ಬಾಗಲಕೋಟೆ 27: ಜಿಲ್ಲೆಯ ಗ್ರಾಮೀಣ, ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿ ರಸ್ತೆಕಾಮಗಾರಿಗಳ ಅನುಷ್ಠಾನ ಕಾರ್ಯ ತೀರ್ವಗೊಳಿಸುವಂತೆ ಸಂಸದ ಪಿ.ಸಿ.ಗದ್ದಿಗೌಡರ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾ ಪಂಚಾಯತ ನೂತನ ಸಭಾಭವನದಲ್ಲಿ ಮಂಗಳವಾರ ಜರುಗಿದ 2024-25ನೇ ಸಾಲಿನ ನಾಲ್ಕನೇ ತ್ರೈಮಾಸಿಕ ದಿಶಾ ಪ್ರಗತಿ ಪರೀಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಕೈಗೊಂಡ ಒಟ್ಟು 34 ರಸ್ತೆ ಕಾಮಗಾರಿಗಳ ಪೈಕಿ 29 ಪೂರ್ಣಗೊಂಡಿದ್ದು, 208 ಕಿಮೀ ಪೈಕಿ 1621 ಕಿ.ಮೀ ಮಾತ್ರ ಪೂರ್ಣಗೊಂಡಿದೆ. ಬಾಕಿ ರಸ್ತೆಕಾಮಗಾರಿ ತೀರ್ವಗತಿಯಲ್ಲಿ ಕೈಗೊಂಡು ಪೂರ್ಣಗೊಳಿಸುವಂತೆ ಸಹಾಯಕ ಕಾರ್ಯನಿರ್ವಾಹಕ ಇಂಜೀನೀಯರ್ ಅಜಿತ್ ಸೂಚಿಸಿದರು.
ಶಿರೂರದಿಂದ ಗದ್ದನ ಕೇರಿಕ್ರಾಸ್‌ವರೆಗೆ ಕೈಗೊಂಡ 24 ಕಿ.ಮೀ ಚತುಷ್ಪಥ ರಸ್ತೆಕಾಮಗಾರಿ ಕಳೆದ 4 ವರ್ಷಗಳಿಂದ ನಡೆಯುತ್ತಿದ್ದರು, ಇಲ್ಲಿಯವರೆಗೆ ಕಾಮಗಾರಿ ಪೂರ್ಣಗೊಂಡಿರುವದಿಲ್ಲ. ಅದೇರೀತಿ ಪಟ್ಟದ ಕಲ್ಲದಿಂದ ಶಿರೂರವರೆಗಿನ 26 ಕಿ.ಮೀ ರಸ್ತೆಕಾಮಗಾರಿಯು ಸಹ ವಿಳಂಬವಾಗುತ್ತಿದೆ. ವಿಳಂಬಕ್ಕೆ ಕಾರಣವಾದರೂ ಏನು? ಏಕೆ ಕಾರ್ಯ ಸ್ಥಗತಿಗೊಂಡಿದೆ ಎಂಬ ಪ್ರಶ್ನೆ ಕೇಳಿದರು. ಯಾವುದೇ ರೀತಿಯ ಸಬೂಬು ಹೇಳದೇ ಹಿಂದಿನ ಗುತ್ತಿಗೆದಾರರು ಕೆಲಸ ಮಾಡದಿದ್ದರೆ, ಬೇರೆಯವರಿಗೆ ಹಸ್ತಾಂತರ ಮಾಡಿ ರಸ್ತೆಕಾಮಗಾರಿ ಪೂರ್ಣಗೊಳಿಸುವಂತೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ವಿಜಯಕುಮಾರ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಗ್ರಾಮೀಣ ಕುಡಿಯುವ ನೀರಿನ ಯೋಜನೆಯಡಿ ಕೈಗೊಂಡ ಕಾಮಗಾರಿಯಲ್ಲಿ ರಾಜ್ಯ ಹಾಗೂ ಹೆದ್ದಾರಿರಸ್ತೆ ಪಕ್ಕದಲ್ಲಿ ಪೈಪಲೈನ್ ಮಾಡಲುಜಾಗ ಗುರುತಿಸಿಕೊಡುವಲ್ಲಿ ವಿಳಂಬನೆಯಿಂದ ಕಾಮಗಾರಿ ಸ್ಥಗಿತಗೊಂಡಿದೆ. ಬೇಗನೇ ಸಂಬಂಧಿಸಿದ ಅಧಿಕಾರಿಗಳಿಂದ ಎನ್.ಓ.ಸಿ ಕೊಡಿಸುವಂತೆ ಜಿ.ಪಂ ಸಿಇಓ ಶಶಿಧರ ಕುರೇರ ಕೇಳಿದಾಗ ಇದಕ್ಕೆ ಧ್ವನಿ ಕೂಡಿದ ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ ಕುಡಿಯುವ ನೀರಿನಕಾಮಗಾರಿ ವಿಳಂಬ್ಕಕೆ ಅವಕಾಶ ಕೊಡದೇ ಅಧಿಕಾರಿಗಳು ಪೈಪಲೈನ್ ಮಾಡಲು ತುರ್ತಾಗಿ ಅನುಕೂಲ ಮಾಡಿಕೊಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮುಂಗಾರು ಪ್ರಾರಂಭದ ಪೂರ್ವದಲ್ಲಿಯೇ ಮಳೆಯಾಗುತ್ತಿದ್ದು, ಶಾಲಾ ಕೊಠಡಿಗಳನ್ನು ಸುಸ್ಥಿತಿಯಲ್ಲಿ ಇಡಬೇಕು. ಸಣ್ಣ ಪುಟ್ಟ ದುರಸ್ಥಿಗಳು ಮಾಡಿಕೊಂಡು ಶಾಲಾ ಮಕ್ಕಳಿಗೆ ಯಾವುದೆ
ರೀತಿಯ ತೊಂದರೆಯಾಗದಂತೆ ಮುತು ವರ್ಜಿವಹಿಸಲು ತಿಳಿಸಿದರು. ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಕಂಡುಬರುತ್ತಿದ್ದು, ಆರೋಗ್ಯ ಇಲಾಖೆಯಿಂದ ನೀಡಿದ ಸಲಹೆ ಪಾಲಿಸುವಂತೆ ಸೂಚನೆ ನೀಡಿದರು. ಬಾಲ್ಯ ವಿವಾಹ ತಡೆಗೆ ಜನರಲ್ಲಿ ಅರಿವು ಮೂಡಿಸಬೇಕು. ಸಾಮಾಜಿ ಕಜಾಲತಾಣದಲ್ಲಿ ಬಾಲ್ಯವಿವಾಹದಿಂದ ಮಕ್ಕಳ ಮೇಲಾಗುವ ಆರೋಗ್ಯದ ದುಷ್ಪರಿಣಾಮದ ಬಗ್ಗೆ ಜಾಗೃತಿ ಮೂಡಿಸುವ ಕೆಲಸವಾಗಬೇಕು ಎಂದರು.
ಕೃಷಿ ಇಲಾಖೆಯಲ್ಲಿರುವ ಪ್ರತಿಯೊಂದು ಯೋಜನೆಗಳು ರೈತರಿಗೆ ತಲುಪಿಸುವ ಕಾರ್ಯವಾಗಬೇಕು. ಈ ಹಂಗಾಮಿಗೆ ಉತ್ತಮ ಮಳೆಯಾಗುತ್ತಿದ್ದು, ರೈತರಿಗೆ ಬೇಕಾದಅಗತ್ಯ ಬೀಜ ಹಾಗೂ ಗೊಬ್ಬರಗಳ ದಾಸ್ತಾನಿಗೆ ಕ್ರಮಕೈಗೊಳ್ಳಲು ಸೂಚಿಸಿದರು.ಸಾವಯವ ಕೃಷಿಗೆ ಹೆಚ್ಚಿನ ಆದ್ಯತೆ ಕೊಡುವ ಮೂಲಕ ಜಿಲ್ಲೆಯಸವಳು ಜವಳು ಆಗುವದನ್ನು ತಪ್ಪಿಸಬೇಕು. ತೋಟಗಾರಿಕೆ ಇಲಾಖೆ ಈ ನಿಟ್ಟಿನಲ್ಲಿ ಕೆಲಸ ಮಾಡಲು ಮುಂದಾಗಬೇಕು. ಜೆ.ಜೆ.ಎಂ ಯೋಜನೆಯಡಿ ಸಾಕಷ್ಟು ದೂರುಗಳು ಬರುತ್ತಿವೆ ಸರಿಪಡಿಸಲು ತಿಳಿಸಿದರು. ನರೇಗಾದಡಿ ಹೆಚ್ಚಿನ ಕೆಲಸ ಕೈಗೊಳ್ಳಲು ತಿಳಿಸಿದ ಸಂಸದರು ಕೂಲಿ ಆದಾರಿತ ಕೆಲಸ ಕೈಗೊಳ್ಳಲಾಗುತ್ತಿದ್ದು, ಸಮೂಹ ಶೌಚಾಲಯ ನಿರ್ಮಾಣಕ್ಕೆ ನರೇಗಾದಡಿ ಅನುಮತಿ ದೊರೆಯುವಂತೆ ಮಾಡಲು ಸಭೆಯಲ್ಲಿ ಕೇಳಿಕೊಂಡರು.
ರೈಲ್ವೆ ಇಲಾಖೆಯಲ್ಲಿ ಬಹಳಷ್ಟು ಕೆಲಸ ಉಳಿದಿವೆ. ಈ ಭಾಗದಜನರ ಮಹತ್ವದ ಯೋಜನೆ ಬಾಗಲಕೋಟೆ ಕುಡಜಿರೈಲು ಮಾರ್ಗದಕಾರ್ಯದಲ್ಲಿ ಮುತುವರ್ಜಿ ವಹಿಸಿ ಕೆಲಸ ಮಾಡಿದಲ್ಲಿ ಜನರಿಗೆ ಅನುಕೂಲವಾಗಿದೆ. ಭೂಮಿ ಸ್ವಾಧೀನ ಪಡಿಸಿಕೊಡುವಲ್ಲಿ ಜಿಲ್ಲಾಧಿಕಾರಿಗಳಿಂದ ಹಿಡಿದು ಎಲ್ಲ ಅಧಿಕಾರಿಗಳು ಸಹಕಾರ ನೀಡಿದ್ದಾರೆ. ಕೆಲಸ ಮಾಡಲು ಏನು ತೊಂದರೆ ನಿಮಗೆ, ಮೇಲಾಧಿಕಾರಿಗಳು ಸಭೆಗೆ ಏಕು ಬರುತ್ತಿಲ್ಲವೆಂದು ಸಭೆಗೆ ಆಗಮಿಸ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರಿಗೆ ಪ್ರಶ್ನೆ ಕೇಳಿದರು. ಮುಂದಿನ ಸಭೆಯಲ್ಲಿ ಮೇಲಾಧಿಕಾರಿಗಳ ಬರದೆ ಇದ್ದಲ್ಲಿ ಶಿಸ್ತು ಕ್ರಮಕ್ಕೆ ಶಿಫಾರಸ್ಸು ಮಾಡಲಾಗುವುದೆಂದು ತಿಳಿಸಿದರು. ನಂತರ ಇತರೆ ಇಲಾಖೆಯ ಪ್ರಗತಿ ಪರೀಶೀಲನೆ ನಡೆಸಿದರು.
ಸಭೆಯಲ್ಲಿ ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ, ವಿಧಾನ ಪರಿಷತ್ ಶಾಸಕ ಪಿ.ಎಚ್.ಪೂಜಾರ, ನಾಮನಿರ್ದೇಶಿತ ಸದಸ್ಯರು ಸೇರಿದಂತೆ ಜಿಲ್ಲಾಧಿಕಾರಿ ಜಾನಕಿ ಕೆ.ಎಂ, ಜಿ.ಪಂ ಸಿಇಓ ಶಶಿಧರ ಕುರೇರ, ಉಪ ಕಾರ್ಯದರ್ಶಿ ಎನ್.ವಾಯ್.ಬಸರಿಗಿಡದ, ಮುಖ್ಯಯೋಜನಾಧಿಕಾರಿ ಪುನಿತ್‌ಆರ್. ಮುಖ್ಯ ಲೆಕ್ಕಾಧಿಕಾರಿ ಸಿದ್ದರಾಮೇಶ್ವರ ಉಕ್ಕಲಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.