ಗದಗ 08: ಭಾರತ ಚುನಾವಣಾ ಆಯೋಗದ ನಿದರ್ೇಶನದಂತೆ ಜಿಲ್ಲೆಯಲ್ಲಿ ಕೈಕೊಳ್ಳಲಾಗಿರುವ ನಾಲ್ಕು ವಿಧಾನಸಭಾ ಮತಕ್ಷೇತ್ರಗಳ ಮತದಾರ ಪಟ್ಟಿಯ ವಿಶೇಷ ಪರಿಷ್ಕರಣೆಯ ಬಾಕಿ ಕಾರ್ಯವನ್ನು ಸೋಮವಾರದೊಳಗಾಗಿ ಪೂರ್ಣಗೊಳಿಸಲು ಗದಗ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಖಡಕ ನಿದರ್ೇಶನ ನೀಡಿದ್ದಾರೆ.
ಮುಂಡರಗಿ ತಹಶೀಲ್ದಾರ ಕಚೇರಿಗೆ ರವಿವಾರ ಭೇಟಿ ನೀಡಿ ತಾಲೂಕಿನ ಮತದಾರ ಪಟ್ಟಿ ಪರಿಷ್ಕರಣೆ ಕುರಿತಂತೆ ಅಧಿಕಾರಿ ಹಾಗೂ ಸಿಬ್ಬಂದಿಗಳು ನಿರ್ವಹಿಸುತ್ತಿರುವ ಕಾರ್ಯವನ್ನು ಪರಿಶೀಲಿಸಿ ಪರಿಷ್ಕರಣೆ ಕಾರ್ಯವನ್ನು ದಕ್ಷತೆಯಿಂದ ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಲು ಜಿಲ್ಲಾಧಿಕಾರಿ ಸೂಚಿಸಿದರು. ಉಪ ತಹಶೀಲ್ದಾರರುಗಳಾದ ಡಿ.ಎಸ್.ಕನ್ನೂರ, ಎಸ್.ಎಚ್.ಬಿಚ್ಚಾಲಿ, ಶಿರಸ್ತೆದಾರ ಬಾಳೆಹೊಸೂರ ಹಾಗೂ ಸಿಬ್ಬಂದಿ ಇದ್ದರು.
ಭಾರತ ಚುನಾವಣಾ ಆಯೋಗದ ಗದಗ ಜಿಲ್ಲೆ ಮತದಾರ ಪಟ್ಟಿ ವೀಕ್ಷಕರು ಗದಗದಲ್ಲಿ ಶನಿವಾರ ನಡೆದ ಸಭೆಯಲ್ಲಿ ಜಿಲ್ಲೆಯಲ್ಲಿ ಬಾಕಿ ಉಳಿದಿರುವ ಒಟ್ಟು 18,831 ಪರಿಷ್ಕರಣೆ ಗಳನ್ನು ಪೂರ್ಣಗೊಳಿಸಲು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಅಲ್ಲದೇ ಕರಡು ಮತದಾರ ಪಟ್ಟಿ ಪ್ರಕಟನೆ ವೇಳಾಪಟ್ಟಿಯನ್ನು ಕೂಡಾ ಚುನಾವಣಾ ಆಯೋಗ ಪ್ರಕಟಿಸಿದ್ದು ಎಲ್ಲ ತಹಶೀಲ್ದಾರರು ತಮ್ಮ ವ್ಯಾಪ್ತಿಯಲ್ಲಿನ ಮತದಾರ ಪರಿಷ್ಕರಣೆ ಕಾರ್ಯ ಪೂರ್ಣಗೊಳಿಸಲು ತಿಳಿಸಿರುವ ಜಿಲ್ಲಾಧಿಕಾರಿಗಳು ತಪ್ಪಿದಲ್ಲಿ ಶಿಸ್ತುಕ್ರಮ ಜರುಗಿಸುವ ಎಚ್ಚರಿಕೆ ನೀಡಿದ್ದಾರೆ. ಜಿಲ್ಲಾಧಿಕಾರಿ ಎಂ. ಜಿ. ಹಿರೇಮಠ ಗದಗ ತಹಶೀಲ್ದಾರ ಕಚೇರಿಗೂ ಭೇಟಿ ನೀಡಿ ಮತದಾರ ಪರಿಷ್ಕರಣೆ ಪ್ರಕ್ರಿಯೆ ವೀಕ್ಷಿಸಿದರು.