ಲೋಕದರ್ಶನ ವರದಿ
ಬಳ್ಳಾರಿ 02: `ಐಒಟಿ ತಂತ್ರಜ್ಞಾನವು ಮಾನವ ಬದುಕನ್ನು ಮತ್ತಷ್ಟು ಸ್ಮಾರ್ಟ ಮಾಡಲಿದೆ ಎಂದು ಬೆಂಗಳೂರಿನ ರಾಜರಾಜೇಶ್ವರಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಡಾ. ಆರ್.ಬಾಲಕೃಷ್ಣ ಅಭಿಪ್ರಾಯಪಟ್ಟರು.
ಹೊಸಪೇಟೆಯ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ವಿ.ಟಿ.ಯು. ಪ್ರಾಯೋಜಿತ ಟೆಕ್ಯುಪ್ 1.3 ಯೋಜನೆ ಅಡಿಯಲ್ಲಿ ಐಓಟಿ ವಿಷಯದ ಮೇಲೆ ರಾಜ್ಯಮಟ್ಟದ ಎರಡು ದಿನಗಳ ಕಾರ್ಯಾಗಾರವನ್ನು ಶನಿವಾರದಂದು ಉದ್ಘಾಟಿಸಿ ಮಾತನಾಡುತ್ತಿದ್ದರು.
``ಉಪಕರಣಗಳ ಮಾನವಿಕ ನಿಯಂತ್ರಣ ಕಡಿಮೆಯಾಗಿ, ಅವು ತಾವಾಗಿಯೇ ನಮ್ಮ ಅವಶ್ಯಕತೆಗಳನ್ನು ಅರಿತು ಕಾರ್ಯನಿರ್ವಹಿಸಲಿವೆ. ನಾವೆಲ್ಲರೂ ಆಟೊಮೆಟೆಡ್ ತಂತ್ರಜ್ಞಾನದ ಮೇಲೆ ಹೆಚ್ಚು ಅವಲಂಬಿತವಾಗುವಂಥ ಭವಿಷ್ಯದ ಹೊಸ್ತಿಲಲ್ಲಿ ನಿಂತಿದ್ದೇವೆ. ಇಂಟನರ್ೆಟ್ ಆಫ್ ಥಿಂಗ್ಸ್ ಕ್ಷೇತ್ರದಲ್ಲಿ ಅನೇಕ ಆವಿಷ್ಕಾರಗಳಾಗಿವೆ. ಸ್ಮಾರ್ಟ್ ಹಾಸ್ಪಿಟಲ್ ಬೆಡ್ಗಳು, ಫಿಟ್ನೆಸ್ ಮಟ್ಟವನ್ನು ಗುರುತಿಸುವ ವಾಚ್ಗಳು, ಸ್ಮಾರ್ಟ್ ಮನೆಗಳು, ಸ್ಮಾರ್ಟ್ ಕಾರ್ಗಳು, ಸ್ಮಾರ್ಟ್ ಬೈಕ್ಗಳು ಸರ್ವೇ ಸಾಮಾನ್ಯವಾಗಲಿವೆ. 2022ರ ವೇಳೆಗೆ 20 ಕೋಟಿ ಮನೆಗಳಲ್ಲಿ ಸ್ಮಾರ್ಟ್ ಉಪಕರಣಗಳು ಪ್ರವೇಶಿಸಲಿವೆ ಎನ್ನುವ ಅಂದಾಜಿದೆ'' ಎಂದು ಹೇಳಿದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಾಂಶುಪಾಲ ಡಾ.ಎಸ್.ಎಂ.ಶಶಿಧರ ಮಾತನಾಡಿ ಐಒಟಿ ತಂತ್ರಜ್ಞಾನವು ಪ್ರಸ್ತುತ 4 ನೇ ತಲೆಮಾರಿನ ಉದ್ಯಮ ಕ್ರಾಂತಿಯಲ್ಲಿ ನಮ್ಮ ದೈನಂದಿನ ಜೀವನದ ಭಾಗವಾಗಿದೆ ಮತ್ತು ಅದರ ಬಳಕೆ ಮುಂದಿನ ದಶಕದಲ್ಲಿ ತೀವ್ರ ಹೆಚ್ಚಾಗಲಿದೆ. ಮಾನವ ಭಾವನೆಗಳೊಂದಿಗೆ ಸಂಯೋಜಿಸಲ್ಪಟ್ಟ ಐಒಟಿಯೊಂದಿಗೆ ಸಾಧನಗಳು ಬುದ್ಧಿವಂತಿಕೆಯಿಂದ ಕಾರ್ಯನಿರ್ವಹಿಸುತ್ತವೆ. ವಸ್ತುಗಳ ಅಂತರ್ಜಾಲಕ್ಕೆ ಉತ್ತಮ ಭವಿಷ್ಯವಿದ್ದು ವಿದ್ಯಾರ್ಥಿಗಳು ಪರಿಣತಿ ಗಳಿಸಬೇಕು ಎಂದು ಅಭಿಪ್ರಾಯಪಟ್ಟರು.
ಬೆಂಗಳೂರು, ಮೈಸೂರು, ಶಿವಮೊಗ್ಗ, ಬೀದರ್, ದಾವಣಗೆರೆ ಮುಂತಾದ ಭಾಗಗಳಿಂದ 70 ಕ್ಕೂ ಹೆಚ್ಚು ವಿದ್ಯಾಥರ್ಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದಾರೆ.
ಕುಮಾರಿ ಪ್ರಿಯಾಂಕಾ ಪ್ರಾರ್ಥನೆ ಸಲ್ಲಿಸಿದರು. ಅನುಷಾ ಎಸ್ ಸ್ವಾಗತಿಸಿದರು. ಅರ್ಷಿಯಾ, ನೇಹಾ ನಿರೂಪಿಸಿದರು. ಸ್ವಾತಿ ವಂದಿಸಿದರು.