ, ಶೆಂಕರ್ ಬಸರಗಿ, ದಾವೂದ್ ನಾಯ್ಕೊಡಿ, ಅಕ್ಷಯ್, ಆಕಾಶ್, ಮುಂತಾದವರು ಮತ್ತು ವಿದ್ಯಾರ್ಥಿಗಳು  ಕ್ರೀಡಾ ಪಟುಗಳು ಭಾಗಿಯಾಗಿದ್ದರು.