ಯಮನೂರಪ್ಪ ದೇವಸ್ಥಾನ ಸಮುದಾಯ ಭವನಕ್ಕೆ ಭೂಮಿ ಪೂಜೆ

Bhoomi Puja for Yamanurappa Temple Community Hall

ಬೆಳಗಾವಿ 04: ಗೋಕಾಕ ತಾಲೂಕಿನ ಶಿಂದಿಕುರಬೇಟ ಗ್ರಾಮದ ಶ್ರೀ ಯಮನೂರಪ್ಪ(ಚಾಂಗದೇವ) ದೇವಸ್ಥಾನ ಪಕ್ಕದ ಖುಲ್ಲಾ ಜಾಗೆಯಲ್ಲಿ ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಅವರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಲ್ಲಿ 5 ಲಕ್ಷರೂ. ಅನುದಾನದಲ್ಲಿ ಸಮುದಾಯ ಭವನಕ್ಕೆ ಭೂಮಿ ಪೂಜೆ ಜ.3ರಂದು ಜರುಗಿತು. 

ಗ್ರಾಮದಚೇತನ ಹಿರೇಮಠ ಸ್ವಾಮಿಗಳು ಭೂಮಿಪೂಜೆಯ ವಿಧಿವಿಧಾನ ನೆರವೇರಿಸಿದರು. ಇದೇ ಸಂದರ್ಭದಲ್ಲಿಗುತ್ತಿಗೆದಾರಾದ ದಿನೇಶ ಪೋಲೇಶ, ವಿನಾಯಕ ಕಾಂಬಳೆ, ಪೊಲೀಸ ಸಿಬ್ಬಂದಿ ವಿಠ್ಠಲ ಕೋಳಿ, ಯುವಧುರೀಣರಾದ ನಾಗಲಿಂಗ ಪೋತದಾರ, ಮಹಾಂತೇಶ ಹಳ್ಳಿ, ಗಣ್ಯರಾದ ನಿರುಪಾದಯ್ಯ ಕಲ್ಲೋಳಿಮಠ ಇವರನ್ನುದೇವಸ್ಥಾನದ ವತಿಯಿಂದ ಶಾಲು ಹೊದಿಸಿ ಸತ್ಕರಿಸಲಾಯಿತು.ಗೋಪಾಲ ಖಟಾವಕರ ಕಾರ್ಯಕ್ರಮ ನಿರೂಪಿಸಿದರು. 

ಗ್ರಾಮದಗಣ್ಯರು ಭೂಮಿ ಪೂಜೆ ನೆರವೇರಿಸಿದರು. 

ಕಾರ್ಯಕ್ರಮದಲ್ಲಿ ಹಣಮಂತ ಹಣಮಂತಗೋಳ, ವಿಠ್ಠಲ ವಿಜಯಪುರ, ಈರವ್ವ ಭೋಜಿ, ವನಿತಾ ಸುರ್ವಿ, ಭಾರತಿಗುಮತಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.