ಧಾರವಾಡ 1: ಕರ್ನಾಟಕ ವಿದ್ಯಾವರ್ಧಕ ಸಂಘವು, ಬಸವ ಜಯಂತಿ ಅಂಗವಾಗಿ ದಿ. 30 ರಾ.ಹ. ದೇಶಪಾಂಡೆ ಸಭಾಭವನದಲ್ಲಿ ಆಯೋಜಿಸಿದ್ದ ಪುಷ್ಪಾರ್ಪಣೆ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಅವರ ನೇತೃತ್ವದಲ್ಲಿ ‘ಜಗಜ್ಯೋತಿ ಬಸವೇಶ್ವರ’ ಭಾವಚಿತ್ರಕ್ಕೆ ಪುಷ್ಪಸಮರ್ಪಿಸಿ, ಗೌರವ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಬಸವಣ್ಣನ ಹಾಗೂ ಶರಣರ ವಚನಗಳನ್ನು ಓದಿ, ಶರಣರ ತತ್ವಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಮನುಷ್ಯರೆಂದು ಕರೆಯಿಸಿಕೊಳ್ಳಲು ಸಾಧ್ಯ. ಮನುಕುಲದ ನೆಮ್ಮದಿಯ ಬದುಕಿಗೆ ಬಸವಣ್ಣನವರು ಹಾಕಿಕೊಟ್ಟ ಮಾರ್ಗ ಮತ್ತು ಸೂತ್ರಗಳು ಯಾವ ಕಾಲಕ್ಕೂ ಅನ್ವಯವಾಗುವಂಥವು. ಇಂದು ಮೌಢ್ಯದ ಕಡೆ ಯುವಜನಾಂಗ ವಾಲುತ್ತಿದ್ದು, ಅಂಥ ಯುವಜನಾಂಗಕ್ಕೆ ಬಸವಣ್ಣನವರ ವಚನಗಳು ದಾರೀದೀಪವಾಗುವಂತೆ ನೋಡಿಕೊಳ್ಳಬೇಕಾಗಿದೆ ಎಂದರು. ನಾಗಭೂಷಣ ಬಸವಲಿಂಗಯ್ಯ ಹಿರೇಮಠ ವಚನಗಳನ್ನು ಹಾಡಿದರು.
ಪುಷ್ಪಾರ್ಪಣೆ ಸಂದರ್ಭದಲ್ಲಿ ಸತೀಶ ತುರಮರಿ, ವೀರಣ್ಣ ಒಡ್ಡೀನ, ಗುರು ಹಿರೇಮಠ, ಡಾ. ಮಹೇಶ ಧ. ಹೊರಕೇರಿ, ಡಾ. ಜಿನದತ್ತ ಹಡಗಲಿ, ವಿಶ್ವೇಶ್ವರಿ ಬ. ಹಿರೇಮಠ, ಡಾ. ಧನವಂತ ಹಾಜವಗೋಳ, ಶಿವಾನಂದ ಭಾವಿಕಟ್ಟಿ, ಎಲ್.ಐ. ಲಕ್ಕಮ್ಮನವರ, ಶ್ರೀಶೈಲಗೌಡ ಕಮತರ ಹಾಗೂ ಸಿಬ್ಬಂದಿ ವರ್ಗ ಸೇರಿದಂತೆ ಅನೇಕರು ಭಾಗವಹಿಸಿದ್ದರು.