ಬೆಳಗಾವಿ, 24: ಇದೆ ತಿಂಗಳ ದಿನಾಂಕ 23ರಂದು ಕೃಷ್ಣ ಜನ್ಮಾಷ್ಠಮಿಯ ದಿನ ಬೆಂಗಳೂರಿನ ಸ್ಯಾಂಕೀ ಉದ್ಯಾನವನ ನಡಿಗೆಗಾರರ ಸಂಘದ ಪದಾಧಿಕಾರಿಗಳಿಂದ ನೆರೆ ಹಾವಳಿಗೆ ತುತ್ತಾದ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಪಾಚ್ಚಾಪುರ ಪಟ್ಟಣದ 426 ಕುಟುಂಬಗಳಿಗೆ ಪ್ರತಿ ಕುಟುಂಬಕ್ಕೆ ಸುಮಾರು ಒಂದು ಸಾವಿರಕ್ಕಿಂತಲೂ ಹೆಚ್ಚಿಗೆ ಬೆಲೆ ಬಾಳುವ ಸಾಮಗ್ರಿಯನ್ನು ವಿತರಿಸಲಾಯಿತು.
ಇದೆ ಸಂದರ್ಭದಲ್ಲಿ ಪಾಚ್ಚಾಪುರ ಗ್ರಾಮ ಪಂಚಾಯತಿಗೆ ಎರಡು ಸೊಳ್ಳೆ ನಾಶಪಡಿಸುವ ಯಂತ್ರಗಳನ್ನೂ ಕೂಡ ಪಂಚಾಯತಿಯ ಅಧ್ಯಕ್ಷರಾದ ಶ್ರೀಮತಿ ವಂದನಾ ಕಮತಗಿ ಅವರಿಗೆ ಹಸ್ತಾಂತರಿಸಲಾಯಿತು. ಈ ಎಲ್ಲ ವಸ್ತುಗಳ ಒಟ್ಟು ಬೆಲೆ ಸುಮಾರು ಐದು ಲಕ್ಷ ರೂಪಾಯಿಗಳು. ಕಾರ್ಯದಲ್ಲಿ ಸಂಘದ ಅಧ್ಯಕ್ಷರಾದ ಡಾಕ್ಟರ್ ಆನಂದ್, ಉಪಾಧ್ಯಕ್ಷರಾದ ಮಲ್ಲಪ್ಪ ಸುಲಧಾಳ, ಕೋ ಆಡರ್ಿನೇಟರ ನಾಗಭೂಷಣ, ಕಮೀಟಿ ಸದಶ್ಯರಾದ ರವಿಶಂಕರ್, ಊರಿನ ಹಿರಿಯರಾದ ವಿಜಯ ಶಿಡ್ಲಿಹಾಳ ಹಾಗೂ ಪಂಚಾಯತಿಯ ಸದಶ್ಯರು ಸಾಮಗ್ರಿ ವಿತರಣೆಯಲ್ಲಿ ಸಹಾಯ ಮಾಡಿದರು.