ಬೆಳಗಾವಿ ೨೨: ಹೃದಯಾಘಾತ ಹಾಗೂ ಅಪಘಾತಗಳಿಂದ ಅಸುನೀಗುವವರ ಸಂಖ್ಯೆ ಅಧಿಕವಾಗುತ್ತಿದೆ. ಆದ್ದರಿಂದ ವೈದ್ಯಕೀಯರಂಗದಲ್ಲಿ ಅವರಿವರೆನ್ನದೇ ಎಲ್ಲರೂ ತಕ್ಕಮಟ್ಟಿನ ಜ್ಞಾನ ಹೊಂದಿರುವದು ಅತ್ಯವಶ್ಯಕವಾಗಿದೆ ಎಂದು ಯು ಎಸ್ ಎಮ್ ಕೆ ಎಲ್ ಇ ಯ ನಿರ್ದೇಶಕ ಡಾ. ಹೆಚ್ ಬಿ ರಾಜಶೇಖರ ಮಾತನಾಡಿದರು, ಅವರು ಇಂದು ನಗರದ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯಲ್ಲಿ ರಾಷ್ಟ್ರೀಯ ಸಿಪಿಆರ್ ದಿನಾಚರಣೆಯ ಅಂಗವಾಗಿ ಆರೋಗ್ಯ ಸಹಾಯಕಿ ಪ್ರಶೀಕ್ಷಣಾರ್ತಗಳು ಹಾಗೂ ನಗರದ ಜೈನ್ ಕಾಲೇಜಿನ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿದ್ದ ಬಿಎಲ್ಎಸ್ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ತುರ್ತು ಸಂದರ್ಭಗಳು ಜೀವನದಲ್ಲಿ ಹೇಳಿಕೇಳಿ ಬರುವದಿಲ್ಲ ಆದರೆ ಆ ಸಂದರ್ಭವನ್ನು ಎದುರಿಸುವ ತಾಳ್ಮೆ ಜ್ಞಾನವನ್ನು ಹೊಂದಿ ತಮ್ಮ ಹಾಗೂ ಪರಿಸ್ಥಿತಿಗೊಳಗಾದವರ ಜೀವ ರಕ್ಷಣೆಗೆ ಕಾರಣಿಭೂತರಾಗಿರಿ ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ನಿಯೋಜಿತ ನಿದರ್ೇಶಕ ಡಾ. ಆರ್ ಜಿ ನೆಲವಿಗಿ ಮಾತನಾಡುತ್ತ ಸಿ ಪಿ ಆರ್ ಇದು ಜೀವ ರಕ್ಷಣೆಯ ಅದ್ಭುತ ಕಲೆಯಾಗಿದ್ದು ಪ್ರತಿಯೊಬ್ಬರೂ ಅರಿಯಬೇಕಾದ ವಿಷಯವಾಗಿದೆ. ಅಲ್ಲದೇ ಮಾನವೀಯತೆಯನ್ನು ಮೆರೆಯಲು ಅವಶ್ಯಕ ಅಂಶವಾಗಿದೆ ಆದ್ದರಿಂದ ಇದನ್ನು ಕಲಿಯಿರಿ ಎಂದು ಪ್ರಶೀಕ್ಷಣಾರ್ತಗಳನ್ನು ಕುರಿತು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಲಾಗಿ ಆಗಮಿಸಿದ್ದ ಐಎಪಿಯ ಸದಸ್ಯ ಡಾ. ಶರದ ಶ್ರೇಷ್ಠಿ, ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ಚಿಕ್ಕಮಕ್ಕಳ ವಿಭಾಗದ ಮುಖ್ಯಸ್ಥ ಡಾ. ಎಮ್ ಎಸ್ ಕಡ್ಡಿ, ಡಾ. ಅನಿತಾ ಮೋದಗೆ , ಡಾ. ಸೌಮ್ಯ ವೇರ್ಣೀಕರ, ಡಾ. ಸಂತೋಷ ಕರಮಸಿ, ಡಾ. ಬಸವರಾಜ ಕುಡಸೋಮಣ್ಣವರ ಹಾಗೂ ಡಾ. ಪ್ರಜ್ಞಾ ಕುರಕುರೆ ಮುಂತಾದವರು ಪ್ರಶೀಕ್ಷಣಾರ್ಥಿಗಳಿಗೆ ತರಬೇತಿ ನೀಡಿದರು. ಕಾರ್ಯಕ್ರಮದಲ್ಲಿ ಜೈನ ಕಾಲೇಜಿನ 25 ಕ್ಕೂ ಅಧಿಕ ವಿದ್ಯಾರ್ಥಿಗಳು ಹಾಗೂ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ 25ಕ್ಕೂ ಅಧಿಕ ಆರೋಗ್ಯ ಸಹಾಯಕಿ ಪ್ರಶಿಕ್ಷಣಾರ್ತಗಳು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಡಾ. ಪ್ರಜ್ಞಾ ಕುರಕುರೆ ನಿರೂಪಿಸಿದರು, ಡಾ. ಬಸವರಾಜ ಕುಡಸೋಮಣ್ಣವರ ವಂದಿಸಿದರು.