ಜ್ಞಾನವನ್ನು ಹೊಂದಿರುವ ಸಮಾಜ ದಿವ್ಯಾಂಗ ಸಮಾಜ : ಗದ್ದಿಗೌಡರ

Ceremony to distribute aids and equipment to the disabled

ಹಿರಿಯ ನಾಗರಿಕ ್ಘ ದಿವ್ಯಾಂಗರಿಗೆ ಸಾಧನ ಸಲಕರಣೆಗಳ ವಿತರಣೆ ಸಮಾರಂಭ 

ಬಾಗಲಕೋಟೆ 28: ಬದುಕಿನಲ್ಲಿ ಅಂಗವಿಕಲತೆ, ದೈಹಿಕ ತೊಂದರೆಗಳಿಂದ ಕೊರತೆ ಎಂಬ ಭಾವನೆ ಉಂಟಾಗಿದ್ದರೂ ಮಾನಸಿಕವಾಗಿ ಬಹಳಷ್ಟು ಜ್ಞಾನವನ್ನು ಹೊಂದಿರುವ ಸಮಾಜ ಇದ್ದರೆ, ಅದು ದಿವ್ಯಾಂಗ ಸಮಾಜ ಎಂದು ಸಂಸದ ಪಿ.ಸಿ.ಗದ್ದಿಗೌಡರ ಹೇಳಿದರು. ನವನಗರದ ಕಲಾಭವನದಲ್ಲಿ ಬುಧವಾರ ಸಾಮಾಜಿಕ ಅಧಿಕಾರಿತ ಶಿವಿರ್, ಭಾರತ ಸರಕಾರದ ಅಡಿಪ್ ಯೋಜನೆಯಡಿಯಲ್ಲಿ ದಿವ್ಯಾಂಗ ಜನರಿಗೆ ಮತ್ತು ರಾಷ್ಟ್ರೀಯ ವಯೋಶ್ರೀ ಯೋಜನೆಯಡಿ ಹಿರಿಯ ನಾಗರಿಕರಿಗೆ ಉಚಿತವಾಗಿ ಸಾಧನ ಸಲಕರಣೆಗಳನ್ನು ವಿತರಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಜೀವನ ಸಾಗಿಸುವ ಪ್ರತಿಯೊಬ್ಬರಲ್ಲಿ ಒಂದೊಂದು ಜ್ಞಾನವಿರುತ್ತದೆ. ಒಂದನ್ನು ಕೊಟ್ಟು ಮತ್ತೊಂದನ್ನು ದೇವರು ನೀಡಿರುತ್ತಾರೆ ಎಂದರು. 

ಅಂಗವಿಕಲರು ಎಂದು ಕರೆದರೆ ನೋವನ್ನು ತರುತ್ತದೆ ಎಂಬ ದೃಷ್ಟಿಯಿಂದ ಪ್ರಧಾನಮಂತ್ರಿ ನರೇಂದ್ರ ಮೋದಿಜಿಯವರು ದಿವ್ಯಾಂಗರು ಎಂದು ನಾಮಕರಣ ಮಾಡಿದ್ದಾರೆ. ಇಲಾಖೆಯ ಅಧಿಕಾರಿಗಳು ಮೇಲಿಂದ ಮೇಲೆ ಜಿಲ್ಲೆಯಲ್ಲಿ ಸರ್ವೆಕಾರ್ಯ ಕೈಗೊಂಡು ಕೇಂದ್ರ ಹಾಗೂ ರಾಜ್ಯ ಸರಕಾರದಿಂದ ವಿವಿಧ ಇಲಾಖೆಯಿಂದ ದೊರೆಯುವ ಸೌಲಭ್ಯಗಳನ್ನು ಒದಗಿಸುವ ಕಾರ್ಯವಾಗಬೇಕು. ದಿವ್ಯಾಂಗರಿಗಾಗಿಯೇ ವಿಶೇಷವಾದ ಸೌಲಭ್ಯಗಳಿಗೆ. ಅವುಗಳನ್ನು ದೊರೆಕಿಸುವಲ್ಲಿ ಜನಪ್ರತಿನಿಧಿಗಳು ಅಧಿಕಾರಿಗಳು ಸಿದ್ದರಿದ್ದೇವೆ. ಇವುಗಳ ಸದುಪಯೋಗವನ್ನು ಪಡೆದುಕೊಳ್ಳಲು ತಿಳಿಸಿದರು. 

ರಾಷ್ಟ್ರೀಯ ವಯೋ ಯೋಜನೆ ಅಡಿಯಲ್ಲಿ ಹಿರಿಯ ನಾಗರಿಕರಿಗೂ ಸಹ ಸಾಧನ ಸಲಕರಣೆಗಳನ್ನು ನೀಡಲಾಗುತ್ತಿದೆ. ವೈಜ್ಞಾನಿಕವಾಗಿ ತಯಾರಿಸಲ್ಪಟ್ಟ ಸಾಧನ ಸಲಕರಣೆಗಳು ಉಪಯುಕ್ತವಾಗಲಿವೆ. ಇವುಗಳ ಬಳಕೆಯಿಂದ ಸಾಮಾನ್ಯ ಜನರ ಹಾಗೆ ತಾವು ಸಹ ಮುಖ್ಯವಾಹಿಸಿಗೆ ಬರಬಹುದಾಗಿದೆ. ಅಲಿಂಕೋ ಸಂಸ್ಥೆಯಿಂದ ನೀಡಲಾಗಿರುವ ಸಲಕರಣೆಗಳನ್ನು ಒಳ್ಳೇಯ ರೀತಿಯಿಂದ ಇಟ್ಟುಕೊಳ್ಳಬೇಕು. ಇದರಿಂದ ಅವುಗಳ ಬಳಕೆ ಮೂಲಕ ಸಮಾಜದಲ್ಲಿ ಮುಂದೆ ಬರಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.   

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಹಾಗೂ ಬಿಟಿಡಿಎ ಅಧ್ಯಕ್ಷ ಎಚ್‌.ವಾಯ್‌.ಮೇಟಿ ಮಾತನಾಡಿ ಕೇಂದ್ರ ಹಾಗೂ ರಾಜ್ಯ ಸರಕಾರದಿಂದ ದಿವ್ಯಾಂಗರಿಗೆ ವಿವಿಧ ಸಾಧನೆ ಸಲಕರಣೆಗಳನ್ನು ನೀಡಿದ್ದು, ಅವುಗಳ ಸದುಪಯೋಗ ಪಡೆದುಕೊಂಡು ಸಾಮಾನ್ಯ ಜನರಂತೆ ಸಮಾಜದಲ್ಲಿ ಮುಂದೆ ಬರಬೇಕು. ಅಂಗವಿಕಲರಿಗೆ ದೇವರು ಕೊರತೆಯ ಜೊತೆಗೆ ಅದ್ಬುತವಾದ ಶಕ್ತಿಯನ್ನು ಕೊಟ್ಟಿರುತ್ತಾನೆ. ಅದನ್ನು ಗುರುತಿಸಿಕೊಂಡು ಮುಖ್ಯವಾಹಿಸಿನಿಗೆ ಬರಲು ತಿಳಿಸಿದರು. 

ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಮಾತನಾಡಿ ವಿಕಲಚೇತನರಿಗೆ ಅಗತ್ಯತೆಗೆ ಅನುಗುಣವಾಗಿ ಕೇಂದ್ರ ಸರಕಾರ ಅಲಿಂಪೋ ಸಂಸ್ಥೆಯ ಮೂಲಕ ವಿವಿಧ ಸಾಧನ ಸಲಕರಣೆಗಳನ್ನು 8 ನೂರಕ್ಕು ಹೆಚ್ಚು ಜನರಿಗೆ ವಿತರಣೆ ಮಾಡಲಾಗುತ್ತಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು. ವಿಕಲಚೇತನರಾಗಿ ಹುಟ್ಟಿತ್ತಿರುವುದು ಅವರ ಸಮಸ್ಯೆ ಅಲ್ಲ. ಮೂಡಬಂಬಿಕೆ ಕಡಿಮೆಯಾಗಬೇಕು. ಒಳ ಸಂಬಂಧಗಳಲ್ಲಿ ಮದುವೆಯಾಗುವದನ್ನು ನಿಲ್ಲಿಸುವ ಮೂಲಕ ವಿಕಲತೆಯನ್ನು ಕಡಿಮೆ ಮಾಡಬಹುದಾಗಿದೆ. ಬಾಲ್ಯವಿವಾಹ ಆಗುವದನ್ನು ತಡೆಯಬೇಕು. ವಿಕಲಚೇತನರಲ್ಲಿ ನೈತಿಕ ಸ್ಥೈರ್ಯ ಕುಗ್ಗಿಸುವ ಕೆಲಸ ಯಾರು ಮಾಡಬಾರದು ಎಂದರು. 

ಪ್ರಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ವಿತಕಲಚೇತನರ ಕಲ್ಯಾಣಾಧಿಕಾರಿ ಸವಿತಾ ಕಳೆ ಕೇಂದ್ರ ಸರಕಾರದ ಅಡಿಪ್ ಯೋಜನೆಯಡಿ ಜಿಲ್ಲೆಯಲ್ಲಿ 10.39 ಲಕ್ಷ ರೂ.ಗಳ ವೆಚ್ಚದಲ್ಲಿ 653 ವಿಕಲಚೇತನರಿಗೆ 1210 ಸಾಧನ ಸಲಕರಣೆಗಳು ಹಾಗೂ 92.16 ಲಕ್ಷ ವೆಚ್ಚದಲ್ಲಿ 124 ಹಿರಿಯ ನಾಗರಿಕರಿಗೆ 615 ಸಾಧನೆ ಸಲಕರಣೆಗಳನ್ನು ವಿತರಿಸಲಾಗುತ್ತಿದೆ. ವಿಕಲಚೇತನರು ಸಾಮಾಜಿಕವಾಗಿ ಮುಖ್ಯವಾಹಿನಿಗೆ ಬರಲು ಸಾಧನ ಸಲಕರಣೆಗಳು ಅನುಕೂಲವಾಗಲಿವೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ದಿವ್ಯಾಂಗರಿಗೆ ವಿವಿಧ ಸಾಧನ ಸಲಕರೆಗಳನ್ನು ವಿತರಿಸಲಾಯಿತು. 

ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕ ಪ್ರಭಾಕರ ಕೆ, ಅಲಿಂಕೋ ಸಂಸ್ಥೆಯ ಮುಖ್ಯಸ್ಥ ಅಂಕಿತ ಸೇರಿದಂತೆ ಇತರರು ಉಪಸ್ಥಿತರಿದ್ದರು.