ಬೆಳಗಾವಿ: ಕ್ರಾಂತಿವೀರ ಸಂಗೋಳ್ಳಿ ರಾಯಣ್ಣನ ಜನ್ಮ ದಿನಾಚರಣೆ

ಲೋಕದರ್ಶನ ವರದಿ

ಬೆಳಗಾವಿ 17:  ಸಂಪಗಾಂವ ಸಂಗೋಳ್ಳಿ ರಾಯಣ್ಣ ಕ್ರಾಂತಿ ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಸಮಿತಿ ಸಂಪಗಾಂವ (ರಿ) ಇವರಿಂದ ಗುರುವಾರ ದಿ. 15ರಂದು ರಾಯಣ್ಣ 223 ನೇಯ ಜನ್ಮ ಜಯಂತಿ ಆಚರಣೆ ಮಾಡಲಾಯಿತು. 

ಕಾರ್ಯಕ್ರಮದ ಅಂಗವಾಗಿ ಕಾಲೇಜು ವಿದ್ಯಾಥರ್ಿಗಳಿಂದ ದೇಶಭಕ್ತಿ ಗೀತೆಗಳ ಸ್ಪಧರ್ೆಯನ್ನು ಏರ್ಪಡಿಸಲಾಗಿತ್ತು. ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಅಲ್ಲದೇ ಅತಿ ವೃಷ್ಟಿಗೆ ಕಾರಣವಾದ ಮಳೆರಾಯನಿಗೆ ಶಾಂತನಾಗು ಮಳೆರಾಯ ಎಂದು ಪ್ರಾರ್ಥನೆ ಮಾಡಲಾಯಿತು. ಸಮಿತಿಯ ಗೌರವಾಧ್ಯಕ್ಷರಾದ ಚನಬಸಯ್ಯ ಶಿ. ಕಠಾಪೂರಿಮಠ ರವರು ರಾಯಣ್ಣನ ಪೋಟೊ ಪ್ರತಿಮೆಗೆ ಪೂಜೆ ಮಾಡಿದರು. ರಾಯಣ್ಣನು ಬ್ರಿಟಿಷರ ಕಚೇರಿ ಸುಟ್ಟು ಮೊದಲ ಭಾರತದ ಸ್ವಾತಂತ್ರ್ಯ ಹೋರಾಟದ ಕಹಳೆಯನ್ನು 7 ಪೂಟ ಎತ್ತರದ ರಾಯಣ್ಣ ಮಾಡಿದ್ದಕ್ಕೆ ಸಂಪಗಾವ ಇನ್ನು ಭಾರತದ ನಕ್ಷಾ ಪುಟದಲ್ಲಿ ಅಜರಾಮರವಾಗಿದೆ ಎಮಧು ಮಾತನಾಡಿದರು. ಅಲ್ಲಿ ಸೇರಿದ ಸಮೂಹ ಜಯ ಘೋಷ ಹಾಕಿದರು. ಎಲ್ಲರಿಗೂ ಸಿಹಿ ಪ್ರಸಾದವನ್ನು ಹಂಚಿದರು. 

ಬಸವರಾಜ ಬೆಣ್ಣಿ, ಸಂತೋಷ ಕಲಘಟಗಿ, ವಿಜಯ ಪಾಟೀಲ, ರಮೇಶ ಹತ್ತಿ, ಕಾತರ್ಿಕ ಕುರುಬಗಟ್ಟಿ, ಬಸವರಜ ಬೆಲ್ಲದ, ಸಂತೋಷ ಹತ್ತಿ, ವಿಜಯ ನೇಸರಗಿ, ಭರತ ಕಂಬಾರ, ಚೇತನ ಜುಟ್ಟನವರ, ವಿಶಾಲ ಕಂಬರ, ಮಹೇಶ ನೆಶರಗಿ, ಅಭಿಶೆಕ ಚಿಟ್ಟಿ, ಮಹಾಂತೇಶ ಕಲಘಟಗಿ, ಮಂಜುನಾಥ ಬೆಣ್ಣಿ, ಧೆಶ ಭಕ್ತಿಗೀತೆ ಹಾಡಿದರು. ಗುರುಶಾಂತ ಚಿಟ್ಟಿ ವಂದಿಸಿದರು.