ಕೊಪ್ಪಳ 18: ಕ್ರೀಡೆ ಜೀವನದ ಅವಿಭಾಜ್ಯ ಅಂಗ. ಜಿಲ್ಲೆಯ ಕ್ರೀಡಾಪಟುಗಳು, ಜಿಲ್ಲಾ ಮಟ್ಟ, ವಿಭಾಗ ಮಟ್ಟದಲ್ಲಿ ವಿಜೇತರಾಗಿ ಹೆಚ್ಚಿನ ಸಂಖ್ಯೆಯಲ್ಲಿ ರಾಜ್ಯಮಟ್ಟದ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಬೇಕು ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ ಹೆಚ್. ವಿಶ್ವನಾಥ ರೆಡ್ಡಿ ಕರೆ ನೀಡಿದರು.
ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ "ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟ" ವನ್ನು ಕ್ರೀಡಾ ಜ್ಯೋತಿ ಬೆಳಗಿಸಿ, ಕ್ರೀಡಾ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದ ಅವರು ಕ್ರೀಡಾಪಟುಗಳಿಗೆ ಹೆಚ್ಚಿನ ಕ್ರೀಡಾ ಅಭ್ಯಾಸಕ್ಕಾಗಿ ಸೂಕ್ತ ಅಂಕಣಗಳನ್ನು ನಿಮರ್ಿಸಲು ಕ್ರಮ ವಹಿಸಬೇಕು ಎಂದು ತಿಳಿಸಿದರು.
ಸಂಸದ ಕರಡಿ ಸಂಗಣ್ಣ ಮಾತನಾಡಿ, ಕೊಪ್ಪಳ ಜಿಲ್ಲಾ ಕ್ರೀಡಾಂಗಣದಲ್ಲಿ ಸುಸಜ್ಜಿತ ಒಳಾಂಗಣ ಕ್ರೀಡಾಂಗಣ ನಿಮರ್ಾಣ ಹಾಗೂ ಅಥ್ಲೆಟಿಕ್ಸ್ ಕ್ರೀಡಾಪಟುಗಳು ಹೆಚ್ಚಿನ ಸಾಧನೆ ಮಾಡಲು ಸಿಂಥೆಟಿಕ್ ಟ್ರ್ಯಾಕ್ ನಿಮರ್ಾಣಕ್ಕೆ ಈಗಾಗಲೇ ಕೇಂದ್ರ ಸರ್ಕಾರಕ್ಕೆ ರೂ. 15 ಕೋಟಿ ಅನುದಾನಕ್ಕೆ ಪ್ರಸ್ತಾವನೆ ಸಿದ್ದಪಡಿಸಿ ಸಲ್ಲಿಸಲಾಗಿದೆ. ಜಿಲ್ಲಾ ಕ್ರೀಡಾಂಗಣಕ್ಕೆ ಆವರಣ ಗೋಡೆ ನಿರ್ಮಾಣದ ಕುರಿತಾಗಿ ಶಾಸಕರು, ಅಧಿಕಾರಿಗಳೊಂದಿಗೆ ಚಚರ್ಿಸಿ ಕ್ರಮ ವಹಿಸಲಾಗುವುದು ಎಂದರು. 2013-14ನೇ ಸಾಲಿನ ಜಿಲ್ಲಾ ಯುವ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರೇರಣಾ ಸಾಂಸ್ಕೃತಿಕ ಯುವತಿಯರ ಸಂಘ, ಕೊಪ್ಪಳ (ಸಾಂಘಿಕ ಪ್ರಶಸ್ತಿ), ಗಾಳೆಪ್ಪ (ಗಣೇಶ) ಹೊರತಟ್ನಾಳ (ವೈಯಕ್ತಿಕ ಪ್ರಶಸ್ತಿ), ಧರ್ಮಣ್ಣ ಹಟ್ಟಿ (ವೈಯಕ್ತಿಕ ಪ್ರಶಸ್ತಿ), ಆನಂದ ಹಳ್ಳಿಗುಡಿ (ವೈಯಕ್ತಿಕ ಪ್ರಶಸ್ತಿ), ಬಸಯ್ಯ ಅಬ್ಬಿಗೇರಿಮಠ (ವೈಯಕ್ತಿಕ ಪ್ರಶಸ್ತಿ), ರಾಘವೇಂದ್ರ ಅರಕೇರಿ (ವೈಯಕ್ತಿಕ ಪ್ರಶಸ್ತಿ) ಪಡೆದ ಕ್ರೀಡಾಪಟುಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ಕ್ರೀಡಾಕೂಟದಲ್ಲಿ ನಾಲ್ಕು ತಾಲ್ಲೂಕುಗಳ ವಿಜೇತ ಕ್ರೀಡಾಪಟುಗಳು ಹಾಗೂ ನೇರವಾಗಿ ಜಿಲ್ಲಾ ಮಟ್ಟದಲ್ಲಿ ನಡೆಯುವ ಸ್ಪಧರ್ೆಗಳ 1200 ಕ್ರೀಡಾಪಟುಗಳು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಚೆಂಡೂರು ಹನುಮಂತಪ್ಪ ಕಾರ್ಯಕ್ರಮದ ಅಧ್ಯಕ್ಷೆಯನ್ನು ವಹಿಸಿ ಕ್ರೀಡಾಪಟುಗಳಿಗೆ ಶುಭ ಕೋರಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿದರ್ೇಶಕ ಆರ್.ಜಿ. ನಾಡಗೀರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೊಪ್ಪಳ ತಾಲ್ಲೂಕು ಕ್ರೀಡಾಧಿಕಾರಿ ಶರಣಬಸಪ್ಪ ಬಂಡಿಹಾಳ ಸ್ವಾಗತಿಸಿದರು. ಬಸವರಾಜ ಹೊರತಟ್ನಾಳ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ದೈಹಿಕ ಶಿಕ್ಷಕರಾದ ಎ. ಬಸವರಾಜ, ವಿಠ್ಠಲ್ ಬಿ., ಮಹಾಂತೇಶ, ರಂಗಸ್ವಾಮಿ, ಹನುಮಂತಪ್ಪ ವಗ್ಯಾನವರ ತಾಲ್ಲೂಕು ಕ್ರೀಡಾಧಿಕಾರಿಗಳು, ರಾಜ್ಯ ಮತ್ತು ಜಿಲ್ಲಾ ಯುವ ಪ್ರಶಸ್ತಿ ವಿಜೇತರು, ಈಶಣ್ಣ ಕೊರ್ಲಹಳ್ಳಿ, ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.