ರೋಟರಿ ಕ್ಲಬ್ ಬೆಳಗಾವ ನಾರ್ತ್ ಆಯೋಜಿಸಿದ ಕೆಎಸ್ ಆರ್ ಪಿ ಆವರಣದಲ್ಲಿ ಬೃಹತ್ ಸಸಿಕರನ್ ಕಾರ್ಯಕ್ರಮಕ್ಕೆ ಸಿಸಿಎಫ್ ಚಾಲನೆ

ಬೆಳಗಾವಿ ಜುಲೈ 9:ಅರಣ್ಯ ಇಲಾಖೆ, ಕೆಎಸ್ ಆರ್ ಪಿ ಹಾಗೂ ರೋಟರಿ ಕ್ಲಬ್ ಆಫ್ ಬೆಳಗಾಂ ನಾರ್ತ್ ಸಂಯುಕ್ತ ಆಶ್ರಯದಲ್ಲಿ ನಗರದ KSRP ಆವರಣದಲ್ಲಿ ನೂರಾರು ಗಿಡಗಳನ್ನು ನೆಡಲಾಯಿತು.

ಬೆಳಗಾವಿ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪಿ. ಬಿ. ಕರುಣಾಕರನ್ ವನಮಹೋತ್ಸವಕ್ಕೆ ಚಾಲನೆ ನೀಡಿದರು.

ಮರವಾಗಿ ಬೆಳೆದ 500 ಬ್ರಹತ್ ಸಸಿಗಳನ್ನು ಇಂದು ಎಲ್ಲೆಡೆ ನೆಡಲಾಗುತ್ತಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಗಿಡಗಳಿಗೆ ಬೇಡಿಕೆ ಇಡುತ್ತಿದ್ದರಿಂದ ಹಸರೀಕರಣಕ್ಕೆ ಅನುವಾಗಿದೆ, ಬೆಳಗಾವಿ ಅರಣ್ಯ ವಿಭಾಗದಲ್ಲಿ ಮತ್ತು ಆಯ್ದ ಒಣ ಪ್ರದೇಶಗಳಲ್ಲಿ ಹೆಚ್ಚು ಸಸೀಕರಣಕ್ಕೆ ಒತ್ತು ಕೊಡಲಾಗಿದೆ ಎಂದು ಕರುಣಾಕರನ್ ತಿಳಿಸಿದರು.

ಹಲವು ಜಾತಿಯ ಹಣ್ಣಿನ ಮರಗಳನ್ನು ನೆಡಲಾಯಿತು.

ರೋಟರಿ ಕ್ಲಬ್ ಆಫ್ ಬೆಳಗಾವಿ ನಾರ್ತ್ ಅಧ್ಯಕ್ಷರು ಇರ್ಫಾನ್ ಶೇಖಲಿ ಇವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ  ಪಿಡಿಜಿ ಆನಂದ್ ಕುಲ್ಕರ್ಣಿ, AG AJAY HEDA  ಶಶಿಕಾಂತ್ ಸೂರ್ಯವಂಶಿ, ಸುರೇಶ್ ಎಸ, ಜಿಎಸ್ ಪಾಟೀಲ್ ಇನ್ನಿತರ ರೋಟರಿ ಕಾರ್ಯಕರ್ತರು ಉಪಸ್ಥಿತರಿದ್ದರು.

ಡಿಸಿಎಫ್ ಎಂ. ವಿ. ಅಮರನಾಥ, ಕೆಎಸ್ ಆರ್ ಪಿ ಕಮಾಂಡಂಟ್ ಹಮ್ಜಾ ಹುಸೇನ್, ಎಸಿಎಫ್ ಎಂ‌. ಬಿ. ಕುಸನಾಳ, ಆರ್ ಎಫ್ ಓ ಆರ್. ಎಚ್. ಡೊಂಬರಗಿ, ವಿನಯ ಗೌಡರ ಸೇರಿದಂತೆ ಇತರರು ಉಪಸ್ಥಿತರಿದ್ದರು.