ಅಳಿವಿನ ಅಂಚಿಗೆ ಪುರಾತನ ಕಾಲದ ಕೋಟೆ

An ancient fort on the brink of extinction

ಅಳಿವಿನ ಅಂಚಿಗೆ ಪುರಾತನ ಕಾಲದ ಕೋಟೆ 

ಯಮಕನಮರಡಿ 15: ಸುಮಾರು 2ನೇ ಪುಲಕೇಶಿ ಆಳ್ವಿಕೆಯಲ್ಲಿ ನಿರ್ಮಾಣವಾಗಿರುವ ಪುರಾತನ ಕಾಲದ ದೇವಾಲಯಗಳು ಹಾಗೂ ಕೋಟೆಗಳು ಇತ್ತೀಚಿನ ದಿನಗಳಲ್ಲಿ ಕಣ್ಮರೆಯಾಗುತ್ತಿರುವುದು ನೋವಿನ ಸಂಗತಿ. ಹತ್ತರಗಿಯಿಂದ ಹುಕ್ಕೇರಿ ಕಡೆಗೆ ಹೋಗುವ ರಸ್ತೆ ಬದಿಗೆ ಇರುವ ಶಿಖರೇಶ್ವರ ಮಂದಿರ ಇದು 2ನೇ ಪುಲಕೇಶಿ ಕಾಲದಲ್ಲಿ ನಿರ್ಮಾಣವಾದ ಪ್ರಾಚೀನ ಮಂದಿರ. ಅದರಂತೆ ಹತ್ತರಗಿ ಗ್ರಾಮ ಮಧ್ಯದಲ್ಲಿರುವ ಕಲ್ಮೇಶ್ವರ ಮಂದಿರವು ಒಂದು ಅಲ್ಲಿಂದ ಬರುತ್ತಿದ್ದಂತೆಯೆ ಯಮಕನಮರಡಿಯಲ್ಲಿರುವ ಐದು ದೇವಾಲಯ ಅದರಂತೆ ಬಜಾರ ಮಧ್ಯದಲ್ಲಿರುವ ವೇಣುಗೋಪಾಲ ಮಂದಿರ ಮತ್ತು ಭವ್ಯವಾದ ಕೋಟೆ ಈ ಎಲ್ಲ ಕೋಟೆ ಮತ್ತು ದೇವಾಲಯಗಳು ಅವನತಿ ಹೊಂದುತ್ತಿರುವುದನ್ನು ಕಂಡರೆ ಬಹಳಷ್ಟು ಜನರಿಗೆ ದುಃಖ ವೆನಿಸುತ್ತದೆ. ಈ ದೇವಾಲಯದ ಸುತ್ತಮುತ್ತ ಅತೀಕ್ರಮಣ ಹಾಗೂ ಇತರೆ ಕಟ್ಟಡಗಳು ನಿರ್ಮಾಣವಾಗಿ ಈ ಪುರಾತನ ಕಟ್ಟಡ ಮತ್ತು ದೇವಾಲಯಗಳು ಕಣ್ಮರೆಯಾಗುತ್ತಿವೆ. ಆದರೆ ಈ ಬಗ್ಗೆ ಪುರಾತತ್ವ ಇಲಾಖೆ ಏಕೆ ಕಣ್ಣು ಮುಚ್ಚಿ ಕುಳಿತಿದೆ? ಎಂದು ಗ್ರಾಮಸ್ಥರು ಮಾತನಾಡುತ್ತಿದ್ದಾರೆ. ಅಲ್ಲದೇ ಸಾಕಷ್ಟು ದೇವಾಲಯಗಳು ಬೇರೆಯವರ ಸ್ವತ್ತಾಗಿ ಉಳಿದಿವೆ. ಈ ಕುರಿತು ಪುರಾತತ್ವ ಇಲಾಖೆ ಬಂದು ಖುದ್ದಾಗಿ ಪರೀಶೀಲಿಸಿ ಈ ಎಲ್ಲ ಕಟ್ಟಡಗಳಿಗೆ  ಹೊಸ ಬೆಳಕನ್ನು ನೀಡುವುದರ ಜೊತೆಗೆ ಸ್ವಚ್ಛತೆ ಕೈಗೊಂಡು ಇದರ ಸುತ್ತಮುತ್ತ ವಿಶ್ರಾಂತಿ ತಾಣ ನಿರ್ಮಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ.  

ಆಗಿನ ಕಾಲದ ಕೆಲವೊಂದು ಶಿಲಾ ಮೂರ್ತಿಗಳು ಬೀದಿಪಾಲಾದದ್ದು ಕಂಡು ಬರುತ್ತದೆ. ಪಾಳು ಬಿದ್ದ ದೇವಾಲಯಗಳಲ್ಲಿ ದೀಪ ಬೆಳಗುವವರಿಲ್ಲ ಇದಕ್ಕೆ ಪುರಾತತ್ವ ಇಲಾಖೆ ಬೆಳಕಿನ ದಾರಿ ತೋರಿಸಿಕೊಡಬೇಕೆಂದು ಗ್ರಾಮಸ್ಥರ ಕೋರಿಕೆಯಾಗಿದೆ.