ಬಳ್ಳಾರಿ 25: ಸಚಿವ ಶ್ರೀರಾಮುಲು ವಿರುದ್ಧ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಬಳ್ಳಾರಿಯಲ್ಲಿ ಮಾತನಾಡಿದ ಅವರು, ರಾಮುಲು ವಿರುದ್ಧ ಕಿಡಿಕಾರುವ ಮುನ್ನ, ಒಂದು ಉದಾಹರಣೆಯನ್ನೂ ಕೊಟ್ಟರು. ಎಸ್ಟಿ ಸಮುದಾಯದ ಹೆಣ್ಣು ಮಗಳು ಸಿಎಂ ಯಡಿಯೂರಪ್ಪ ಬಳಿ, ಸಚಿವರ ಬಳಿ ತಮ್ಮ ಗೋಳು ಹೇಳಿಕೊಂಡಾಗ ಯಾರೂ ಕೇಳಲಿಲ್ಲವಂತೆ. ಆಕೆ ಕೊನೆಗೆ ತ ನ್ನ ಕಿಡ್ನಿ ಮಾರಾಟ ಮಾಡಿ ಜೀವನ ಮಾಡ್ತೇನೆ ಎಂದಳು. ಆಗ ನಾನು ಆಕೆಗೆ 1 ಲಕ್ಷ ರೂಪಾಯಿ ಕೊಟ್ಟೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ರಾಮುಲು ಕೂಡಾ ಎಸ್ಟಿ ಸಮುದಾಯದವರು. ಗದಗ್ ಜಿಲ್ಲೆಯ ಲಕ್ಕವ್ವ ಕೂಡಾ ಎಸ್ಟಿ ಸಮುದಾಯದವರು. ಆಕೆಯ 9 ಹಸುಗಳು ಮೃತಪಟ್ಟಿದ್ದವು. ಜೀವನವೇ ದುಸ್ತರವಾಗಿತ್ತು. ತಮ್ಮ ಸಮುದಾಯಕ್ಕೆ ಸೇರಿದ್ದ ಮಹಿಳೆಗೇ ರಾಮುಲು ಯಾವುದೇ ಸಹಾಯ ನೀಡಲಿಲ್ಲ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ಧಾರೆ. ಇದೀಗ ಆ ಹೆಣ್ಣು ಮಗಳು ಹಸು, ಆಡುಗಳನ್ನು ಕೊಂಡು ಜೀವನ ಮಾಡ್ತಿದ್ದಾಳೆ ಎಂದು ಹೇಳಿದ ಎಚ್ಡಿಕೆ, ನಾನು ಬಡವರ ಪರ ಕೆಲಸ ಮಾಡುವೆ ಎಂದರು.
ಜಾರಕಿಹೊಳಿ ಕುಟುಂಬವನ್ನು ಪರೋಕ್ಷವಾಗಿ ಹೆಸರಿಸಿದ ಕುಮಾರಸ್ವಾಮಿ, ಗೋಕಾಕ್ನವರಿಗೆ ಸಾಹುಕಾರರು ಎಂದು ಟಿವಿಗಳಲ್ಲಿ ಕರೆಯುತ್ತಾರೆ. ಆದ್ರೆ, ಆ ಭಾಗದ ರೈತರಿಗೆ ಸಾಹುಕಾರರು ಹಣ ಕೊಟ್ಟಿಲ್ಲ ಎಂದು ಕುಮಾರಸ್ವಾಮಿ ಕಿಡಿಕಾರಿದರು.