ಗುರ್ಲಾಪೂರ 31 : ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಗುರ್ಲಾಪೂರವು ಭಕ್ತಿಗೆ ಹೆಸರವಾಸಿಯಾಗಿದೆ. ಅಂತಹ ಗ್ರಾಮದ ಹೃದಯ ಭಾಗದಲ್ಲಿ ಬುಧವಾರ ದಿ.1ರಂದು ಹೊಸವರ್ಷಾಚರಣೆಯ ದಿನದಂದು ಅಯ್ಯಪ್ಪಸ್ವಾಮಿ ಮಹಾ ಪೂಜೆಯೂ ಗುರು ಸ್ವಾಮಿಗಳ ಸಾನಿಧ್ಯದಲ್ಲಿ ನಡೆಯುವದು.
ಬುಧವಾರ ಬೆಳೆಗ್ಗೆ 6 ಗಂಟೆಗೆ ಭಕ್ತರು ತಣ್ಣೀರ ಸ್ನಾನ ಮಾಡಿ ಸನ್ನಿಧಾನದವರೆಗೆ ದಿಡ ನಮಸ್ಕಾರ ಹಾಕಿ ತಮ್ಮ ಹರಕೆಗಳನ್ನು ತೀರಿಸಿಕೊಳ್ಳುವರು
ಸಂಜೆೆ 5 ಗಂಟೆಗೆ ಅಯ್ಯಪ್ಪನ ಕನ್ಯಾಸ್ವಾಮಿಗಳು ಹಾಗು ಗುರುಸ್ವಾಮಿಗಳು ಮಕ್ಕಳು ಮುತೈದೆರು ಸೇರಿ ಗ್ರಾಮದ ಪ್ರಮುಖ ರಸ್ಥೆಗಳಲ್ಲಿ ಅಯ್ಯಪ್ಪಣ ಭಾವಚಿತ್ರ ಹಾಗು ಅಯ್ಯಪ್ಪಣ ಪಲ್ಲಕ್ಕಿ ಉತ್ಸವದೊಂದಿಗೆ ಸಕಲ ವಾದ್ಯವ್ರಂದದೂದಿಗೆ ಸಾಗುತ್ತಾ ಕಂಬಳಿ ಪಲಾಟದ ವೀರಭದ್ರೇಶ್ವರಣಿಗೆ ಮಂಗಳಾರತಿ ಮಾಡಿ ಮರಳಿ ಅಯ್ಯಪ್ಪಣ ಸನ್ನಿಧಾನಕ್ಕೆ ಬಂದು ಅಗ್ನಿಗೆ ಪೊಜೆ ಮಾಡಿ ಮಹಾಪೂಜೆಗೆ ಬಂದ ಎಲ್ಲ ಗುರುಸ್ವಾಮಿಗಳು ಹಾಗು ಕನ್ನಾಸ್ವಾಮಿಗಳು ಅಗ್ನಿಹಾದು ಹದಿನೆಂಟು ಮೆಟ್ಟಲೇರಿ ಸ್ವಾಮಿಯ ದರ್ಶನ ಪಡೆದು ಜೀವನ ಪಾವನ ಮಾಡಿಕೂಳ್ಳ್ಳುವರು. ನಂತರ ಮಹಾಪೂಜೆಗೆ ಬಂದ ಭಕ್ತರೆಲ್ಲರು ಅಯ್ಯಪ್ಪನ ಶರಣು ಘೋಷಣೆಯೊಂದಿಗೆ ಹಾಡನ್ನು ಹಾಡುವರು. ನಂತರ ಅಯ್ಯಪ್ಪಣಿಗೆ ಹಾಗೂ ಗಣಪತಿಗೆ ಸಕಲ ದೇವರಿಗೆ ಮಹಾಮಂಗಳಾರತಿ ಮಾಡಿ ಎಲ್ಲ ಭಕ್ತರಿಗೆ ಮಹಾಪ್ರಸಾದ ವಿತರಿಸಲಾಗುವದು ಎಂದು ಭಕ್ತಮಂಡಳಿ ತಿಳಿಸಿದ್ದಾರೆ.