ರಾಯಬಾಗ 28: ತಾಲೂಕಿನ ಜಲಾಲಪೂರ ಗ್ರಾಮ ಪಂಚಾಯತಿ ಸದಸ್ಯ ವಿಲಾಸ ಹೆರವಾಡೆ ಅವರ ನಿಧನದಿಂದ ತೆರವಾಗಿದ್ದ ಸದಸ್ಯ ಸ್ಥಾನಕ್ಕೆ (ವಾರ್ಡ ನಂ.1) ನಡೆದ ಚುನಾವಣೆಯಲ್ಲಿ ಅಣ್ಣಾಸಾಬ ಕೃಷ್ಣಾಜಿ ಹೆರವಾಡೆ ಅವರು ಅವಿರೋಧವಾಗಿ ಆಯ್ಕೆಯಾದರು.
ಬುಧವಾರ ಜಲಾಲಪೂರ ಗ್ರಾ.ಪಂ.ಯಲ್ಲಿ ಚುನಾವಣಾಧಿಕಾರಿ ಎ.ಎಸ್.ಕಾಂಬಳೆ ಅವರು ಅಣ್ಣಾಸಾಬ ಹೆರವಾಡೆ ಅವರು ಅವಿರೋಧವಾಗಿ ಆಯ್ಕೆಯಾಗಿರುವುದಾಗಿ ಘೋಷಿಸಿ, ಪ್ರಮಾಣ ಪತ್ರ ನೀಡಿದರು. ನೂತನವಾಗಿ ಸದಸ್ಯರಾಗಿ ಆಯ್ಕೆಯಾದ ಅಣ್ಣಾಸಾಬ ಹೆರವಾಡೆ ಅವರನ್ನು ಗ್ರಾ.ಪಂ.ಸದಸ್ಯರು ಮತ್ತು ಗ್ರಾಮಸ್ಥರು ಸತ್ಕರಿಸಿದರು.
ಸತ್ಕಾರ ಸ್ವೀಕರಿಸಿ ಮಾತನಾಡಿದ ಅಣ್ಣಾಸಾಬ ಅವರು, ಅವಿರೋಧವಾಗಿ ಆಯ್ಕೆಯಾಗಲು ಪಂಚಾಯತಿ ಎಲ್ಲ ಸದಸ್ಯರು ಮತ್ತು ಗ್ರಾಮಸ್ಥರು ಸಹಕರಿಸಿದ್ದಾರೆ. ಎಲ್ಲರ ಸಹಕಾರದಿಂದ ಗ್ರಾಮದ ಸಮಗ್ರ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಶ್ರಮೀಸುವುದಾಗಿ ಹೇಳಿದರು.
ಪಿಡಿಒ ರವಿಕುಮಾರ ಮಠಪತಿ, ಉಪಾಧ್ಯಕ್ಷ ಮೌಲಾ ನದಾಫ, ನಾಮದೇವ ಕಾಂಬಳೆ, ರಘುನಾಥ ಶೆಲಾರ, ಜಗದೀಶ ಪವಾರ, ಬಸು ಅವ್ವನ್ನವರ, ರಘು ಹೆರವಾಡೆ, ಪಾಂಡು ಹವಾಲ್ದಾರ, ರಾಜು ಕಾಳೆ, ಅಭಿಜಿತ ಹರವಾಡೆ, ಗುರು ಹಿಡಕಲ, ರಾಜು ಶೇಲಾರ, ವಿಫುಲ ಹೆರವಾಡೆ, ಗೋವಿಂದ ಭಜಂತ್ರಿ, ಸಂಜು ಕಾಂಬಳೆ, ಮಾರುತಿ ಪಾಟೀಲ, ರಾಹುಲ ಹೆರವಾಡೆ, ಪುಂಡಲಿಕ ಚೌಗಲಾ ಸೇರಿದಂತೆ ಅನೇಕರು ಇದ್ದರು.