ದೇಹದಾಢ್ರ್ಯ ಸ್ಪರ್ಧೆ ವಿಜೇತರು

ಲೋಕದರ್ಶನ ವರದಿ

ಬೆಳಗಾವಿ 18:  ಇಲ್ಲಿನ ನಗರದ ಎಸ್. ಜಿ. ಬಾಳೇಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದ ಸಿವಿಲ್ ವಿಭಾಗದ ವಿದ್ಯಾರ್ಥಿಗಳಾದ ಅಭಿಷೇಕ ಎನ್. ಪಾವಶೆ ಮತ್ತು ಅಜಯ್ ಆರ್. ದಂಡಗಲಕರವರು ವಿಶ್ವೇಶ್ವರಯ್ಯ ತಾಂತ್ರಿಕ ವಿದ್ಯಾಲಯದ ವತಿಯಿಂದ ಸಾಯಿರಾಮ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಡೆದ ವಿತಿಯ ಸಿಂಗಲ್ ಜೋನಲ್ ಅತ್ಯುತ್ತಮ ದೇಹದಾಢ್ರ್ಯ 

ಸ್ಪರ್ಧೆಯ  65 ಮತ್ತು 85 ವಿಭಾಗದಲ್ಲಿ ಬೆಳ್ಳಿಯ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ. ಈ ದೇಹದಾಢ್ರ್ಯ ಸ್ಪರ್ಧೆಯು ದಿನಾಂಕ 14 ಮತ್ತು 15 ಅಕ್ಟೋಬರ್ 2019 ರಂದು ಜರುಗಿತು. 

ಎಸ್. ಜಿ. ಬಾಳೇಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಸಿದ್ದರಾಮಪ್ಪ ಇಟ್ಟಿ ವಿದ್ಯಾರ್ಥಿಗಳನ್ನು ಅಭಿನಂದಿಸಿ ಮುಂಬರುವ ದಿನಗಳಲ್ಲಿ ಚಿನ್ನದ ಪದಕದ ಮೇಲೆ ಗುರಿ ಇಡಿ ಎಂದು ಪ್ರೋತ್ಸಾಹಿಸಿದರು.