ಫ್ಲೋರಿಡಾ, ಮಾ 19 ಕೊರೊನಾ ವೈರಸ್ ಸೋಂಕು ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಪುರುಷ ಮತ್ತು ಮಹಿಳಾ ಟೆನಿಸ್ ಟೂರ್ನಿಗಳನ್ನು ಜೂನ್ 7ರವರೆಗೆ ಅಮಾನತು ಮುಂದುವರಿಸಲಾಗಿದೆ.
ಈ ಕುರಿತು ಜಂಟಿ ಹೇಳಿಕೆ ಬಿಡುಗಡೆಗೊಳಿಸಿರುವ ಅಸೋಸಿಯೇಷನ್ ಆಫ್ ಟೆನಿಸ್ ಪ್ರೊಫೆಸನಲ್ (ಎಟಿಪಿ) ಮತ್ತು ವುಮೆನ್ ಟೆನಿಸ್ ಅಸೋಸಿಯೇಷನ್ (ಡಬ್ಲ್ಯಟಿಎ), ಸುರಕ್ಷತೆಯನ್ನು ಪರಿಗಣಿಸಿ ಕೋವಿಡ್-19 ಮುಂದುವರಿದಿರುವ ಕಾರಣ ಎಲ್ಲ ಎಟಿಪಿ ಮತ್ತು ಡಬ್ಲ್ಯೂಟಿಎ ಟೂರ್ ಗಳನ್ನು ಜೂನ್ 7ರವರೆಗೆ ಅಮಾನತುಗೊಳಿಸಲಾಗಿದೆ ಎಂದು ತಿಳಿಸಿವೆ.
ಸ್ಟ್ರಾಸ್ ಬರ್ಗ್ ಮತ್ತು ರಾಬಟ್ ನಲ್ಲಿನ ಡಬ್ಲ್ಯುಟಿ ಜತೆಗೆ ಮ್ಯಾಡ್ರಿಡ್ ಮತ್ತು ರೋಮ್ ನಲ್ಲಿನ ಎಟಿಪಿ ಹಾಗೂ ಡಬ್ಲ್ಯುಟಿಎ ಹಾಗೂ ಮ್ಯೂನಿಚ್ , ಎಸ್ಟೊರಿಯಲ್, ಜಿನಿವಾ ಮತ್ತು ಲಿಯಾನ್ ನಲ್ಲಿನ ಎಟಿಪಿ ಟೂರ್ ಗಳನ್ನು ಮುಂದೂಡಲಾಗಿದೆ.
ಎಟಿಪಿ ಚಾಲೆಂಜರ್ ಟೂರ್ ಮತ್ತು ಐಟಿಎಫ್ ವಿಶ್ವ ಟೆನಿಸ್ ಟೂರ್ ಸೇರಿದಂತೆ ಪ್ರೊಫೆಸನ್ ಟೆನಿಸ್ ಋತುವನ್ನು ಜೂನ್ 7ರವರೆಗೆ ಮುಂದೂಡಲಾಗಿದೆ ಎಂದು ಜಂಟಿ ಹೇಳಿಕೆಯಲ್ಲಿ ತಿಳಿಸಲಾಗಿದೆ. ಆದಾಗ್ಯೂ ಜೂನ್ ನಂತರ ಯಾವುದೇ ಟೂರ್ನಿ ನಡೆಯವ ಬಗ್ಗೆ ಖಚಿತ ಮಾಹಿತಿ ನೀಡಿಲ್ಲ. ಅಂದಿನ ಪರಿಸ್ಥಿತಿ ಅವಲೋಕಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಸಂಸ್ಥೆ ತಿಳಿಸಿದೆ.
ಈಗಾಗಲೇ ಮೇ 18ರಿಂದ ಜೂನ್ 7ರವರೆಗೆ ನಡೆಯಬೇಕಿದ್ದ ಫ್ರೆಂಚ್ ಓಪನ್ ಟೂರ್ನಿಯನ್ನು ಟೂರ್ನಿಯನ್ನು ಸೆಪ್ಟೆಂಬರ್ ಗೆ ಮುಂದೂಡಲಾಗಿದೆ.