ಮಹಾಸಭೆಯಲ್ಲಿ ಅಮವಾಸ್ಯೆ ಅನುಭಾವ ಗೋಷ್ಠಿ
ಬೆಳಗಾವಿ ಡಿ.31: ಹನ್ನೆರಡನೆಯ ಶತಮಾನದ ಬಸವಣ್ಣನವರ ವಿಚಾರಗಳು ಆಪೂರ್ವದಲ್ಲಿ ಆಗಿ ಹೋದಏಸ್ತುಕ್ರಿಸ್ತನ ವಿಚಾರಗಳು ಯುಗಯುಗಗಳು ಕಳೆದು ಪ್ರಸ್ತುತವೆನಿಸಿವೆ. ಇರ್ವರು ಶೋಷಣೆಯ ಸಮಾಜದ ವಿರುದ್ಧ ಹೋರಾಡಿ ವೈಚಾರಿಕ ಪ್ರಜ್ಞೆಯನ್ನುಂಟು ಮಾಡಿದ ಮಹಾತ್ಮರು. ಅವರ ಬದುಕು ವಿಶ್ವದ ಮಹಾಬೆಳಕಾಗಿತ್ತು ಎಂದು ಶಿಕ್ಷಕಿ ಮೀನಾಕ್ಷಿ ಭಾಂಗಿ(ಸೂಡಿ) ಹೇಳಿದರು. ಅವರು ಶಿವಬಸವನಗರದ ಲಿಂಗಾಯತ ಭವನದಲ್ಲಿ ಆಯೋಜಿಸಿದ್ದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯಅಮಾವಾಸ್ಯೆಅನುಭಾವ ಗೋಷ್ಠಿಯಲ್ಲಿ ‘ಬಸವಣ್ಣ ಮತ್ತುಏಸುಕ್ರಿಸ್ತತೌಲನಿಕ ಚಿಂತನೆ’ ವಿಷಯಕುರಿತುಉಪನ್ಯಾಸವನ್ನು ನೀಡಿದರು.
ಏಸು ದಯೆಕರುಣೆ ಮಾನವ ಪ್ರೀತಿಯನ್ನುಎತ್ತಿಹಿಡಿದರು. ರೋಮ ಸಾಮ್ರಾಜ್ಯದಲ್ಲಿ ಬೇರುಬಿಟ್ಟಿಧಾರ್ಮಿಕಅಂದಾನುಕರಣೆಯನ್ನುತೊಡೆದು ಹಾಕಿ ಜನತೆಯಲ್ಲಿ ಪ್ರಜ್ಞೆಯಉಂಟು ಮಾಡಿದರು. ಅಂತೆಯೇ ಬಸವಣ್ಣನವರು ಸಮಾಜದಲ್ಲಿ ಬೇರು ಬಿಟ್ಟಿದಜಾತಿ ವ್ಯವಸ್ಥೆಯನ್ನುಕಿತ್ತುಹಾಕಲು ಹೋರಾಡಿದರುಇಬ್ಬರ ವಿಚಾರಗಳು ಸಮಾಜಧರ್ಮದ ಸುಧಾರಣೆಯೇಆಗಿತ್ತು. ಆದರೆ ಸಮಾಜದ ಕಾಲ ಕಾಲಕ್ಕೆ ಅವರನ್ನು ಅರ್ಥೈಸಿಕೊಳ್ಳಲೇ ಇಲ್ಲ. ಇರ್ವರುಕೂಡ ಸಮಾಜದಕ್ರೂರಕ್ರೌರ್ಯಕ್ಕೆ ಬಲಿಯಾಗುವಂತಾಯಿತು. ಆದರೆಇರ್ವರು ಹಾಕಿಕೊಟ್ಟ ವಿಶ್ವಪಥ ಇಂದಿಗೂ ಸಮಾಜಕ್ಕೆ ದಿವ್ಯಜ್ಯೋತಿಯಾಗಿದೆಎಂದು ಹೇಳಿದರು.
ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಮಹಾಸಭೆಜಿಲ್ಲಾಘಟಕದಅಧ್ಯಕ್ಷೆರತ್ನಪ್ರಭಾ ಬೆಲ್ಲದಅವರು ಮಾತನಾಡುತ್ತ, ಮಹಾಮಾನವತಾವಾದಿ ಏಸುಕ್ರಿಸ್ತನನ್ನುಆರಾಧಿಸುವ ಮಾಸವಿದು. ಸಮಾಜದಲ್ಲಿದಯಕರುಣೆ ಶಬ್ದಗಳಿಗೆ ಮೌಲ್ಯತಂದುಕೊಟ್ಟವರು ಏಸು. ಅವರ ಪ್ರಭಾವಇಂದು ವಿಶ್ವವನ್ನೇ ವ್ಯಾಪಿಸಿದೆ. ಅಂತೆಯೆಅಣ್ಣ ಬಸವಣ್ಣನವರ ವಿಚಾರಗಳು ವಿಶ್ವಕ್ಕೆ ಸಂಜೀವಿನಿಯಾಗಿವೆ. ಅವರು ಬದುಕಿದ ಕಾಲಘಟ್ಟಗಳು ಬೇರೆಯಾದರೂ ಹೇಳಿದ ನೈತಿಕ ವಿಚಾರಗಳು ಎಲ್ಲ ಕಾಲಕ್ಕೆ ಪ್ರಸ್ತುತವೆನಿಸಿವೆ. ಇಂದಿನ ಯುವಜನಾಂಗಕ್ಕೆ ಅವುಗಳನ್ನು ಮುಟ್ಟಿಸುವ ಕೆಲಸ ನಡೆಯಬೇಕೆಂದು ಹೇಳಿದರು.
ಸಾನ್ನಿಧ್ಯವಹಿಸಿದ್ದ ಕಾರಂಜಿಮಠದ ಗುರುಸಿದ್ದ ಮಹಾಸ್ವಾಮೀಜಿಯವರು ಆಶೀರ್ವಚನ ನೀಡುತ್ತ, ಈ ವಿಶ್ವ ಅನೇಕ ಪುಣ್ಯಪುರುಷರನ್ನು ನೀಡಿದೆ. ಬದುಕಿಗೆ ನೈತಿಕ ಮಾರ್ಗವನ್ನುತೋರಿದ ಆ ಮಹಾತ್ಮರ ವಾಣಿಯನ್ನುಜೀವನದಲ್ಲಿಅನುಕರಣೆಯರೂಪಕ್ಕೆತಂದರೆಜೀವನ ಭವ್ಯವಾಗುವುದು. ಮಹಾಸಭೆಯು ಚಿಂತನಪರವಾದ ಇಂತಹ ಕಾರ್ಯಕ್ರಮಗಳನ್ನು ಜನರಿಗೆ ಮುಟ್ಟಿಸುವಗುರುತರ ಕಾರ್ಯಮಾಡುತ್ತಿರುವುದು ಅಭಿನಂದನೀಯವೆಂದು ಹೇಳಿದರು.
ಇದೇ ಸಂದರ್ಭದಲ್ಲಿ ಬೆಳಗಾವಿ ಪ್ರಾದೇಶಿಕ ನ್ಯಾಯವಿಜ್ಞಾನ ಪ್ರಯೋಗಾಲಯದ ಉಪನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿರುವ ಡಾ.ಪ್ರವೀಣ ಸಂಗನಾಳಮಠರು ರಾಷ್ಟ್ರೀಯ ಪ್ರಶಸ್ತಿಗೆ ಪುರಸ್ಕೃತರಾದ ನಿಮಿತ್ತ ಅವರನ್ನು ಸತ್ಕರಿಸಿ ಗೌರವಿಸಲಾಯಿತು.
ಮಹಾದೇವಿ ಮುಂಡಗನಾಳ ವಚನ ಪ್ರಾರ್ಥನೆ ಸಲ್ಲಿಸಿದರು. ಶೈಲಾ ಸಂಸುದ್ದಿ ಸ್ವಾಗತಿಸಿದರು. ಶೈಲ ಹಿರೇಮಠ ವಚನ ವಿಶ್ಲೇಷಣೆ ಮಾಡಿದರು. ಡಾ.ಹೇಮಾವತಿ ಸುನೋಳ್ಳಿ ನಿರೂಪಿಸಿದರು. ಸರೋಜಾ ನಿಶಾನದಾರ ವಂದಿಸಿದರು. ನ್ಯಾಯವಾದಿ ವ್ಹಿ.ಕೆ.ಪಾಟೀಲ, ಆರ್.ಪಿ.ಪಾಟೀಲ, ವಾಯ್.ಎಸ್.ಮೆಣಸಿನಕಾಯಿ, ಬಾಲಚಂದ್ರ ಬಾಗಿ ಮಹಾಸಭೆಯ ಪದಾಧಿಕಾರಗಳು ಉಪಸ್ಥಿತರಿದ್ದರು.