ಯಮಕನಮರಡಿ 05: ಸ್ಥಳೀಯ ಹಳ್ಳದ ಓಣಿ ದೆವಾಂಗ ಮಠದ ಆವರಣದಲ್ಲಿ ನಿರ್ಮಿಸಲಾದ ನೂತನ ಅಯ್ಯಪ್ಪಾ ಸ್ವಾಮಿ ಮಂದಿರದಲ್ಲಿ ದಿ 1 ರಂದು ಅಯ್ಯಪ್ಪ ಸ್ವಾಮಿ ಮಹಾಪೂಜೆ ಸಮಾರಂಭದಲ್ಲಿ ಪಾಲ್ಗೊಂಡು ಪೂಜಾ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡುತ್ತಾ ಹಿಂದೂ ದರ್ಮ ರಕ್ಷಣೆಗೆ ಇಂತಹ ಪೂಜಾ ಸಮಾರಂಭಗಳು ನಡೆಯುವುದರಿಂದ ಹಿಂದೂ ದರ್ಮಕ್ಕೆ ಮತ್ತಷ್ಟು ಗಟ್ಟಿತನ ಉಳಿಯುವುದರ ಜೊತೆಗೆ ಜನರಲ್ಲಿ ಭಕ್ತಿ ಭಾವ ಮೂಡುತ್ತದೆ.
ಅಯ್ಯಪ್ಪಾ ಸ್ವಾಮಿಯ ಮಾಲಾಧಾರಿಗಳ ಕಠೋರ ವೃತ್ತದಿಂದ ಇವರ ಕಾರ್ಯ ಸಿದ್ದಿಯಾಗುವುದು ಎಂದು ಆನಂದ ಮಹಾರಾಜರು ಹೇಳಿದರು. ಈ ಸಂದರ್ಭದಲ್ಲಿ ಅಪಾರ ಅಯ್ಯಪ್ಪಾ ಸ್ವಾಮಿ ಭಕ್ತರು ಸಾರ್ವಜನಿಕರು ಉಪಸ್ಥಿತರಿದ್ದು, ಪೂಜಾ ಸಮಾರಂಭಕ್ಕೆ ಆಗಮಿಸಿದ್ದ ವಿವಿಧ ದೇವಸ್ಥಾನದ ಪಲ್ಲಕ್ಕಿಗಳಿಗೆ ಪೂಜೆ ಸಲ್ಲಿಸಿ ಪುನಿತರಾದರು. ಪೂಜಾ ಕಾರ್ಯಕ್ರಮದಲ್ಲಿ ಸ್ಥಳಿಯ ಹುಣಸಿಕೊಳ್ಳಮಠದ ಪೂಜ್ಯರಾದ ಸಿದ್ದಬಸವ ದೇವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು ಮಾಲಾಧಾರಿಗಳು ಪೂಜ್ಯರನ್ನು ಸನ್ಮಾನಿಸಿ ಗೌರವಿಸಿದರು.