ಲೋಕದರ್ಶನ ವರದಿ
ಬೆಳಗಾವಿ 17: ವಿದ್ಯಾಥರ್ಿಗಳು ವಿಜ್ಞಾನ ವಿಷಯದ ಮೂಲ ಆಧಾರಗಳನ್ನು ಬಳಸಿ ಇಂಜನೀಯರಿಂಗ್ ಅಭ್ಯಾಸ ತಿಳಿದುಕೊಳ್ಳಬೇಕು. ತಮ್ಮ ವಿಭಾಗಗಳಲ್ಲಿ ಧೃಡಸಂಕಲ್ಪ ಮಾಡಿ ಕೌಶಲ್ಯತೆ ಗಳಿಸಿ, ಓದುವ ಹವ್ಯಾಸವನ್ನು ಹೆಚ್ಚಿಗೆ ಮಾಡಿ, ರಾಕೇಟ, ವೈಮಾನಿಕ ಕ್ಷೇತ್ರಗಳಲ್ಲಿ ವಿಫುಲವಾದ ಅವಕಾಶಗಳನ್ನು ಸದುಪಯೋಗ ಪಡೆಸಿಕೊಳ್ಳಬೇಕು. ಸಣ್ಣ ಪ್ರೊಜೆಕ್ಟಗಳನ್ನು ಮೊದಲಿನಿಂದಲೇ ಪ್ರಾರಂಭಿಸಿ ಸಮಾಜಕ್ಕೆ ಉಪಯೋಗವಾಗುವ ಹಾಗೆ ಅಭ್ಯಸಿಸಬೇಕೆಂದು ಪ್ರಾತ್ಯಕ್ಷಿಕೆಗಳ ಮೂಲಕ ಪ್ರಾಧ್ಯಾಪಕರು, ಪಾಲಕರು ಮತ್ತು ವಿದ್ಯಾಥರ್ಿಗಳ ಮನಸ್ಸಿಗೆ ತಟ್ಟುವ ಹಾಗೆ ಧಾರವಾಡದ ಶಿಕ್ಷಣ ತಜ್ಞ ಮಹೇಶ ಎಂ. ಮಾಶಾಳ ಸವಿಸ್ತಾರವಾಗಿ ತಿಳಿಸಿದರು.
ಅವರು ಅಂಗಡಿ ತಾಂತ್ರಿಕ ಹಾಗೂ ವ್ಯವಸ್ಥಾಪನಾ ಮಹಾವಿದ್ಯಾಲಯದಲ್ಲಿ ನಡೆದ 2019-20 ನೇ ಸಾಲಿನ ಪ್ರಥಮ ವರ್ಷದ ಇಂಜನೀಯರಿಂಗ್ ವಿದ್ಯಾಥರ್ಿಗಳ ಸ್ವಾಗತ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಕಾಲೇಜಿನ ಪ್ರಾಚಾರ್ಯ ಡಾ. ಸಂಜಯ ಪೂಜಾರಿ ಮಾತನಾಡಿ, ಸಂಸ್ಥೆಯು ಇತ್ತೀಚಿನ ವರ್ಷಗಳಲ್ಲಿ ಐಐಟಿ ಮುಂಬೈ, ಮದ್ರಾಸ, ಖರಗಪುರ ಮುಂತಾದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳೊಂದಿಗೆ ಶೈಕ್ಷಣಿಕ ಒಡಂಬಡಿಕೆ ಮಾಡಿಕೊಂಡಿದ್ದನ್ನು ತಿಳಿಸಿ ವಿದ್ಯಾಥರ್ಿಗಳು ಅದನ್ನು ತಮ್ಮ ಸರ್ವತೋಮುಖ ಅಭಿವೃದ್ಧಿಗಾಗಿ ಬಳಸಿಕೊಳ್ಳಬೇಕೆಂದು ಒತ್ತಿ ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಉಪಾದ್ಯಕ್ಷೆ ಮಂಗಲ ಅಂಗಡಿ ಪ್ರಥಮ ವರ್ಷದ ವಿದ್ಯಾಥರ್ಿಗಳಿಗೆ ಶುಭ ಕೋರಿದರು.
ಈ ಸಂದರ್ಭದಲ್ಲಿ ಆಡಳಿತಾಧಿಕಾರಿ ರಾಜು ಜೋಶಿ, ಡಾ. ಆನಂದ ದೇಶಪಾಂಡೆ, ಡಾ. ಬಿ.ಟಿ. ಸುರೇಶ ಬಾಬು, ಡಾ. ಬಸವರೆಡ್ಡಿ, ಪ್ರೊ. ಸಾರಿಖಾ ಪಾವಶೆ, ಪ್ರೊ. ಗಜಾನನ ತುಡವೇಕರ, ಪ್ರೊ. ಅನುರಾಧಾ ಹೂಗಾರ, ಪ್ರೊ. ಅಮರ ಬ್ಯಾಕೋಡಿ, ಡಾ. ಪಿ.ಬಿ. ಮುತಾಲಿಕ ದೇಸಾಯಿ, ಪ್ರೊ. ಕಿರಣ ಪೋತದಾರ, ಪ್ರೊ. ಸಾಗರ ಬಿಜರ್ೆ, ಪ್ರೊ. ವಸಂತ ಉಪಾಧ್ಯೆ, ಡಾ. ವಿಜಯ ಕುಲಕಣರ್ಿ ಸೇರಿದಂತೆ ಎಲ್ಲ ವಿಭಾಗಗಳ ಪ್ರಾಧ್ಯಾಪಕರು, ಸಿಬ್ಬಂದಿ, ವಿದ್ಯಾಥರ್ಿಗಳು ಹಾಗೂ ಪಾಲಕರು ಉಪಸ್ಥಿತರಿದ್ದರು. ಡಾ. ಸಂಜಯ ಪೂಜಾರಿ ಸ್ವಾಗತಿಸಿದರು. ಪ್ರೊ. ವಷರ್ಾ ದೇಶಪಾಂಡೆ ಪರಿಚಯಿಸಿದರು. ನಿಖಿತಾ ನಾಡಗೌಡ ನಿರೂಪಿಸಿದರು. ಪ್ರೊ. ವಿಜಯ ಕುಂಬಾರ ವಂದಿಸಿದರು.