ಬೆಂಗಳೂರು ಮಾ.5, ಸೋಂಕಿನ ಭೀತಿಗೆ ಭಾರತದಲ್ಲಿ ಇದೇ ಮೊದಲ ಬಾರಿಗೆ ಟೂರ್ನಿಯೊಂದನ್ನು ಮುಂದೂಡಲಾಗಿದೆ.ಬೆಂಗಳೂರಿನಲ್ಲಿ ಮಾ.18ರಿಂದ 26ರವರೆಗೆ ನಡೆಯಬೇಕಿದ್ದ ಫಿಬಾ ಒಲಿಂಪಿಕ್ಸ್ ಅರ್ಹತಾ 3-3 ಬಾಸ್ಕೆಟ್ ಬಾಲ್ ಟೂರ್ನಿಯನ್ನು ಮುಂದೂಡಲಾಗಿದೆ ಎಂದು ಅಂತಾರಾಷ್ಟ್ರೀಯ ಬಾಸ್ಕೆಟ್ ಬಾಲ್ ಫೆಡರೇಷನ್ (ಫಿಬಾ) ಹೇಳಿದೆ.ಹಂಗರಿಯ ಬುಡಾಪೆಸ್ಟ್ ನಲ್ಲಿ ಏಪ್ರಿಲ್ 24ರಿಂದ ಫಿಬಾ 3-3 ಯೂನಿವರ್ಸಿಟಿ ಒಲಿಂಪಿಕ್ಸ್ ಅರ್ಹತಾ ಟೂರ್ನಿ ನಿಗದಿಯಾಗಿದೆ. ಅದಕ್ಕಿಂತ ಮುನ್ನ ಬೆಂಗಳೂರಿನಲ್ಲಿ ನಿಗದಿಯಾಗಿರುವ ಟೂರ್ನಿ ನಡೆಸುವ ಅಗತ್ಯವಿದ್ದು, ಇದಕ್ಕೆ ಸಾಧ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು. ಈ ಕುರಿತು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಸಹಕಾರದೊಂದಿಗೆ ಕೆಲಸ ಮಾಡುತ್ತಿದ್ದೇವೆ ಎಂದು ಫಿಬಾ ಹೇಳಿದೆ.