ಲೋಕದರ್ಶನ ವರದಿ
ಬಳ್ಳಾರಿ 12: ರಾಜ್ಯದಲ್ಲಿ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಕೌಶಲ್ಯ ತರಬೇತಿ ನೀಡುತ್ತಿರುವುದು ಸಂತೋಷದ ವಿಷಯ. ಕಟ್ಟಡ ಕಾರ್ಮಿಕರಿಗೆ ವೃತ್ತಿ ಕೌಶ್ಯಲ್ಯ ಜೊತೆಗೆ ಅಕ್ಷರ ಜ್ಞಾನ ಅವಶ್ಯಕತೆವಿದೆ. ಅವರಿಗೆ ತಿಳುವಳಿಕೆ ಮತ್ತು ಮಾಡುವ ಕೆಲಸದ ಬಗ್ಗೆ ಜ್ಞಾನ ಮೂಡುತ್ತದೆ ಎಂದು ಕಾರ್ಮಿಕ ನಿರೀಕ್ಷಕರು ರವಿದಾಸ್ ಅವರು ಹೇಳಿದರು.
ಬಳ್ಳಾರಿ ನಿಮರ್ಿತಿ ಕೇಂದ್ರ, ಜಿಲ್ಲಾ ಕಾರ್ಮಿಕ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಬೆಂಗಳೂರಿನ ಕನರ್ಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ, ಡಾ.ಬಿ.ಆರ್. ಅಂಬೇಡ್ಕರ್ ಕಾಮರ್ಿಕ ಸಹಾಯ ಹಸ್ತ, ಶ್ರಮ ಸಾಮಥ್ರ್ಯ ಯೋಜನೆಯಡಿ ಟ್ರೈನಿಂಗ್-ಕಂ-ಟೂಲ್ ಕಿಟ್ ಅಂಗವಾಗಿ ವಾಲ್ಮೀಕಿ ಭವನದ ಹತ್ತಿರವಿರುವ ನಿಮರ್ಿತ ಕೇಂದ್ರದಲ್ಲಿ ಗುರುವಾರ ನೋಂದಾಯಿತ ಕಟ್ಟಡ ಕಾಮರ್ಿಕರಿಗೆ 30 ದಿನಗಳ ವೃತ್ತಿ ಕೌಶ್ಯಲ ತರಬೇತಿ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಅಕ್ಷರ ಜ್ಞಾನದಿಂದ ಕಟ್ಟಡ ಕಾರ್ಮಿಕರಿಗೆ ಕಲಿಕೆ ಭ್ಯಾಗ ಸಹ ಒದಗಿಸಿಕೊಡಲು ಉತ್ತಮ ವೇದಿಕೆ ಕಲ್ಪಿಸಲಾಗಿದೆ. ನೋಂದಾಯಿತ ಕಟ್ಟಡ ಕಾಮರ್ಿಕರು ವೃತ್ತಿ ಕೌಶ್ಯಲ ತರಬೇತಿ ಜೊತೆಗೆ ಅಕ್ಷರ ಜ್ಞಾನದಿಂದ ತಮ್ಮ ಸ್ವಂತ ಸ್ವಾಲಂಬನೆ ಜೀವನವನ್ನು ಬದಲಾವಣೆ ಮಾಡಿಕೊಂಡು ಜೀವನ ಸಾಗಿಸಲು ಅನುಕೂಲವಾಗುತ್ತದೆ ಎಂದರು.
ಕಾಮರ್ಿಕ ನಿರೀಕ್ಷಕ ಸಿ.ಎನ್.ರಾಜೇಶ್ ಅವರು ಮಾತನಾಡಿ, ನೋಂದಾಯಿತ ಕಟ್ಟಡ ಕಾಮರ್ಿಕರಿಗೆ ವೃತ್ತಿ ಕೌಶ್ಯಲ ಜೊತೆಗೆ ಅಕ್ಷರ ಜ್ಞಾನದಿಂದ ತಿಳುವಳಿಕೆ ಅಗತ್ಯವಿದೆ ಎಂದರು.
ಜಿಲ್ಲಾ ಕಾರ್ಮಿಕ ಇಲಾಖೆ ಕಾರ್ಯನಿರ್ವಾಹಕ ಆರ್.ಎನ್.ಶಿವರಾಜ್ ಅವರು ಸ್ವಾಗತಿಸಿ ವಂದಿಸಿದರು.
ಈ ಸಂಧರ್ಭದಲ್ಲಿ ಬಳ್ಳಾರಿ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಮೋಹನ್ ಕೃಷ್ಣ ಹಾಗೂ ಮಿಥಿಲಾ ರೆಡ್ಡಿ, ಮುಖ್ಯ ಲೆಕ್ಕಾಧಿಕಾರಿ ಡಿ.ವಿ.ಮಂಜುಳ, ತರಬೇತಿದಾರರು ಮತ್ತು ಕಾಮರ್ಿಕ ಇಲಾಖೆಯ ಸಿಬ್ಬಂದಿ ವರ್ಗದವರು ಇದ್ದರು.