ಬ್ರಾಹ್ಮಣ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆವ್ಹಾನ

Applications invited for Pratibha Puraskar for students from Brahmin community

ಗದಗ 28:ಕಳೆದ ಐದು ವರ್ಷಗಳಿಂದ ಪ್ರತಿಭಾವಂತ ಬ್ರಾಹ್ಮಣ ಸಮಾಜದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಶ್ರಮಿಸುತ್ತಿರುವ ಮಲ್ಲಸಮುದ್ರ ಗ್ರಾಮದ ರಾಮರಾವ ನಾರ​‍್ಪನವರ ಮತ್ತು ಕೊಪ್ಪಳದ ಕೃಷ್ಣರಾವ ಕುಲಕರ್ಣಿ ಕುಟುಂಬದ ಕೃಷ್ಣ ಸೇವಾ ಕೇಂದ್ರ ಟ್ರಸ್ಟ್‌ ಎಸ್‌ಎಸ್‌ಎಲ್‌ಸಿ,ದ್ವಿತೀಯ ಪಿಯುಸಿ ಪರಿಕ್ಷೆಯಲ್ಲಿ ಹೆಚ್ಚು ಅಂಕ ಪಡೆದು ಪಾಸಾಗಿರುವ ಬ್ರಾಹ್ಮಣ ಸಮಾಜದ ವಿದ್ಯಾರ್ಥಿಗಳಿಂದ ಪ್ರತಿಭಾ ಪುರಸ್ಕಾರಕ್ಕಾಗಿ ಆನ್‌ಲೈನ್ ಮೂಲಕ ಅರ್ಜಿ ಅವ್ಹಾನಿಸಲಾಗಿದೆ. 

ಪ್ರತಿಭಾವಂತ ಮತ್ತು ವಾರ್ಷೀಕವಾಗಿ ಕುಟುಂಬದ ವರಮಾನ ಐದು ಲಕ್ಷ ರೂಪಾಯಿಗಳಿಗಿಂತ ಕಡಿಮೆಯಿರುವ  ಆರ್ಥಿಕವಾಗಿ ದುರ್ಬಲವಾಗಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿಗಳನ್ನು ದಿ. ಜೂನ20 ರೊಳಗೆ https://tinyurl.com/kskApply  ವಿಳಾಸಕ್ಕೆ ಕಳಿಸಬೇಕು. 

ವಿವರಗಳಿಗೆ ಮಿಂಚಂಚೆ : kskpratibha.awards@gmail.com,9916186586,6362027343,9916622689  ಸಂಖ್ಯೆಗೆ ಸಂಪರ್ಕಿಸಿ ಪಡೆಯಬಹುದಾಗಿದೆ.