ಸಂಡೂರು 28: ತಾಲೂಕಿನ ಲಕ್ಷ್ಮೀಪುರ ಗ್ರಾಮದಿಂದ ಸಂಡೂರಿನಿಂದ ಹೊಸಪೇಟೆಗೆ ಹೋಗುವಾಗ ಸಿದ್ದಾಪುರ- ಜೈಸಿಂಗ್ಪುರದ ಮಧ್ಯದಲ್ಲಿ ಟಾಟಾ ಇಂಡಿಕಾ ಕಾರು (ಕೆ.ಎ.3ಎ/ ಎ.ಸಿ. 2789) ಹಾಗೂ ಹೊಸಪೇಟೆಯಿಂದ ಸಂಡೂರಿಗೆ ಬರುತ್ತಿದ್ದ ಲಾರಿ (ಗಿಣಿಗೇರಿ ಮೂಲದ ಲಾರಿ) ಡಿಕ್ಕಿಯಾಗಿದ್ದು ನಾಲ್ವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದ ಘಟನೆ ನಿನ್ನೆ ಜರುಗಿತ್ತು.ಹಾಗೂ ಪಟ್ಟಣದ ಸರ್ಕಾರಿ ಅಸ್ಪತ್ರೆಗೆ ಈ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲಾ ವರಿಷ್ಠಾಧಿಕಾರಿ ಡಾ. ಶೋಭಾರಾಣಿ(ಎಸ್ಪಿ), ಡಿ.ವೈ.ಎಸ್ಪಿ. ಗೋಕುಲ ಪ್ರಸಾದ್, ಸಿ.ಪಿ.ಐ. ಮಹೇಶಗೌಡ, ಪಿ.ಎಸ್.ಐ. ವೀರೇಶ್ ಹಾಗೂ ತಂಡದವರು ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಪರೀಶೀಲನೆ ನಡೆಸಿದರು.